2026ಕ್ಕೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಎಲ್ಲರೂ ತಮ್ಮದೇ ರೀತಿಯಲ್ಲಿ ಹೊಸ ವರ್ಷವನ್ನು ವೆಲ್ ಕಂ ಮಾಡಿದ್ದಾರೆ. ಹಳ್ಳಿ ಪವರ್ ಅಂತ ಹಳ್ಳಿಯಲ್ಲಿದ್ದ ಆಂಕರ್ ಅಕುಲ್ ಬಾಲಾಜಿ ಹೊಸ ವರ್ಷದ ಮೊದಲ ದಿನ ಏನು ಮಾಡಿದ್ರು ಗೊತ್ತಾ?
ಹೊಸ ವರ್ಷಕ್ಕೆ ಕಾಲಿಟ್ಟಾಗಿದೆ. ಎಲ್ಲರೂ ಅದ್ಧೂರಿಯಾಗಿ 2026ರನ್ನು ಸ್ವಾಗತಿಸಿದ್ದಾರೆ. ಆಂಕರ್ ಅಕುಲ್ ಬಾಲಾಜಿ ಹೊಸ ವರ್ಷವನ್ನು ಬಹಳ ವಿಶೇಷವಾಗಿ ಆಚರಿಸಿದ್ದಾರೆ. ಎಲ್ಲರೂ ಹೊಟೇಲ್ ತಿಂಡಿ ಸವಿದ್ರೆ ಅವರು ಮನೆಯೂಟ, ಅದೂ ತಾವೇ ಮಾಡಿದ ಅಡುಗೆಯನ್ನು ಹೆಂಡತಿಗೆ ನೀಡಿ ಎಂಜಾಯ್ ಮಾಡಿದ್ದಾರೆ.
26
ಚಿತ್ರಾನ್ನ ಮಾಡಿದ ಅಕುಲ್ ಬಾಲಾಜಿ
ಕಿರುತೆರೆಯ ಪ್ರಸಿದ್ಧ ಹಾಗೂ ಬ್ಯುಸಿ ಆಂಕರ್ ಗಳಲ್ಲಿ ಅಕುಲ್ ಬಾಲಾಜಿ ಒಬ್ಬರು. ರಿಯಾಲಿಟಿ ಶೋ, ಸಿನಿಮಾ ಹೀಗೆ ನಾನಾ ಕೆಲ್ಸದಲ್ಲಿ ಬ್ಯುಸಿ ಇರುವ ಅಕುಲ್ ಬಾಲಾಜಿ ಸಮಯ ಸಿಕ್ಕಾಗ ತಮ್ಮ ಪತ್ನಿ ಜ್ಯೋತಿ ಜೊತೆ ಕಳೆಯಲು ಇಷ್ಟಪಡ್ತಾರೆ. ಅಷ್ಟೇ ಅಲ್ಲ ಅಪರೂಪಕ್ಕೆ ಅಡುಗೆ ಮಾಡಿ ಬಡಿಸ್ತಾರೆ. ಈ ಬಾರಿ ಅಕುಲ್ ಬಾಲಾಜಿ ಚಿತ್ರಾನ್ನ ಮಾಡಿದ್ದಾರೆ.
36
ಸುಮ್ನಿರಕಾಗಲ್ಲ ಇವ್ರಿಗೆ
ಅಕುಲ್ ಬಾಲಾಜಿ ಅಡುಗೆ ಮಾಡುವ ವಿಡಿಯೋವನ್ನು ಅವರ ಪತ್ನಿ ಹಂಚಿಕೊಂಡಿದ್ದಾರೆ. ಗ್ಯಾಸ್ ಪಕ್ಕ ಒಗ್ಗರಣೆ ಹಾಕ್ತಾ ನಿಂತಿರುವ ಅಕುಲ್ ಅವರನ್ನು ತೋರಿಸ್ತಾ, ಅವರ ಪತ್ನಿ ಸುಮ್ನಿರಕಾಗಲ್ಲ ಇವರಿಗೆ. ರೆಸ್ಟ್ ಮಾಡಿ ಅಂದ್ರೂ ಚಿತ್ರಾನ್ನ ಮಾಡ್ತಿದ್ದಾರೆ ಅಂತ ಹೇಳಿದ್ದಾರೆ. ನನಗೆ ಚಿತ್ರಾಹ್ನ ತಿನ್ಬೇಕು ಅಂತ ಆಸೆಯಾಗಿದೆ. ವರ್ಷದ ಮೊದಲ ದಿನ ಪತ್ನಿಗೆ ನನ್ನ ಕೈರುಚಿ ತಿನ್ನಿಸಬೇಕು ಅಂತ ಅಕುಲ್ ಹೇಳಿದ್ದಾರೆ.
ಅಕುಲ್ ಬಾಲಾಜಿ ತುಂಬಾ ದಿನಗಳ ನಂತ್ರ ಚಿತ್ರಾನ್ನ ಮಾಡಿದ್ದಾರೆ. ಚಿತ್ರಾನ್ನ ತಿಂದಾಗ ಹಲ್ಲು ಹಾಗೂ ಕೆನ್ನೆ ಜುಮ್ಮೆನ್ನಬೇಕು. ಆಗ ಮಾತ್ರ ಚಿತ್ರಾನ್ನ ರುಚಿ ಇದೆ ಎಂದರ್ಥ ಅಂತ ಅವರ ಪತ್ನಿ ಹೇಳ್ತಾರೆ. ಅದಕ್ಕೆ ಚಿತ್ರಾಹ್ನ ತಿಂದು ನೋಡಿ ಅಂತ ಪತ್ನಿಗೆ ಚಿತ್ರಾನ್ನ ತಿನ್ನಿಸ್ತಾರೆ ಅಕುಲ್. ಚಿತ್ರಾನ್ನ ತಿಂದ ಅಕುಲ್ ಪತ್ನಿ ಕಳೆದುಹೋಗ್ತಾರೆ. ಚಿತ್ರಾನ್ನ ತುಂಬಾ ಚೆನ್ನಾಗಿದೆ. ಅಧ್ಬುತವಾಗಿದೆ ಅಂತ ಕಮೆಂಟ್ ಮಾಡ್ತಾರೆ.
56
ಹೊಸ ವರ್ಷಕ್ಕೆ ಶುಭ ಕೋರಿದ ಅಕುಲ್
ಹೊಸ ವರ್ಷದ ಮೊದಲ ದಿನ ಅಕುಲ್ ಮಾಡಿದ ಮೊದಲ ಅಡುಗೆ ಚಿತ್ರಾನ್ನ. ನೋಡೋಕೆ ತುಂಬಾ ಸುಂದರವಾಗಿ ಕಾಣ್ತಿರುವ ಚಿತ್ರಾನ್ನವನ್ನು ಅಕುಲ್ ಕೂಡ ತಿನ್ನುತ್ತಾರೆ. ತುಂಬಾ ಚೆನ್ನಾಗಿದೆ ಎನ್ನುವ ಅವರು, ಈ ವರ್ಷದ ಮೊದಲ ಚಿತ್ರಾನ್ನ. ಪತ್ನಿಗೆ ಮಾಡಿದ್ದೇನೆ. ನಿಮಗೆಲ್ಲ ಹೊಸ ವರ್ಷದ ಶುಭಾಷಯ ಅಂತ ವಿಶ್ ಮಾಡಿದ್ದಾರೆ.
66
ಹಳ್ಳಿ ಪವರ್ ಮುಕ್ತಾಯ
ಸದ್ಯ ಅಕುಲ್ ಬಾಲಾಜಿ ಜೀ ಪವರ್ ನಲ್ಲಿ ಪ್ರಸಾರ ಆಗ್ತಿದ್ದ ಹಳ್ಳಿ ಪವರ್ ನಲ್ಲಿ ಬ್ಯುಸಿ ಇದ್ರು. ಇದೊಂದು ರಿಯಾಲಿಟಿ ಶೋ. ಸಿಟಿಯಲ್ಲಿ ಬೆಳೆದ ಹುಡುಗಿಯರು ಹಳ್ಳಿಗೆ ಬಂದು ಅಲ್ಲಿ ಜೀವನ ನಡೆಸ್ಬೇಕಾಗಿತ್ತು. ಸಾಕಷ್ಟು ಕಷ್ಟ, ಟ್ವಿಸ್ಟ್, ಟಾಸ್ಕ್ ಮಧ್ಯೆ ಹಳ್ಳಿ ಪವರ್ ರಿಯಾಲಿಟಿ ಶಶೋ ಮುಗಿದಿದೆ. ರಗಡ್ ರಶ್ಮಿ ಹಳ್ಳಿ ಪವರ್ ಶೋ ವಿನ್ನರ್ ಆಗಿದ್ದಾರೆ. ಹಳ್ಳಿ ಪವರ್ ಶೋಗೆ ಸಿಕ್ಕಾಪಟ್ಟೆ ಪ್ರಶಂಸೆ ಸಿಕ್ಕಿತ್ತು. ಎಲ್ಲ ಕಡೆ ಸ್ಪರ್ಧಿಗಳ ಕಟೌಟ್ ರಾರಾಜಿಸಿತ್ತು. ಇದ್ರಲ್ಲಿ ಆಂಕರ್ ಆಗಿದ್ದ ಅಕುಲ್ ಬರೀ ಆಂಕರ್ ಆಗಿರಲಿಲ್ಲ. ಸ್ಪರ್ಧಿಗಳ ನಾನಾ ಸಮಸ್ಯೆಗೆ ಸ್ಪಂದಿಸಿದ್ದರು. ರಿಯಾಲಿಟಿ ಶೋ ಗ್ರ್ಯಾಂಡ್ ಫಿನಾಲೆ ಮುಗಿಸಿ ಈಗಷ್ಟೆ ಅಕುಲ್ ಫ್ರೀಯಾಗಿದ್ದಾರೆ. ಮುಂದೆ ಯಾವ ರಿಯಾಲಿಟಿ ಶೋಗೆ ಬರ್ತಾರೆ ಇಲ್ಲ ಯಾವ ಸಿನಿಮಾ ಹೊರಗೆ ಬರ್ತಿದೆ ಕಾದು ನೋಡ್ಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.