Amruthadhare: ಅಮೃತಧಾರೆ ಧಾರಾವಾಹಿಯಲ್ಲಿ ಇದೀಗ ಕೊನೆಗೂ ಮಲ್ಲಿ ಜೀವನದಲ್ಲಿ ಬೆಳಕು ಮೂಡುವ ಹೊತ್ತು ಬಂದಿದೆ. ಎಲ್ಲಾ ಸರಿಯಾಗಿ ಮಲ್ಲಿ-ಸುನಿಲ್ ನಿಶ್ಚಿತಾರ್ಥ ನಡೆಯುವ ಈ ಹೊತ್ತಲ್ಲೇ ಪಾರ್ಥ ಮುಂದೆ ಸುನೀಲ್ ನಿಜವಾದ ಮುಖವಾಡ ಬಯಲಾಗುತ್ತಾ?
ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ-ಗೌತಮ್ ಮನೆಯಲ್ಲಿ ಸಂಭ್ರಮ ಜೋರಾಗಿಯೇ ನಡೆಯುತ್ತಿದೆ. ಎರಡೆರಡು ಬಾರಿ ಸುನೀಲ್ ನನ್ನು ಸಂದರ್ಶನ ಮಾಡಿ, ಆತ ಒಳ್ಳೆಯವನೆಂದು ಭೂಮಿಕಾ- ಗೌತಮ್ ನಿರ್ಧರಿಸಿ, ಇದೀಗ ನಿಶ್ಚಿತಾರ್ಥದ ಸಡಗರ ಎಲ್ಲೆಡೆ ಮನೆ ಮಾಡಿದೆ.
26
ಮಲ್ಲಿ-ಸುನಿ ನಿಶ್ಚಿತಾರ್ಥ
ಸುನಿಲ್ ಕೆಡಿ ಜೈದೇವ್ ಕಳುಹಿಸಿರುವ ವ್ಯಕ್ತಿ, ಅವನಿಂದ ಮಲ್ಲಿ ಜೀವನ ಹಾಳಾಗುತ್ತದೆ ಅನ್ನೋದೇ ಗೊತ್ತಿಲ್ಲದ ಭೂಮಿ, ಗೌತಮ್ ಸೇರಿ ಮಲ್ಲಿ ಮತ್ತು ಸುನಿಲ್ ನಿಶ್ಚಿತಾರ್ಥ ಮಾಡಲು ಹೊರಟಿದ್ದಾರೆ. ಕುಟುಂಬದ ಎಲ್ಲಾ ಸದಸ್ಯರು ಸಹ ನಿಶ್ಚಿತಾರ್ಥದ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.
36
ಪಾರ್ಥ ಮುಂದೆ ಸತ್ಯದ ಅನಾವರಣ ಆಗುತ್ತಾ?
ಈಗಾಗಲೇ ಸುನಿಲ್ ಬಗ್ಗೆ ಮಾವ ಚಂದ್ರಕಾಂತನಿಗೆ ಏನೋ ಸಂಶಯ ಮೂಡಿತ್ತು. ಸುನಿಲ್ ಮತ್ತು ಜೈ ದೇವ್ ಒಡನಾಟ ಕಂಡು, ಇಬ್ಬರು ಏನೋ ನಡೆಸುತ್ತಿದ್ದಾರೆ ಎಂದು ಈಗಾಗಲೇ ಚಂದ್ರಕಾಂತ್ ಪಾರ್ಥ ಮುಂದೆ ಹೇಳಿದ್ದರು. ಈಗ ಪಾರ್ಥ ಮುಂದೆ ಎಲ್ಲಾ ಸತ್ಯ ಬಯಲಾಗುತ್ತಾ?
ನಿಶ್ಚಿತಾರ್ಥಕ್ಕೆ ಬಂದಿರುವ ಪಾರ್ಥ, ಹುಡುಗನಿಗಾಗಿ ಹುಡುಕಾಟ ನಡೆಸಿದ್ದಾರೆ. ಇದುವರೆಗೂ ಒಬ್ಬರಿಗೊಬ್ಬರು ಮುಖಾಮುಖಿಯಾಗಿಲ್ಲ. ಸದ್ಯದಲ್ಲೇ ಸುನಿ ಪಾರ್ಥನ ಮುಂದೆ ಕಾಣಿಸಿಕೊಳ್ಳಲೇಬೇಕು. ಹಾಗಾದರೆ ಸುನಿ ಮುಖವಾದ ಕಳಚಿ ಬೀಳುವ ಸಾಧ್ಯತೆ ಇದೆ.
56
ಮತ್ತೆ ಕತ್ತಲಾಗುತ್ತಾ ಮಲ್ಲಿ ಬದುಕು?
ಜೆಡಿ ಕೈಯಲ್ಲಿ ನರಳಿ, ಮಾನಸಿಕವಾಗಿ ಕೊರಗಿದ ಹುಡುಗಿ ಮಲ್ಲಿ. ಇದೀಗ ಹಲವು ವರ್ಷಗಳ ಬಳಿಕ, ಇನ್ನೊಬ್ಬ ಹುಡುಗನ ಜೊತೆ ಸ್ನೇಹ ಬೆಳೆಸಿಕೊಂಡು, ಅವನನ್ನು ಮದುವೆಯಾಗುವ ನಿರ್ಧಾರ ಮಾಡಿದ್ದಾಳೆ.ಈಗಷ್ಟೇ ಮತ್ತೆ ಪ್ರೀತಿಯಾಗಿದೆ, ಇಂತಹ ಸಮಯದಲ್ಲಿ ನಿಜ ವಿಷಯ ಬಯಲಾದರೆ ಮಲ್ಲಿ ಬದುಕು ಮತ್ತೆ ಕತ್ತಲಾಗೋದು ಖಚಿತಾ.
66
ಮುಂದೆ ಏನಾಗಬಹುದು?
ವೀಕ್ಷಕರು ಹೇಳುವಂತೆ ಆದಷ್ಟು ಬೇಗ ಸುನಿಲ್ ಬಗ್ಗೆ ಮನೆಯವರಿಗೆ ಗೊತ್ತಾಗಬೇಕು. ಇಲ್ಲವಾದರೆ ಗೌತಮ್ ಕೈಯಿಂದ ಮುಂದೊಂದು ದಿನ ಪೆಟ್ಟು ಬೀಳಬಹುದು. ಇನ್ನೊಂದು ಅನಿಸಿಕೆ ಪ್ರಕಾರ ತಾನು ಗೌರವಿಸುತ್ತಿರುವ, ರೋಲ್ ಮಾಡೆಲ್ ಅಂದುಕೊಂಡಿರುವ ಗೌತಮ್ ಗೆ ಮೋಸ ಮಾಡಲು ಸುನಿಲ್ ಗೆ ಮನಸು ಬಾರದೆ, ಆತನೇ ನಿಜ ಒಪ್ಪಿಕೊಂಡು, ಮತ್ತೆ ಜೈದೇವ್ ಗೆ ಚಳ್ಳೆ ಹಣ್ಣು ತಿನ್ನಿಸುವ ಸಾಧ್ಯತೆ ಇದೆ. ಎರಡರಲ್ಲಿ ಏನಾಗುತ್ತೆ ಅನ್ನೋದನ್ನು ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.