ದೇವರ ಸನ್ನಿಧಿಯಲ್ಲಿ ಅಮ್ಮ-ಮಗನ ಒಂದು ಮಾಡಿದ ಭೂಮಿಕಾ…. ಇಂಥ ಹೆಂಡ್ತಿ ಪಡೆದವರೇ ಧನ್ಯ!

Published : Jan 01, 2025, 03:50 PM ISTUpdated : Jan 01, 2025, 03:57 PM IST

ಅಮೃತಧಾರೆ ಧಾರಾವಾಹಿಯಲ್ಲಿ ಇಲ್ಲಿವರೆಗೆ ಕಾಯುತ್ತಿದ್ದ ಗಳಿಗೆ ಕೊನೆಗೂ ಬಂದಿದ್ದೂ ಭೂಮಿಕಾ, ಗೌತಮ್ ಮತ್ತು ಅಮ್ಮನನ್ನು ದೇವರ ಸನ್ನಿಧಿಯಲ್ಲಿ ಒಂದಾಗಿಸಿದ್ದಾಳೆ.   

PREV
19
ದೇವರ ಸನ್ನಿಧಿಯಲ್ಲಿ ಅಮ್ಮ-ಮಗನ ಒಂದು ಮಾಡಿದ ಭೂಮಿಕಾ…. ಇಂಥ ಹೆಂಡ್ತಿ ಪಡೆದವರೇ ಧನ್ಯ!

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಅಮೃತಧಾರೆ (Amruthadhare) ಧಾರಾವಾಹಿಯಲ್ಲಿ ಪ್ರತಿಯೊಬ್ಬ ವೀಕ್ಷಕರು ಕಾಯುತ್ತಿದ್ದ ಆ ಅಮೃತ ಘಳಿಗೆ ಬಂದೇ ಬಿಟ್ಟಿತು. ಕಳೆದು ಹೋಗಿದ್ದ ಅಮ್ಮ ಮಗ ಮತ್ತೆ ಒಂದಾಗುತ್ತಿದ್ದಾರೆ. ಸದ್ಯ ಪ್ರೊಮೋ ಬಿಡುಗಡೆಯಾಗಿದ್ದು, ಇದನ್ನು ನೋಡಿ ವೀಕ್ಷಕರು ಥ್ರಿಲ್ ಆಗಿದ್ದಾರೆ. 
 

29

ಹೌದು ಅಮೃತಧಾರೆಯಲ್ಲಿ ಗೌತಮ್ ದಿವಾನ್ (Goutham Diwan) ಯಾವಾಗಲು ಹಂಬಲಿಸುತ್ತಿದ್ದದ್ದು, ಅಂದ್ರೆ ತನ್ನ ಅಮ್ಮ ಹಾಗೂ ತಂಗಿಯನ್ನು. ಅವರಿಬ್ಬರು ಗೌತಮ್ ಪುಟ್ಟ ಬಾಲಕನಾಗಿದ್ದಾಗಲೇ ಕಳೆದು ಬಿಟ್ಟು ಹೋಗಿದ್ದರು. ಹಾಗಾಗಿ ಅಮ್ಮನಿಗಾಗಿ ಗೌತಮ್ ಹುಡುಕಿಸಿದ ಜಾಗ ಇಲ್ಲ, ಮಾಡದ ಕೆಲಸಗಳಿಲ್ಲ. ಆದರೆ ಅಮ್ಮ ಮಾತ್ರ ಎಲ್ಲೂ ಕಾಣಿಸಿಕೊಳ್ಳಲೇ ಇಲ್ಲ. 
 

39

ಚಿಕ್ಕಮ್ಮ ಶಾಕುಂತಲಾ ಹಾಗೂ ಜೈದೇವ್ ಮತ್ತು ಮಾವನ ಕುತಂತ್ರದಿಂದಾಗಿ ಅಮ್ಮ ಮತ್ತು ತಂಗಿ, ಅವತ್ತೆ ಆಕ್ಸೆಡೆಂಟಲ್ಲಿ ಸಾವನ್ನಪ್ಪಿದ್ದಾರೆ ಎನ್ನುವ ಸುಳ್ಳು ಮಾತನ್ನು ನಂಬಿ, ಅಮ್ಮನ ಶ್ರಾದ್ಧ ಕಾರ್ಯವನ್ನು ಸಹ ಮಾಡಿದ್ದ ಗೌತಮ್. ಸುಧಾಳೇ ತನ್ನ ತಂಗಿ, ಆಕೆಯೇ ಅಮ್ಮನೇ ತನ್ನ ಅಮ್ಮ ಅನ್ನೋದು ಗೊತ್ತಿಲ್ಲದೇ ಮನೆಯಲ್ಲಿಯೇ ಇರಿಸಿಕೊಂಡಿದ್ದರು. 
 

49

ಸುಧಾಳೇ ಗೌತಮ್ ತಂಗಿ ಹಾಗೂ ಆಕೆಯ ಜೊತೆಗಿರುವವರೇ ಗೌತಮ್ ತಾಯಿ ಭಾಗ್ಯ ಅನ್ನೋದು ತಿಳಿದ ಕುತಂತ್ರಿಗಳು ಹೇಗಾದರು ಮಾಡಿ ಅಮ್ಮ-ಮಗಳನ್ನು ಮನೆಯಿಂದ ಓಡಿಸುವ ಹಾಗೆ ಮಾಡಿ, ಅವರನ್ನು ಕೊಲ್ಲುವ ಪ್ಲ್ಯಾನ್ ಕೂಡ ಮಾಡಿದ್ರು. ಆ ಯೋಜನೆಯಂತೆ ಗೌತಮ್ ಕಣ್ಣಲ್ಲಿ ಸುಧಾ ಕೆಟ್ಟವಳಾಗುವಂತೆ ಮಾಡಿ, ಮನೆಯಿಂದ ಹೊರದಬ್ಬಿದ್ದಾಗಿದೆ. 
 

59

ಆದರೆ ಸುಧಾ ಮೇಲೆ ನಂಬಿಕೆ ಕಳೆದುಕೊಳ್ಳದ ಭೂಮಿಕಾ, ಸುಧಾ ಯಾಕೆ ಹೀಗೆ ಮಾಡಿದ್ದು ಅನ್ನೋದನ್ನೆಲ್ಲಾ ಕೇಳಿ ತಿಳಿದುಕೊಳ್ಳುವಷ್ಟರಲ್ಲೇ, ಸುಧಾ ತಾಯಿ ಮಹಡಿ ಮೇಲೆ ಹೋಗಿದ್ದವರನ್ನು ತಡೆದ ಭೂಮಿಕಾಗೆ, ಗೌತಮ್ ತಾಯಿನೇ ಸುಧಾ ತಾಯಿ ಅನ್ನೋ ಸತ್ಯ ಗೊತ್ತಾಗಿ, ಈ ತಾಯಿ ಮಗ, ತಂಗಿಯನ್ನು ಒಂದಾಗಿಸಬೇಕು ಎಂದು ನಿರ್ಧರಿಸಿ ಅದಕ್ಕಾಗಿ ಎಲ್ಲಾ ತಯಾರಿ ಮಾಡಿಸಿದ್ದಾರೆ. 
 

69

ಆನಂದ್’ಗೆ ಹೇಳಿ ದೇವಸ್ಥಾನದಲ್ಲಿ ತುಲಾಭಾರಕ್ಕೆ ವ್ಯವಸ್ಥೆ ಮಾಡಿದ ಭೂಮಿಕಾ, ಇದೀಗ ಗೌತಮ್ ರನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ, ವಿಶೇಷ ವ್ಯಕ್ತಿಯನ್ನು ಭೇಟಿ ಮಾಡಿಸೋದಾಗಿ ಹೇಳಿ, ಅಮ್ಮನನ್ನೇ ಕಣ್ಣೆದುರು ನಿಲ್ಲುವಂತೆ ಮಾಡಿದ್ದಾರೆ. ಸಾವನ್ನಪ್ಪಿದ್ದಾಳೆ ಅನ್ನೋದು ತಿಳಿದ ಅಮ್ಮನೇ ಕಣ್ಣೆದುರಿಗೆ ಬಂದದ್ದನ್ನು ನೋಡಿ ಗೌತಮ್ ಆನಂದ ಭಾಷ್ಮ ಸುರಿಸಿದ್ದಾರೆ. 
 

79

ಅಮ್ಮನನ್ನು ಹಾಗೂ ತಂಗಿಯನ್ನು ಬಿಗಿದಪ್ಪಿ ನಿಂತಿರುವ ಸುಂದರವಾದ ಮನಕಲುಕುವ ಪ್ರೊಮೋ ಇದೀಗ ಬಿಡುಗಡೆಯಾಗಿದ್ದು, ವೀಕ್ಷಕರು ಇದು ಕನಸಾಗದಿರಲಿ ಎಂದು ಹಾರೈಸಿದ್ದಾರೆ. ಅಲ್ಲದೇ ಅಮ್ಮ ಮತ್ತು ಮಗ ಒಂದಾದ ಕ್ಷಣವನ್ನು ನೋಡಿ ತಾವೂ ಭಾವುಕರಾಗಿದ್ದಾರೆ. ಜೊತೆಗೆ ಈ ವಾರದ ಕಿಚ್ಚನ ಚಪ್ಪಾಳೆ ಭೂಮಿಕ ಅವರಿಗೆ ಎಂದು ಸಹ ಹೇಳಿದ್ದಾರೆ. 
 

89

ಭೂಮಿಕಾ ಅಂತ ಹೆಂಡ್ತಿ ಪಡೆಯೋಕೆ, ಗೌತಮ್ ನಿಜಕ್ಕೂ ಪುಣ್ಯ ಮಾಡಿದ್ದಾರೆ ಎಂದು ಹೇಳ್ತಿದ್ದಾರೆ. ನಿಜ ಜೀವನದಲ್ಲೂ ಭೂಮಿಕಾ… ಅಲ್ಲಲ್ಲ… ಛಾಯಾ ಸಿಂಗ್ (Chaya Singh) ನಂತಹ ಪತ್ನಿಯನ್ನು ಪಡೆದ ಅವರ ಪತಿ ಕೂಡ ಲಕ್ಕಿನೇ ಇರಬೇಕು ಅಲ್ವಾ? ಇವರದ್ದು ಲವ್ ಮ್ಯಾರೇಜ್. ಗಂಡನ ಹೆಸರು ಕೃಷ್ಣ. ಇವರು ಕೂಡ ನಟನೇ, ಆದರೆ ಹೀರೋ ಅಲ್ಲ ವಿಲನ್. 
 

99

2010ರಲ್ಲಿ ತೆರೆ ಕಂಡ ಆನಂದಪುರತ್ತು ವೀಡು (Anandapurathu Veedu) ಎನ್ನುವ ಸೂಪರ್‌ನ್ಯಾಚುರಲ್ ಮಿಸ್ಟರಿ ಸಿನಿಮಾದಲ್ಲಿ ನಟ ಕೃಷ್ಣ ಹಾಗೂ ಛಾಯಾ ಸಿಂಗ್ ನಟಿಸಿದ್ದರು.  ಈ ಸಿನಿಮಾ ನಾಯಕಿ ಛಾಯಾ, ವಿಲನ್ ಕೃಷ್ಣ. ಈ ಸಿನಿಮಾ ಶೂಟಿಂಗ್ ವೇಳೆ, ಇಬ್ಬರಿಗೂ ಇದ್ದ ಪುಸ್ತಕ ಓದುವ ಆಸಕ್ತಿ ಮೂಲಕ ಸ್ನೇಹ ಬೆಳೆದು, ಅದು ಪ್ರೀತಿಯಾಗಿ, ಆಮೇಲೆ ಮದುವೆಯಾದ ಜೋಡಿಗಳಿವರು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ರೀಲ್ಸ್ ಮೂಲಕ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 

Read more Photos on
click me!

Recommended Stories