ಶಕುಂತಲಾ ದೇವಿ ಜೊತೆ ಅಮೃತ ಮತ್ತು ವರ್ಷ... ಅಮೃತವರ್ಷಿಣಿ ಟೀಮ್ ನೋಡಿ ಫ್ಯಾನ್ಸ್ ಖುಷ್

Published : Aug 31, 2024, 02:45 PM IST

ಕಿರುತೆರೆಯ ಸೂಪರ್ ಹಿಟ್ ಸೀರಿಯಲ್ ಆಗಿದ್ದ ಅಮೃತವರ್ಷಿಣಿಯ ತಾರೆಯರು ಇದೀಗ ಮತ್ತೆ ಜೊತೆಯಾಗಿದ್ದು, ಎಲ್ಲರನ್ನೂ ಜೊತೆಯಾಗಿ ನೋಡಿ ಅಭಿಮಾನಿಗಳು ಖುಷ್ ಆಗಿದ್ದಾರೆ.   

PREV
17
ಶಕುಂತಲಾ ದೇವಿ ಜೊತೆ ಅಮೃತ ಮತ್ತು ವರ್ಷ... ಅಮೃತವರ್ಷಿಣಿ ಟೀಮ್ ನೋಡಿ  ಫ್ಯಾನ್ಸ್ ಖುಷ್

ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ಹಿಟ್ ಸೀರಿಯಲ್ ಅಮೃತವರ್ಷಿಣಿ (Amruthavarshini) ನೆನಪಿದ್ಯಾ? ಖಂಡಿತಾ ನೆನಪಿರುತ್ತೆ, ಆ ಸಮಯದಲ್ಲಿ ಪ್ರತಿ ಮನೆಮನೆಯಲ್ಲೂ ಹವಾ ಸೃಷ್ಟಿಸಿದ ಸೀರಿಯಲ್ ಅದು. ಇದೀಗ ಅಮೃತವರ್ಷಿಣಿ ಸೀರಿಯಲ್ ತಾರೆಯರು ಮತ್ತೆ ಜೊತೆ ಸೇರಿದ್ದಾರೆ. 
 

27

ಹೌದು ಅಮೃತ, ವರ್ಷ ಹಾಗೂ ಅತ್ತೆ ಶಕುಂತಲಾ ದೇವಿ ಪಾತ್ರವದಲ್ಲಿ ನಟಿಸಿದ ಹೇಮಾ ಚೌಧರಿ, ವರ್ಷ ಪತಿ ಪಾತ್ರ ನಿರ್ವಹಿಸಿದ ಕಲಾವಿದ ಎಲ್ಲರೂ ಒಂದೆದೆ ಜೊತೆಯಾಗಿ ಸೇರಿ, ಎಂಜಾಯ್ ಮಾಡಿದ್ದು, ಈ ಫೋಟೊಗಳನ್ನು ರಜಿನಿ ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
 

37

ಅಮೃತವರ್ಷಿಣಿ ಧಾರಾವಾಹಿ ಎಷ್ಟೊಂದು ಜನಪ್ರಿಯತೆ ಪಡೆದಿತ್ತು ಅಂದ್ರೆ ಸೀರಿಯಲ್ ಬರೋಬ್ಬರಿ 5-6 ವರ್ಷಗಳ ಕಾಲ ಪ್ರಸಾರವಾಗಿತ್ತು, ಅಂದ್ರೆ ಬರೋಬ್ಬರು ಎರಡು ಸಾವಿರ ಸಂಚಿಕೆಗಳನ್ನು ಪೂರೈಸಿ ಸೂಪಾರ್  ಹಿಟ್ ಆಗಿತ್ತು, ಹಾಗಾಗಿಯೇ ಈಗಲೂ ಅಮೃತವರ್ಷಿಣಿಯ ಪ್ರತಿ ಪಾತ್ರಗಳು ಜನರಿಗೆ ನೆನಪಿದೆ. 
 

47

ಇನ್ನು ಅಮೃತವರ್ಷಿಣಿ ಸೀರಿಯಲ್ ಮುಗಿದು ಹಲವು ವರ್ಷಗಲೇ ಕಳೆದರು, ಸೀರಿಯಲ್ ನಟ-ನಟಿಯರು ಕನೆಕ್ಟ್ ಆಗಿದ್ದಾರೆ. ಹೆಚ್ಚಾಗಿ ರಜಿನಿ ಹೇಮಾ ಚೌಧರಿಯವರನ್ನು ಭೇಟಿಯಾಗುತ್ತಿರುತ್ತಾರೆ. ಈ ಬಾರಿ ವಿಶೇಷವೆಂಬಂತೆ ಅಮೃತವರ್ಷಿಣಿ ಧಾರಾವಾಹಿಯ ಟೀಮ್ ಎಲ್ಲರೂ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. 
 

57

ಅಮೃತವರ್ಷಿಣಿಯ ತಂಡ ಮತ್ತೆ ಜೊತೆಯಾಗಿರುವ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ರಜಿನಿ (Rajini), ಪ್ರತಿ ಸಲ ಹೇಮಾ ಅಮ್ಮನವರನ್ನ ಭೇಟಿ ಆದಾಗ ಜೀವನದಲ್ಲಿನ ಹುಮ್ಮಸ್ಸು ಇನ್ನು ಹೆಚ್ಚಾಗುತ್ತದೆ we love you ಅಮ್ಮ, ಅಮೃತವರ್ಷಿಣಿ ಸವಿನೆನಪು ಗಳು ಎಂದು ಬರೆದುಕೊಂಡಿದ್ದಾರೆ. 
 

67

ಇನ್ನು ಅಮೃತ ಮತ್ತು ವರ್ಷ ಹಾಗೂ ಶಕುಂತಲಾ ದೇವಿಯನ್ನು, ಒಟ್ಟಲ್ಲಿ ಅಮೃತವರ್ಷಿಣಿ ಟೀಮನ್ನು ಮತ್ತೆ ಜೊತೆಯಾಗಿ ನೋಡಿ ಸೀರಿಯಲ್ ಪ್ರಿಯರು ಸಂತಸ ವ್ಯಕ್ತಪಡಿಸಿದ್ದು, ಟೈಟಲ್ ಕಾರ್ಡ್ ವಿಡಿಯೋ ರಿಕ್ರಿಯೇಟ್ ಮಾಡಿ, ಅಮೃತವರ್ಷಿಣಿ ಟೈಟಲ್ ಸಾಂಗ್ ಹಾಕಿರೋದನ್ನು ಸಹ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. 
 

77

ನಮ್ಮ ಮೆಚ್ಚಿನ ಸೀರಿಯಲ್ ಜೋಡಿಗಳನ್ನು ಮತ್ತೆ ಜೊತೆಯಾಗಿ ನೋಡಿ ಖುಷಿಯಾಯ್ತು. ಅಮೃತ ವರ್ಷ ಮತ್ತು ಅಮ್ಮನನ್ನು ಮತ್ತೆ ಜೊತೆಯಾಗಿ ನೋಡಿ ಖುಷಿಯಾಗಿದೆ. ಮತ್ತೊಮ್ಮೆ ನೀವೆಲ್ಲಾ ಸೀರಿಯಲ್ ನಲ್ಲಿ ಜೊತೆಯಾಗಿ ಕಾಣಿಸಿಕೊಂಡ್ರೆ ಎಷ್ಟು ಚೆಂದ, ಅಮೃತ ಗಂಡ ವಿನಯ್ ಮಿಸ್ಸಿಂಗ್, ಎಂದೆಲ್ಲಾ ಕಾಮೆಂಟ್ ಮಾಡುವ ಮೂಲಕ ಅಮೃತವರ್ಷಿಣಿ ಸೀರಿಯಲ್ ಮೇಲಿನ ತಮ್ಮ ಅಭಿಮಾನವನ್ನು ಹೊರಹಾಕಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories