ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಸುಬ್ಬು ತಂಗಿ ವರಲಕ್ಷ್ಮಿ ಚಿಕ್ಕಮಗಳೂರಿನ ಬ್ಯೂಟಿ ಕ್ವೀನ್!

First Published | Aug 30, 2024, 11:39 PM IST

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಸುಬ್ರಹ್ಮಣ್ಯನ ತಂಗಿ ವರಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿರುವ ಪ್ರಜ್ಞಾ ಭಟ್ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ ನಿಮಗಾಗಿ. 
 

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಸುಬ್ಬು ಮುದ್ದಿನ ತಂಗಿ ವರಲಕ್ಷ್ಮಿ ಪಾತ್ರದಲ್ಲಿ ನಟಿಸುತ್ತಿರುವ ನಟಿ ಪ್ರಜ್ಞಾ ಭಟ್ (Prajna Bhat).  ವರಲಕ್ಷ್ಮಿ ಪಾತ್ರದಲ್ಲಿ ಪ್ರಜ್ಞಾ ಅದ್ಭುತವಾಗಿ ನಟಿಸುತ್ತಿದ್ದು, ಜನ ಮೆಚ್ಚುಗೆ ಪಡೆದಿದ್ದಾರೆ. 
 

ಪ್ರಜ್ಞಾ ಭಟ್ ಅವರದ್ದು ಇದೇ ಮೊದಲ ಸೀರಿಯಲ್ ಅಲ್ಲ. ಈಗಾಗಲೇ ಹಲವು ಸೀರಿಯಲ್, ಸಿನಿಮಾಗಳಲ್ಲಿ ಪ್ರಜ್ಞಾ ನಟಿಸಿದ್ದಾರೆ. ಇದೀಗ ಶ್ರಾವಣಿ ಸುಬ್ರಹ್ಮಣ್ಯದಲ್ಲಿ (Shravani Subramanya) ವರಲಕ್ಷ್ಮೀ ಪಾತ್ರದ ಮೂಲಕ ಗಮನ ಸೆಳೆಯುತ್ತಿದ್ದಾರೆ. 
 

Tap to resize

ಪ್ರಜ್ಞಾ ಭಟ್ ಈ ಹಿಂದೆ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಾಂಗಲ್ಯಂ ತಂತು ನಾನೇನ' ಧಾರಾವಾಹಿಯಲ್ಲಿ ಹೀರೋಯಿನ್ ತಂಗಿ ಪಾತ್ರದಲ್ಲಿ ನಟಿಸಿದ್ದರು. ಅಲ್ಲದೇ ಸ್ಟಾರ್ ಸುವರ್ಣ ವಾಹಿನಿಯ ಪ್ರೇಮ ಲೋಕ , ಪಾಪ ಪಾಂಡು (Papa Pandu) ಧಾರಾವಾಹಿಯಲ್ಲೂ ನಟಿಸಿದ್ದರು, ಅಷ್ಟೇ ಅಲ್ಲದೇ ಒಲವೇ ಮಂದಾರ 2 ಸಿನಿಮಾದಲ್ಲೂ ನಟಿಸಿದ್ದರು. 
 

ಪ್ರಜ್ಞಾ ಭಟ್ ಎಲ್ಲಿಯವರು? ನಟಿಯಾಗೋದಕ್ಕೂ ಮುನ್ನ ಇವರು ಏನ್ ಮಾಡ್ತಿದ್ರು ಅನ್ನೋದು ಗೊತ್ತಾ? ಆ ಬಗ್ಗೆಯು ಇಂಟ್ರೆಸ್ಟಿಂಗ್ ಆಗಿರೋ ಮಾಹಿತಿ ಇಲ್ಲಿದೆ. ನಟನೆಯಲ್ಲಿ ತಮ್ಮನ್ನು ತೊಡಗಿಸೋ ಮೊದಲು ಪ್ರಜ್ಞಾ ಭಟ್ ಮಾಡೆಲ್ ಕೂಡ ಆಗಿದ್ರು. 
 

ಮಲ್ನಾಡ್ ಸುಂದರಿ ಅಂತಾನೆ ಫೇಮಸ್ ಆಗಿರುವ ಮುದ್ದು ಮುಖದ ಚೆಲುವೆ ಪ್ರಜ್ಞಾ ಭಟ್, 2015 ರಲ್ಲಿ ಮಿಸ್ ಚಿಕ್ಕಮಗಳೂರು (Miss Chikmagalur) ರನ್ನರ್ ಅಪ್ ಆಗಿದ್ದರೂ, ಅಷ್ಟೇ ಅಲ್ಲ 2016ರಲ್ಲಿ ಮಿಸ್ ಕ್ವೀನ್ ಕರ್ನಾಟಕ ಎನ್ನುವ ಕಾರ್ಯಕ್ರಮದ ವಿನ್ನರ್ ಕಿರೀಟವನ್ನು ಸಹ ಧರಿಸಿದ್ದರು ಅಂತ ತಮ್ಮ ಸೋಶಿಯಲ್ ಮೀಡಿಯಾ ಬಯೋದಲ್ಲಿ ಬರೆದುಕೊಂಡಿದ್ದಾರೆ.
 

ಇನ್ನು ಪ್ರಜ್ಞಾ ಭಟ್ ಕಳೆದ ವರ್ಷ ಅಕ್ಟೋಬರ್ ನಲ್ಲಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇವರ ಪತಿ ನಾಗಶ್ರಿತ್ ಭಟ್. ಸೋಶಿಯಲ್ ಮೀಡಿಯಾದಲ್ಲಿ ಪತಿಯ ಜೊತೆಗಿನ ಫೋಟೊಗಳನ್ನು ಹಂಚಿಕೊಳ್ಳುತ್ತಲೇ ಇರ್ತಾರೆ, ಪ್ರಜ್ಞಾ. 
 

ಸೋಶಿಯಲ್ ಮೀಡೀಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುವ ಈ ಬೆಡಗಿ ಮಾಡರ್ನ್ ಲುಕ್ ಗೂ ಸೈ ಎನ್ನುವಂತೆ ಫೋಟೊ ಶೂಟ್ ಮಾಡಿಸಿದ್ದು, ಪ್ರಜ್ಞಾ ಭಟ್ ಅಂದವನ್ನು, ಚೆಂದವನ್ನು ಅಭಿಮಾನಿಗಳು ಹೊಗಳಿದ್ದಾರೆ. 

Latest Videos

click me!