Amruthadhaare: ಬಿಗ್​ ಶಾಕ್​ ಕೊಟ್ಟ ಮರಿ ಕೇಡಿ ಸುನಿ: ಮಲ್ಲಿಯನ್ನು ಲವ್​ ಮಾಡ್ತಿರೋದೆಲ್ಲಾ ನಾಟಕ!

Published : Feb 20, 2026, 11:54 AM IST

'ಅಮೃತಧಾರೆ' ಧಾರಾವಾಹಿಯಲ್ಲಿ ಸುನಿಲ್, ಮಲ್ಲಿಯನ್ನು ಪ್ರೀತಿಸುವ ನಾಟಕವಾಡುತ್ತಿದ್ದಾನೆ ಎಂಬ ಸತ್ಯ ಬಯಲಾಗಿದೆ. ತನ್ನ ಆದರ್ಶ ವ್ಯಕ್ತಿ ಗೌತಮ್ ದಿವಾನೇ ಮಲ್ಲಿಯ ಭಾವ ಎಂದು ತಿಳಿದು ಸುನಿಲ್‌ಗೆ ಆಘಾತವಾಗಿದ್ದು, ತಾನು ಗೌತಮ್‌ಗೇ ಮೋಸ ಮಾಡುತ್ತಿರುವುದಾಗಿ ನೊಂದುಕೊಂಡಿದ್ದಾನೆ.

PREV
16
ಮರಿ ರೌಡಿ ಸುನಿ

ಅಮೃತಧಾರೆಯಲ್ಲಿ ಮಲ್ಲಿಯ ಲೈಫ್​ ಸೆಟಲ್​ ಆಯ್ತು, ಸುನಿಲ್​ ನಿಜವಾಗಿಯೂ ಮಲ್ಲಿಯನ್ನು ಲವ್​ ಮಾಡ್ತಿದ್ದಾನೆ. ಅವನು ನಾಟಕ ಆಡ್ತಿಲ್ಲ ಎಂದೇ ಇಲ್ಲಿಯವರೆಗೆ ವೀಕ್ಷಕರು ಅಂದುಕೊಂಡಿದ್ದು ಉಂಟು.

26
ವೀಕ್ಷಕರಿಗೆ ಶಾಕ್​

ಆದರೆ, ಇದೀಗ ಸುನಿಲ್​ ವೀಕ್ಷಕರಿಗೆ ಶಾಕ್​ ಕೊಟ್ಟಿದ್ದಾನೆ. ಇವನು ಮೊದಲೇ ತನಗಿಂತ ಹಿರಿಯವಳಾದ ಮಲ್ಲಿಯನ್ನು ಲವ್​ ಮಾಡ್ತಿದ್ದ. ಈಗ ಅವನಿಗೆ ಜೈದೇವ್ ಕೊಟ್ಟಿರೋ ಟಾರ್ಗೆಟ್​ನಿಂದ ಅದು ಈಸಿಯಾಗಿದೆ. ಅವನು ಮನಸಾರೆ ಮಲ್ಲಿಯನ್ನು ಪ್ರೀತಿಸ್ತಾ ಇದ್ದಾನೆ ಎಂದೇ ಹಲವರು ಎಂದುಕೊಂಡಿದ್ದರೂ, ಇವನನ್ನು ನಂಬಬೇಡ ಮಲ್ಲಿ ಎಂದು ಮತ್ತೆ ಕೆಲವರು ಕಮೆಂಟ್​ ಹಾಕುತ್ತಿದ್ದುದೂ ಉಂಟು.

36
ಆದರ್ಶ ಗುರು

ಆದರೆ, ಇದೀಗ ಅವನ ಮೋಸದಾಟ ಬಯಲಾಗಿದೆ. ಅಷ್ಟಕ್ಕೂ ಸುನಿಲ್​ಗೆ ಮಲ್ಲಿಯೇ ಜೈದೇವನ ಹೆಂಡತಿ ಎನ್ನೋದು ಗೊತ್ತಿಲ್ಲ. ಆದರೆ ಗೌತಮ್​ ದಿವಾನ್​ ಆತನ ಆದರ್ಶ ಗುರು. ಅವನಂತೆಯೇ ತಾನೂ ಬೆಳೆಯಬೇಕು ಎನ್ನುವುದು ಅವನ ಆಸೆ. ಆದರೆ ಮಲ್ಲಿಗೂ ಗೌತಮ್​ಗೂ ಇರುವ ಸಂಬಂಧವೂ ಅವನಿಗೆ ತಿಳಿದಿಲ್ಲ.

46
ಮತ್ತೆ ಕರೆದ ಭೂಮಿಕಾ

ಇದೇ ಸಮಯದಲ್ಲಿ ಭೂಮಿಕಾ ಮಾತುಕತೆಗೆ ಮನೆಗೆ ಸುನಿಲ್​ನನ್ನು ಕರೆದಿದ್ದಳು. ಅವನ ಗುಣ ಆಕೆಗೆ ಹಿಡಿಸಿದ್ದರಿಂದ ಗೌತಮ್​ನನ್ನು ಭೇಟಿ ಮಾಡಿಸಲು ಮತ್ತೊಮ್ಮೆ ಕರೆದಿದ್ದಾಳೆ.

56
ಬೆಚ್ಚಿಬಿದ್ದ ಸುನಿಲ್​

ಸುನಿಲ್​ ಮನೆಗೆ ಬಂದಾಗ ಅಲ್ಲಿ ಗೌತಮ್​ನನ್ನು ನೋಡಿ ಬೆಚ್ಚಿಬಿದ್ದಿದ್ದಾನೆ ಸುನೀಲ್​. ಇವನೇ ಮಲ್ಲಿಯ ಭಾವ ಎನ್ನುವುದು ತಿಳಿದಿದೆ. ಅವನಿಗೆ ಶಾಕ್​ ಆಗಿ ಹೋಗಿದೆ.

66
ಗೌತಮ್​ಗೇ ಮೋಸ

ನಾನು ಗೌತಮ್​ ಅವರನ್ನು ಮೋಸ ಮಾಡ್ತಿದ್ದೇನಾ ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದಾನೆ. ಆತ ತುಂಬಾ ನೊಂದುಕೊಂಡಿದ್ದಾನೆ. ಇದರ ಅರ್ಥ ಆತ ಮಲ್ಲಿಯನ್ನು ಲವ್​ ಮಾಡ್ತಿರುವುದು ನಾಟಕ ಎನ್ನುವುದು ಸಾಬೀತಾಗಿದೆ. ಜೈದೇವನಿಗಾಗಿ ಆತ ಮಲ್ಲಿಯನ್ನು ಲವ್​ ಮಾಡುತ್ತಿದ್ದಾನೆ ಎನ್ನುವುದು ತಿಳಿದು ವೀಕ್ಷಕರು ಶಾಕ್​ ಆಗಿದ್ದಾರೆಎ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories