ಮಲಯಾಳಿ ಉಡುಗೆಯಲ್ಲಿ ಜ್ಯೋತಿ ರೈ: ಸೀರೆ ತೊಟ್ಟ ಬಾರ್ಬಿ ಡಾಲ್ ಎಂದ ಫ್ಯಾನ್ಸ್!

First Published | Oct 11, 2024, 5:27 PM IST

ತಮ್ಮ ಬೋಲ್ಡ್ ಫೋಟೊಗಳಿಂದಲೇ ಸುದ್ದಿ ಮಾಡುತ್ತಿದ್ದ ಸದ್ಯ ತೆಲುಗಿನಲ್ಲಿ ಮಿಂಚಿತ್ತಿರುವ ಕನ್ನಡದ ಹುಡುಗಿ ಜ್ಯೋತಿ ರೈ ಇದೀಗ ಸಿಂಪಲ್ ಸೀರೆ ಲುಕ್ ನಲ್ಲಿ ಮನ ಸೆಳೆಯುತ್ತಿದ್ದಾರೆ. 
 

ಕನ್ನಡ ಕಿರುತೆರೆಯಲ್ಲಿ ತಮ್ಮ ಮುಗ್ಧ ಪಾತ್ರಗಳ ಮೂಲಕವೇ ಜನಮನ ಗೆದ್ದಿದ್ದ ನಟಿ ಜ್ಯೋತಿ ರೈ, (Jyothi Rai) ತೆಲುಗು ಕಿರುತೆರೆಗೆ ಕಾಲಿಟ್ಟ ನಂತ್ರ ಸಂಪೂರ್ಣವಾಗಿ ಬದಲಾಗಿದ್ದಾರೆ ಅನ್ನೋದು ನಿಜಾ.ಸಿಂಪಲ್ ಹುಡುಗಿಯಾಗಿ ಚೂಡಿದಾರ್ ಸೀರೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಜ್ಯೋತಿ ರೈ ಈಗಂತೂ ಸಖತ್ ಬೋಲ್ಡ್ ಆಗಿದ್ದಾರೆ. ಹೆಚ್ಚಾಗಿ ಬಾಡಿ ಹಗ್ಗಿಂಗ್ ಡ್ರೆಸ್, ಮಿನಿ ಡ್ರೆಸ್, ಶಾರ್ಟ್ಸ್ ಗಳಲ್ಲೇ ಕಾಣಿಸಿಕೊಳ್ತಿದ್ದಾರೆ. 
 

ತೆಲುಗು ಸೀರಿಯಲ್ ಗಳಲ್ಲೂ (Telugu serial) ಪೋಷಕ ನಟಿ ಪಾತ್ರ ಮಾಡ್ತಿದ್ದ ಜ್ಯೋತಿ ರೈ, ತೆಲುಗು ನಿರ್ದೇಶಕ ಪೂರ್ವಜ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟು ಯಾವಾಗ ತೆಲುಗು ವೆಬ್ ಸೀರಿಸ್ ಕಡೆ ಮುಖ ಮಾಡಿದ್ರೋ ಇವರೇನಾ ನಮ್ಮ ಕನ್ನಡ ಕಿರುತೆರೆ ನಟಿ ಜ್ಯೋತಿ ರೈ ಎನ್ನುವಷ್ಟು ಬದಲಾದ್ರು.
 

Tap to resize

ಆದರೆ ದಸರಾ ಹಬ್ಬದ ಕಾರಣದಿಂದಲೋ ಏನೋ ಜ್ಯೋತಿ ಎರಡು ದಿನದಿಂದ ಸಿಂಪಲ್ ಆಗಿ ಸೀರೆಯುಟ್ಟು, ಹಣೆಗೆ ಬೊಟ್ಟು ತೊಟ್ಟು, ಕೈಗಳಿಗೆ ಗಾಜಿನ ಬಳೆ, ಕುತ್ತಿಗೆಯಲ್ಲಿ ಕರಿಮಣಿ ಧರಿಸಿ, ಫೋಟೊ ಶೂಟ್ ಮಾಡಿಸಿದ್ದು, ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. 
 

ಅದರಲ್ಲೂ ಬಿಳಿ ಬಣ್ಣದ ಕೇರಳ ಸೀರೆಯುಟ್ಟು ಕೈಗಳಿಗೆ ಹಸಿರು ಗಾಜಿನ ಬಳೆ ಧರಿಸಿ, ಪ್ರಕೃತಿಯ ನಡುವೆ ನಿಂತು ತೆಗೆಸಿಕೊಂಡಿರುವ ಫೋಟೊ ಸಖತ್ ವೈರಲ್ ಆಗುತ್ತಿದೆ. ಹಿನ್ನೆಲೆಯಲ್ಲಿ ಹೊಳೆ ಇದೆ ಜೊತೆಗೆ ತೆಂಗಿನಮರಗಳ ಸಾಲು, ನೀಲಿ ಆಕಾಶ ಕೂಡ ಕಾಣಿಸುತ್ತಿದೆ. 
 

ಸೀರೆಯಲ್ಲಿ ನಟಿಯ ಅಂದಕ್ಕೆ ಮನಸೋತ ಅಭಿಮಾನಿಗಳು, ಈ ರೀತಿಯಾಗಿ ಸಿಂಪಲ್ ಆಗಿ ಸೀರೆಯುಟ್ರೆ ನೀವು ದೇವತೆ ತರ ಕಾಣಿಸ್ತೀರಿ, ಸೀರೆಯುಟ್ಟ ಬಾರ್ಬಿ ಡಾಲ್ ನೀವು, ದೇವಲೋಕದಿಂದ ಈ ಭೂಮಿಗೆ ಇಳಿದು ಬಂದಿರೋ ತ್ರಿಲೋಕ ಸುಂದರಿ ನೀವೇನಾ ಅಂತ ಕೇಳ್ತಿದ್ದಾರೆ. ಅಷ್ಟೇ ಅಲ್ಲ, ಯಾವಾಗ್ಲೂ ಈ ರೀತಿಯಾಗಿಯೇ ಇರಿ ತುಂಬಾನೆ ಚೆನ್ನಾಗಿ ಕಾಣಿಸುತ್ತೆ. ಸೀರೆಯಲ್ಲಿ ಸೆಕ್ಸಿಯಾಗಿ ಕಾಣಿಸ್ತೀರಿ, ಹಾಟ್ ಆಗಿ ಕಾಣಿಸ್ತೀರಿ ಎನ್ನುತ್ತಾ, ಸೀರೆಯುಟ್ರೂ ನಟಿಯನ್ನ ಕಾಡ್ತಿದ್ದಾರೆ ಪಡ್ಡೆ ಹುಡುಗರು. 
 

Latest Videos

click me!