Amruthadhaare: ವೀಕ್ಷಕರು ಕಾಯ್ತಿದ್ದ ಆ ದಿನ ಬಂದಾಯ್ತು; ಗೌತಮ್​-ಭೂಮಿ ಅಸಲಿ ಮಗಳು ಪತ್ತೆಯಾಯ್ತು

Published : May 20, 2026, 12:04 PM IST

ಅಮೃತಧಾರೆ ಸೀರಿಯಲ್‌ನಲ್ಲಿ ರೋಚಕ ತಿರುವು ಸಿಕ್ಕಿದ್ದು, ಗೌತಮ್-ಭೂಮಿಕಾಳ ಮಗಳು ಮಿಂಚು ಎಂಬ ಸತ್ಯ ಮಚ್ಚೆಯ ಗುರುತಿನಿಂದ ಶಕುನಿಮಾಮಾಗೆ ತಿಳಿದಿದೆ. ಇದೇ ಸತ್ಯ ಜೈದೇವ್‌ಗೂ ಗೊತ್ತಾಗಿದ್ದು, ಗೌತಮ್‌ಗೆ ಇನ್ನೂ ವಿಷಯ ತಲುಪಿಲ್ಲ, ಇದು ಕಥೆಯಲ್ಲಿ ಹೊಸ ಕುತೂಹಲ ಮೂಡಿಸಿದೆ.

PREV
15
ರೋಚಕ ಟ್ವಿಸ್ಟ್​

ಅಮೃತಧಾರೆ ಸೀರಿಯಲ್​ (Amruthadhaare Serial) ರೋಚಕ ಟ್ವಿಸ್ಟ್​ ಸಿಕ್ಕಿದೆ. ಭೂಮಿಕಾ ಮತ್ತು ಗೌತಮ್​ ಮಗಳು ಯಾರು, ಮಿಂಚುನೇ ಅವರ ಮಗಳಾ ಅಥವಾ ಬೇರೆ ಯಾರಾದ್ರೂ ಇದ್ದಾರಾ ಎನ್ನುವ ಬಗ್ಗೆ ವೀಕ್ಷಕರು ಸಿಕ್ಕಾಪಟ್ಟೆ ಕುತೂಹಲದಿಂದ ಇದ್ದರು.

25
ಸಿಕ್ಕಳು ಗೌತಮ್​ ಪುತ್ರಿ

ಇದೀಗ ಅಖಿಲಾಂಡೇಶ್ವರಿ ಗೌತಮ್​ ಪುತ್ರಿಯನ್ನು ಕಂಡುಹಿಡಿದಿದ್ದಾಳೆ. ಈ ಬಗ್ಗೆ ಗೌತಮ್​ಗೆ ಹೇಳೋಣ ಎಂದ್ರೆ ಅವನು ಕಾಲ್​ ಪಿಕ್​ ಮಾಡಲಿಲ್ಲ ಎನ್ನೋ ಕಾರಣಕ್ಕೆ ಶಕುನಿಮಾಮಾಗೆ ಹೇಳಿದ್ದಾಳೆ.

35
ಜೈದೇವ್​ಗೆ ವಿಷ್ಯ

ಅದೇ ಇನ್ನೊಂದೆಡೆ ಜೈದೇವ್​ಗೂ ಈ ವಿಷಯ ಗೊತ್ತಾಗಿಬಿಟ್ಟಿದೆ. ಭೂಮಿಕಾ ಮಗಳು ಎಲ್ಲಿದ್ದಾಳೆ ಎನ್ನುವ ಸತ್ಯದ ಅರಿವಾಗಿದ್ದು, ಅವಳ ವಿಳಾಸ ಸಿಕ್ಕಿದೆ.

45
ಡಿಟೇಲ್ಸ್​ ಕಲೆಕ್ಟ್​ ಮಾಡಿದ ಲಕ್ಷ್ಮೀಕಾಂತ

ಸದ್ಯ ಶಕುನಿಮಾಮಾ ಕಲೆಕ್ಟ್​ ಮಾಡಿರುವ ಮಾಹಿತಿಯ ಪ್ರಕಾರ, ಮಿಂಚುನೇ ಅವರ ಪುತ್ರಿ. ಕೈಮೇಲೆ ತ್ರಿಶೂಲ ಆಕೃತಿಯ ಮಚ್ಚೆ ಇರುವ ಡಿಟೇಲ್ಸ್​ ಎಲ್ಲಾ ಪಡೆದುಕೊಂಡಿರುವ ಲಕ್ಷ್ಮೀಕಾಂತನಿಗೆ ಮಿಂಚುನೇ ಅಸಲಿ ಪುತ್ರಿ ಎನ್ನುವುದು ತಿಳಿದಿದೆ.

55
ವೀಕ್ಷಕರ ಆಸೆ ನೆರವೇರಿತು

ಅತ್ತ ಜೈದೇವ ಮಗುವಿನ ಹುಡುಕಾಟದಲ್ಲಿ ಇದ್ದಾನೆ. ಇತ್ತ ಶಕುನಿಮಾಮಾ ವಿಷಯವನ್ನು ಗೌತಮ್​ಗೆ ತಿಳಿಸಿಲ್ಲ. ಸದ್ಯದ ಪ್ರಕಾರ, ಮಚ್ಚೆ ಆಧಾರ ಹಾಗೂ ಮಿಂಚು ಸಿಕ್ಕಿರುವ ರೀತಿಯೆಲ್ಲಾ ನೋಡಿದ ಮೇಲೆ ಲಕ್ಷ್ಮೀಕಾಂತಗೆ ಮಿಂಚುನೇ ಮಗಳು ಎನ್ನುವ ಸತ್ಯ ತಿಳಿಯುವ ಮೂಲಕ, ವೀಕ್ಷಕರ ಬಹು ದಿನಗಳ ಆಸೆ ನೆರವೇರಿದೆ. ಆದರೆ ಮುಂದೇನು?

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories