ಅಮೃತಧಾರೆಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದ ವೀಕ್ಷಕರೇ ಈಗ ಸೀರಿಯಲ್‌‌ ಮುಗಿಸ್ಬಿಡಿ, ಕೈಮುಗಿತಿನಿ… ಅಂತಿರೋದು ಯಾಕೆ?

First Published | Aug 17, 2024, 5:54 PM IST

ಕನ್ನಡ ಕಿರುತೆರೆಯಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದ ಭೂಮಿಕಾ ಮತ್ತು ಗೌತಮ್ ದಿವಾನ್ ಕಥೆಯನ್ನು ಹೇಳೋ ಅಮೃತಧಾರೆ ಸೀರಿಯಲ್ ಬಗ್ಗೆ ಇದೀಗ ವೀಕ್ಷಕರಿಗೆ ಭಾರಿ ನಿರಾಸೆ ಮೂಡಿದ್ದು, ಸೀರಿಯಲ್ ಮುಗಿಸಿಬಿಡಿ ಅಂದಿದ್ದಾರೆ. 
 

ಕನ್ನಡ ಕಿರುತೆರೆಯಲ್ಲಿ ಪ್ರಬುದ್ಧ ಪ್ರೇಮಕಾವ್ಯಕ್ಕೆ ಮುನ್ನುಡಿ ಬರೆದ ಧಾರಾವಾಹಿ ಅಮೃತಧಾರೆ (Amruthadhare serial). ವಯಸ್ಸಾಗಿ ಆಮೇಲೆ ಮನೆಯವರಿಗೋಸ್ಕರ ಮದುವೆಯಾಗಿ, ನಂತರ ಲವ್ ಆಗಿ, ಒಬ್ಬರಿಗೊಬ್ಬರು ಕಣ್ಣುಮುಚ್ಚಿ ಅರ್ಥ ಮಾಡಿಕೊಳ್ಳುವಷ್ಟು ಮಧುರ ಬಾಂಧವ್ಯ ಹೊಂದಿರುವ ಭೂಮಿಕಾ ಮತ್ತು ಗೌತಮ್ ಲವ್ ಸ್ಟೋರಿ ನೋಡುಗರ ಎದೆಯಲ್ಲಿ ಕಚಗುಳಿ ಇಟ್ಟಿದ್ದಂತೂ ಸುಳ್ಳಲ್ಲ. 
 

ಅದರಲ್ಲೂ ಎಲ್ಲಾ ಸೀರಿಯಲ್ ನಂತೆ ಭೂಮಿಕಾ ಪಾತ್ರವನ್ನು ದುರ್ಬಲವಾಗಿ ತೋರಿಸದೇ, ನೇರ ದಿಟ್ಟ ಮಾತುಗಳಿಂದ, ಅತ್ತೆ ಶಕುಂತಲ ಏನೇ ಪ್ಲ್ಯಾನ್ ಮಾಡಿದ್ರೂ ಅದಕ್ಕೆ ಅಷ್ಟೇ ನೇರವಾಗಿ ಖಡಕ್ ಆಗಿ ತಿರುಗೇಟು ನೀಡುವ ಗಟ್ಟಿಗಿತ್ತಿ ಭೂಮಿಕಾ ಪಾತ್ರವನ್ನು ಜನ ಇಷ್ಟಪಟ್ಟಿದ್ದರು. ಭೂಮಿಕಾ ರೀತಿಯಲ್ಲೇ ಹುಡುಗಿಯರು ಇರಬೇಕು ಎನ್ನುವಷ್ಟರ ಮಟ್ಟಿಗೆ ಜನರಿಗೆ ಈ ಪಾತ್ರ ಇಷ್ಟವಾಗಿತ್ತು. 
 

Tap to resize

ಇಲ್ಲಿವರೆಗೂ ಜನರು ಇಷ್ಟಪಟ್ಟು ನೋಡ್ತಿದ್ದ ಅಮೃತಧಾರೆ ಧಾರಾವಾಹಿ (serial) ಇದೀಗ ವೀಕ್ಷಕರಿಗೆ ಭಾರಿ ನಿರಾಸೆ ಮೂಡಿಸಿದೆ. ಕಥೆ, ಪಾತ್ರ, ಸನ್ನಿವೇಶ ಎಲ್ಲವೂ ಬದಲಾಗಿದ್ದು, ಇದನ್ನ ಅರಗಿಸಿಕೊಳ್ಳೋದಕ್ಕೆ ತಯಾರಿಲ್ಲದ ವೀಕ್ಷಕರು, ದಯವಿಟ್ಟು ಧಾರಾವಾಹಿ ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ. ಅದಕ್ಕೇನು ಕಾರಣ ಗೊತ್ತಾ? 
 

ಸೀರಿಯಲ್ ಪ್ರೇಮಿಗಳು ನೀವಾಗಿದ್ರೆ, ಅಮೃತಧಾರೆ ಧಾರಾವಾಹಿಯಲ್ಲಿ ಸದ್ಯ ಏನು ನಡಿತಿದೆ ಅನ್ನೋದು ನಿಮಗೆ ಗೊತ್ತೆ ಇದೆ. ಸ್ಟ್ರಾಂಗ್ ಆಗಿದ್ದ ಭೂಮಿಕಾ, ಯಾವಾಗ ಅಪೇಕ್ಷ- ಪಾರ್ಥ ಮದುವೆ ವಿಚಾರ ಆರಂಭವಾಯ್ತೋ ಆವಾಗಿನಿಂದ ವೀಕ್ ಆಗಿದ್ದಾರೆ. ಜೊತೆಗೆ ಇದೀಗ ಮನೆಗೆ ಕಾಲಿಟ್ಟಿರೋ ಅಪೇಕ್ಷಾ ಮನಸ್ಸಲ್ಲಿ ಆಕೆಯ ಅಕ್ಕನ ವಿರುದ್ಧವೇ ವಿಷದ ಬೀಜ ಬಿತ್ತೋ ಕೆಲಸ ಮಾಡಲಾಗ್ತಿದೆ. 
 

ಇದನ್ನೆಲ್ಲಾ ನೋಡಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು ಭೂಮಿಕಾನ ಈ ತರ ಇಮೋಶನಲ್ ಮಾಡಬೇಡಿ, ಅವರು ಈ ತರ ಮೆತ್ತಗಿರೋದನ್ನ ನೋಡೋದಕ್ಕೆ  ಇಷ್ಟ ಆಗಲ್ಲಾ. ಮೊದಲಿನ ತರ ಸ್ಟ್ರಾಂಗ್ ಮಾಡಿ, ಇಲ್ಲ ಅಂದ್ರೆ ಧಾರಾವಾಹಿ ಬೇಜಾರ್ ಆಗೋಕೆ ಶುರುವಾಗತ್ತೆ. ತುಂಬಾ ಆಸಕ್ತಿಯಿಂದ ನೋಡ್ತಿರೋದು ಈ ಧಾರಾವಾಹಿಯನ್ನ, ಇದನ್ನೂ ಕೂಡ ಬೋರ್ ಹೊಡಿಸಬೇಡಿ ಎಂದು ಕೇಳಿಕೊಂಡಿದ್ದಾರೆ. 
 

ಈ ಧಾರಾವಾಹಿ ನೋಡೋಕೆ ಬೇಜಾರ್ ಆಗ್ತಿದೆ. ಎಲ್ಲಿಂದ ಎಲ್ಲಿಗೋ ಹೋಗ್ತಿದೆ ಮಳೆ ನೀರಿನ ತರ ಆಗಿದೆ ಸ್ಟೋರಿ. ನಿರ್ದೇಶಕರೇ ಅಭಿಮಾನಿಗಳು ರೊಚ್ಚಿಗೇಳ್ತಿದ್ದಾರೆ, ಧಾರಾವಾಹಿ ಕಥೆ ಬದಲಾಯಿಸಿ. ಡೈರೆಕ್ಟ್ರೇ ಕೆಟ್ಟೋಗ್ತಿದೆ ಧಾರಾವಾಹಿ. ಭೂಮಿಕಾನಾ ಸೋಲಿಸಿದ್ದೀರಿ.  ಮುಕ್ತಾಯ ಮಾಡ್ಬಿಡಿ ಧಾರಾವಾಹಿಯನ್ನ (stop the serial). ನಿಮಗೆ ಕೈ ಮುಗಿತಿನಿ ಎಂದು ಸಹ ಕೇಳಿಕೊಂಡಿದ್ದಾರೆ. 
 

ಮತ್ತೊಬ್ಬರು ಕಾಮೆಂಟ್ ಮಾಡಿ ಪ್ರೀತಿ ಪ್ರೇಮ ಅಂತ ತೋರಿಸ್ಕೊಂಡಿದ್ರೆ ಹೇಗೊ ಸೀರಿಯಲ್ ನಡೆಯುತ್ತೆ. ಆದ್ರೆ  ಸಂಸಾರದಲ್ಲಿ ಹುಳಿ ಹಿಂಡೊದು, ಜಗಳ ಇದೆಲ್ಲಾ ಮಾಡಿದ್ರೆ ಸೀರಿಯಲ್  ಹಳ್ಳ ಹಿಡಿಯುತ್ತೆ. ಮತ್ತೆ ಎಲ್ಲಾ ಸೀರಿಯಲ್ ಥರ ಅದೇ ಕಥೆ ಎಳಿತಾ ಇದ್ದೀರಿ. ದಯವಿಟ್ಟು ಕಥೆಯನ್ನ ಬದಲಿಸಿ, ಇಲ್ಲ ಧಾರಾವಾಹಿ ನಿಲ್ಲಿಸಿ ಎಂದಿದ್ದಾರೆ ವೀಕ್ಷಕರು. 
 

Latest Videos

click me!