ಬಿಗ್ ಬಾಸ್ ಸೀಸನ್ 11ರ ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಕಿಶನ್ ಎಂಟ್ರಿ ಕೊಟ್ಟ ದಿನದಿಂದಲೂ ಫಯರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ ಜೊತೆ ಸಣ್ಣ ಪುಟ್ಟ ವಿಚಾರಕ್ಕೆ ಜಗಳ ಮಾಡಿಕೊಳ್ಳುತ್ತಿರುತ್ತಾರೆ. ಚೈತ್ರಾ ಉಸ್ತುವಾರ ಮಾಡಿದರಂತೆ ದೊಡ್ಡ ಜಗಳ ಕನ್ಫರ್ಮ್.
ಆಟ ಆಡುವುದಕ್ಕಿಂತ ಹೆಚ್ಚಾಗಿ ಉಸ್ತುವಾರಿ ಮಾಡುವ ಚೈತ್ರಾ ಕುಂದಾಪುರ ಬಗ್ಗೆ ಇನ್ನಿತರ ಸ್ಪರ್ಧಿಗಳಿಗೆ ಕೊಂಚ ಅಸಮಾಧಾನ ಇದೆ. ಸಣ್ಣ ಪುಟ್ಟಕ್ಕೂ ಫೌಲ್ ಕೊಡುವುದು ಅದು ತಪ್ಪು ಇದು ತಪ್ಪು ಎನ್ನುವುದು ಸರಿ ಅಲ್ಲ ಅಂತಾ ಜಗಳ ಮಾಡ್ತಾರೆ.
ಕಳೆದ ಮೂರ್ನಾಲ್ಕು ವಾರಗಳಿಂದ ಚೈತ್ರಾ ಕುಂದಾಪುರ ಮತ್ತು ರಜತ್ ಕಿಶನ್ ನಡುವೆ ಜಗಳು ಆಗುತ್ತಲೇ ಇದೆ. ಸೂಪರ್ ಸಂಡೆ ವಿತ್ ಕಿಚ್ಚ ಸುದೀಪ ಎಪಿಸೋಡ್‌ನಲ್ಲಿ ಒಂದು ಟಾಸ್ಕ್ ನೀಡಲಾಗಿತ್ತು.
ಒಂದು ಪಿಂಗಾಣಿ ತಟ್ಟೆಯ ಮೇಲೆ ಸ್ಪರ್ಧಿಯ ಫೋಟೋ ಅಂಟಿಸಿ ಅವರಲ್ಲಿ ಇರುವ ಒಂದು ಗುಣ ಈ ವರ್ಷವೇ ಇಲ್ಲಿಗೆ ಬಿಟ್ಟು 2025ರಲ್ಲಿ ಬದಲಾಗಬೇಕು ಅನ್ನೋ ಗುಣವನ್ನು ಹೇಳಬೇಕು. ಆ ತಟ್ಟೆಯನ್ನು ಅಲ್ಲಿಯೇ ಹೊಡೆದು ಹಾಕಬೇಕು.
ಚೈತ್ರಾ ಫೋಟೋವನ್ನು ತಟ್ಟೆಗೆ ಅಂಟಿಸಿದ ರಜತ್ 'ಸುಮ್ಮನೆ ಮಾತನಾಡುತ್ತಾರೆ. ಅಗತ್ಯ ಇರುವ ಕಡೆ ಮಾತನಾಡಬೇಕು. ಏನ್ ಮಾಡಿದ್ದರೂ ಮಾತು ಕಡಿಮೆ ಮಾಡುವುದಿಲ್ಲ ಅನ್ನೋದು ಗೊತ್ತಿದೆ ಆದರೆ ಕಡಿಮೆ ಮಾಡಿಕೊಂಡರೆ ಒಳ್ಳೆಯದು' ಎಂದು ತಟ್ಟೆ ಹೊಡೆಯುತ್ತಾರೆ.
ರಜತ್ ಕಿಶನ್ ಫೋಟೋವನ್ನು ತಟ್ಟಿಗೆ ಅಂಟಿಸಿದ ಚೈತ್ರಾ 'ತಮಾಷೆಗೂ ಮತ್ತು ವ್ಯಂಗ್ಯ, ಅಪಹಾಸ್ಯಕ್ಕೂ ಬಹಳ ವ್ಯತ್ಯಾಸ ಇದೆ. ಈ ಗುಣ ಬದಲಾಯಿಸಿಕೊಳ್ಳಬೇಕು' ಎಂದು ತಟ್ಟೆ ಹೊಡೆಯುತ್ತಾರೆ.