BBK 12: ಕಾವ್ಯ ಶೈವ ಮುಖ ನೋಡಿದ್ರೆ ವಾಂತಿ ಬರುತ್ತೆ; ಗಿಲ್ಲಿ ನಟ, ಕಾವು ಮಧ್ಯೆ ಅಂಥದ್ದೇನು ನಡೀತು?

Published : Nov 18, 2025, 12:22 PM ISTUpdated : Nov 18, 2025, 12:32 PM IST

Bigg Boss Kannada Season 12: ತೋಟಕೆ ಹೋಗೋ ತಿಮ್ಮ, ತೋಳ ಬಂದೀತಮ್ಮ, ಊಟಕೆ ಬಾರೋ ತಿಮ್ಮ, ಓಡಿ ಬಂದೆನಮ್ಮ ಎಂಬ ಶಿಶುಗೀತೆಯೇ ಇದೆ. ಇದಕ್ಕೆ ತಕ್ಕಂತೆ ಮನೆಯಲ್ಲಿ ಯಾರಿದ್ದಾರೆ ಎಂದು ಬಿಗ್‌ ಬಾಸ್‌ ಪ್ರಶ್ನೆ ಮಾಡಿದ್ದರು. ಅದಕ್ಕೆ ಎಲ್ಲರೂ ಒಮ್ಮತದಿಂದ ಗಿಲ್ಲಿ ನಟನ ಹೆಸರು ಹೇಳಿದ್ದಾರೆ.

PREV
15
ಎಲ್ಲೆಲ್ಲೋ ಬಟ್ಟೆ ಬಿಸಾಕಿದ್ದಾರಂತೆ

ಗಿಲ್ಲಿ ನಟ ಕೆಲಸವನ್ನೇ ಮಾಡೋದಿಲ್ಲ ಎಂದು ಎಲ್ಲರೂ ಹೇಳಿದ್ದರು. ಕಿಚ್ಚ ಸುದೀಪ್‌ ಮುಂದೆಯೂ ಕೂಡ ಹೀಗೆ ಹೇಳಿದ್ದರು. ಬೇರೆಯವರಿಂದ ಬಟ್ಟೆ ತಗೊಂಡಿದ್ದ ಗಿಲ್ಲಿ ಅದನ್ನು ಕೂಡ ವಾಶ್‌ ಮಾಡದೆ, ಹಾಗೆಯೇ ಇಟ್ಟಿದ್ದರಂತೆ. ಅಷ್ಟೇ ಅಲ್ಲದೆ ಧ್ರುವಂತ್‌ ಹೇಳುವಂತೆ ಅವರ ಶರ್ಟ್‌ನ್ನು ಟೆರೆಸ್‌ನಲ್ಲಿ ಎಸೆದಿದ್ದರು.

25
ನೀಟ್‌ ಆಗಿ ಇಡೋದಿಲ್ಲ

ಗಿಲ್ಲಿ ನಟ ಅವರು ಕಸ ಗುಡಿಸೋದಿಲ್ಲ, ಪಾತ್ರೆ ತೊಳೆಯೋದಿಲ್ಲ, ಬಾತ್‌ರೂಮ್‌ ಕ್ಲೀನ್‌ ಮಾಡೋದಿಲ್ಲ. ಅಷ್ಟೇ ಅಲ್ಲದೆ ಅವರ ವಸ್ತುಗಳನ್ನು ಕೂಡ ನೀಟ್‌ ಆಗಿ ಇಡೋದಿಲ್ಲ. ಕಿಚ್ಚ ಸುದೀಪ್‌ ಅವರು ಕೂಡ ಗಿಲ್ಲಿ ನಟನಿಗೆ ಬಟ್ಟೆ ಒಗೆಯಬೇಕು ಎಂದು ಹೇಳಿದ್ದರು. ಹೀಗಿದ್ದರೂ ಕೂಡ ಅವರು ಕೇಳಿರಲಿಲ್ಲ.

35
ವೈಯಕ್ತಿಕ ಕೆಲಸ ಮಾಡಿಸಿಕೊಳ್ಳಬಹುದು

ಈ ಬಾರಿ ಗಿಲ್ಲಿ ನಟನ ಬಳಿ ಕೆಲಸ ಮಾಡಿಸಬೇಕು ಎಂದು ಕ್ಯಾಪ್ಟರ್‌ ರಘು ಒದ್ದಾಡಿದ್ದಾರೆ. ಇನ್ನು ಗ್ರೊಸರಿ ಸಿಗೋದಿಲ್ಲ ಎಂದು ಬಿಗ್‌ ಬಾಸ್‌ ಹೇಳಿದ್ದರು. ಅಷ್ಟೇ ಅಲ್ಲದೆ ಸ್ಪರ್ಧಿಗಳು ತಮ್ಮ ವೈಯಕ್ತಿಕ ಕೆಲಸವನ್ನು ಮಾಡಿಸಿಕೊಳ್ಳಬಹುದು ಎಂದು ಹೇಳಿದ್ದರು.

45
ಆ ಕಡೆ ಹೋಗು ವಾಮಿಟ್‌ ಬರ್ತಿದೆ

ಗಿಲ್ಲಿ ನಟನ ಬಳಿ ಕೆಲಸ ಮಾಡಿಸಬೇಕು ಎಂದು ಕಾವ್ಯ ಶೈವ ಅಂದುಕೊಂಡು, ಅವರ ಸುತ್ತವೇ ಸುತ್ತಿದ್ದರು. ಬಾತ್‌ರೂಮ್‌ ಏರಿಯಾದಲ್ಲಿ ಗಿಲ್ಲಿ ನಟ ಮುಖ ತೊಳೆಯುವಾಗ, ಗಿಲ್ಲಿ ಅವರು, “ಆ ಕಡೆ ಹೋಗು ವಾಮಿಟ್‌ ಬರ್ತಿದೆ” ಎಂದಿದ್ದಾರೆ. ಆಗ ಕಾವ್ಯ, “ಆಗಲ್ಲ, ಮಾಡು” ಎಂದಿದ್ದಾರೆ. ಆಗ ಗಿಲ್ಲಿ “ನಿನ್ನ ಮುಖ ನೋಡಿದ್ರೆ ವಾಂತಿ ಬರ್ತಿದೆ” ಎಂದು ಹೇಳಿದ್ದಾರೆ.

55
ಕಾವ್ಯ ಮನಸ್ಸಿಗೆ ಘಾಸಿ

ಗಿಲ್ಲಿ ನಟನ ಮಾತು ಕೇಳಿ ಕಾವ್ಯ ಅವರಿಗೆ ಬೇಸರ ಬಂದಿದೆ. ಆಮೇಲೆ ಗಿಲ್ಲಿ ಸಮಾಧಾನ ಮಾಡೋಕೆ ಮುಂದಾಗಿದ್ದಾರೆ. ಕಾವ್ಯ ಮುನಿಸು ಮರೆತಿದ್ದಾರೆ. ಆಮೇಲೆ ಕೂಡ ಗಿಲ್ಲಿ ಬಳಿ ಕೆಲಸ ಮಾಡೋಕೆ ಮುಂದಾಗಿದ್ದಾರೆ.

Read more Photos on
click me!

Recommended Stories