ಗೌತಮ್ ಮತ್ತು ಆಕಾಶ್ ಒಂದಾಗುವ ಸಮಯ ಹತ್ತಿರವಾಗುತ್ತಿದ್ದಂತೆ, ಭೂಮಿಕಾ ಎಂಎಲ್ಎ ಮಗನ ವಿರುದ್ಧ ತೆಗೆದುಕೊಂಡ ನಿರ್ಧಾರದಿಂದ ಆಕಾಶ್ ಅಪಹರಣಕ್ಕೊಳಗಾಗುವ ಅಪಾಯದಲ್ಲಿದ್ದಾನೆ. ಈ ಸಂಕಷ್ಟದಿಂದ ಗೌತಮ್ ತನ್ನ ಮಗನನ್ನು ಪಾರುಮಾಡಿ, ಭೂಮಿಕಾ ಜೊತೆ ಒಂದಾಗುತ್ತಾನೆಯೇ ಎನ್ನುವುದು ಕಥೆಯ ಪ್ರಮುಖ ತಿರುವು.
ಅಮೃತಧಾರೆ (Amruthadhaare Serial) ನಲ್ಲಿ ಈಗಾಗಲೇ ಗೌತಮ್ ಮತ್ತು ಆಕಾಶ್ ಒಂದಾಗುವ ಟೈಮ್ ಬಂದಿದೆ. ಇಬ್ಬರೂ ಇದಾಗಲೇ ಕ್ಲೋಸ್ ಆಗಿದ್ದರೂ ಆಕಾಶ್ಗೆ ಗೌತಮ್ನೇ ತನ್ನ ಅಪ್ಪ ಎನ್ನುವುದು ಇನ್ನೂ ತಿಳಿದಿಲ್ಲ. ನಿಮ್ಮ ಮಗ ಸಿಕ್ಕನಾ ಎಂದಾಗ ಗೌತಮ್ ಹೌದು ಸಿಕ್ಕಿದ್ದಾನೆ, ಶಾಲೆ ಮುಗಿಸಿ ಬಾ ಎಲ್ಲಾ ಹೇಳ್ತೇನೆ ಎಂದಿದ್ದಾನೆ.
27
ಭೂಮಿಕಾ ಮುಂದಿನ ನಡೆ
ಆಕಾಶ್ ಗೌತಮ್ ಬಳಿ ಮಾತನಾಡುವುದನ್ನು ಭೂಮಿಕಾ ನೋಡಿದ್ದಾಳೆ. ಅಪ್ಪ-ಮಗನ ಬಾಂಡಿಂಗ್ ನೋಡಿ ಆಕೆಗೆ ಕಣ್ಣೀರು ಬಂದಿದೆ. ಆದರೆ ಆಕೆಯ ಮುಂದಿನ ನಡೆ ಏನು? ಗೌತಮ್ ಮತ್ತು ಮಗನನ್ನು ಒಂದು ಮಾಡುತ್ತಾಳೊ ಇಲ್ಲವೋ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.
37
ಆಕಾಶ್ ಕಿಡ್ನ್ಯಾಪ್ಗೆ ಹೊಂಚು
ಅದೇ ಸಮಯದಲ್ಲಿ ಆಕಾಶ್ನನ್ನು ಕಿಡ್ನ್ಯಾಪ್ ಮಾಡಲು ಅಪಹರಣಕಾರ ಹೊಂಚು ಹಾಕಿ ಕೂತಿದ್ದಾನೆ. ಅದು ಯಾರಿಗೂ ಗೊತ್ತಿಲ್ಲ. ಭೂಮಿಕಾ ಮತ್ತು ಆಕಾಶ್ ಶಾಲೆಗೆ ಬರುತ್ತಿರುವ ಸಮಯದಲ್ಲಿ, ಶಾಲೆಯ ಬಸ್ ಹಿಂದೆ ನಿಂತು ಆತ ಹೊಂಚು ಹಾಕುತ್ತಿದ್ದಾನೆ. ಇದರಿಂದ ಆಕಾಶ್ ಅಪಹರಣ ಆಗುವುದು ಕನ್ಫರ್ಮ್ ಆಗಿದೆ.
ಅದೇನೇ ಇದ್ದರೂ ಇದೀಗ ಗೌತಮ್ಗೆ ಮಗ ಸಿಕ್ಕನಲ್ಲ ಎನ್ನುವ ಖುಷಿ ಅಷ್ಟೆ. ಭೂಮಿಕಾ ಮನಸ್ಸನ್ನು ಪರಿವರ್ತಿಸಲು ಮಲ್ಲಿ ಕೂಡ ಪ್ರಯತ್ನ ಮಾಡ್ತಿರೋ ಕಾರಣದಿಂದ ಅವಳ ಮನಸ್ಸು ಕೂಡ ಬದಲಾಗಬಹುದು. ಆದರೆ ಇದರ ನಡುವೆಯೇ ಇದೀಗ ಭಾರಿ ಟ್ವಿಸ್ಟ್ ಸಿಕ್ಕಿದೆ.
57
ಎಂಎಲ್ಎ ಮಗನಿಂದ ಸಮಸ್ಯೆ
ಹೀಗೆ ಮಗನನ್ನು ಕಿಡ್ನ್ಯಾಪ್ ಮಾಡಲು ಕಾರಣ ಭೂಮಿಕಾ ಎಂಎಲ್ಎ ಮಗನ ಮೇಲೆ ಆ್ಯಕ್ಷನ್ ತೆಗೆದುಕೊಂಡಿರೋದು. ಅವನ ಮಗ ಶಾಲೆಯಲ್ಲಿ ಸ್ಮೋಕ್ ಮಾಡುತ್ತಿದ್ದ ಕಾರಣಕ್ಕೆ, ಅಪ್ಪನನ್ನು ಕರೆಸಿ ಬುದ್ಧಿ ಹೇಳಿಸಿದ್ದಳು. ಇದು ಎಂಎಲ್ಎ ಕೋಪಕ್ಕೆ ಕಾರಣವಾಗಿದೆ. ತನ್ನದಲ್ಲದ ತಪ್ಪಿಗೆ ಭೂಮಿಕಾಳು ಈಗ ಕ್ಷಮೆ ಕೋರಿ ಪತ್ರ ಬರೆದುಕೊಡಬೇಕಿದೆ. ಆದರೆ ಸ್ವಾಭಿಮಾನಿ ಭೂಮಿಕಾ ಹಾಗೆ ಮಾಡಲು ಒಪ್ಪುತ್ತಿಲ್ಲ.
67
ಕ್ಷಮೆ ಕೋರಲು ಒಪ್ಪದ ಭೂಮಿಕಾ
ಬೇರೆ ಟೀಚರ್ಸ್ ಹೇಳಿದರೂ ಆಕೆ ಅದನ್ನು ಒಪ್ಪಲಿಲ್ಲ. ಇದೇ ಕಾರಣಕ್ಕೆ ಈಗ ಆತನಿಂದ ಭೂಮಿಕಾ ಪ್ರಾಣಕ್ಕೆ ಅಪಾಯ ಇದೆ ಎನ್ನುವುದಂತೂ ಸುಳ್ಳಲ್ಲ. ರಾಜಕಾರಣಿಗಳು ಎಂದರೆ ಅಷ್ಟು ಸುಲಭ ಅಲ್ಲವಲ್ಲ! ಆತ ಇನ್ನೇನು ಮಾಡ್ತಾನೋ ಎನ್ನುವ ಭಯ ವೀಕ್ಷಕರಿಗೆ.
77
ಗೌತಮ್ ಕಾಪಾಡ್ತಾನಾ?
ಈ ಕಾರಣದಿಂದ ಭೂಮಿಕಾ ಜೀವಕ್ಕೆ ಅಪಾಯ ಎನ್ನುವ ಸ್ಥಿತಿ ಇತ್ತು. ಆದರೆ ಈಗ ಬಿಟ್ಟಿರೋ ಪ್ರೊಮೋ ನೋಡಿದರೆ, ಆಕಾಶ್ನನ್ನು ಕಿಡ್ನ್ಯಾಪ್ ಮಾಡುವ ಎಲ್ಲಾ ಸಾಧ್ಯತೆ ಕಾಣಿಸುತ್ತಿದೆ. ಆಕಾಶ್ನನ್ನು ಗೌತಮ್ ಕಾಪಾಡ್ತಾನಾ? ಇದರಿಂದ ಭೂಮಿಕಾ ಮತ್ತು ಗೌತಮ್ ಒಂದಾಗ್ತಾರಾ ಎಂದು ನೋಡಬೇಕಿದೆ.