ಅಮೃತಧಾರೆ ಧಾರಾವಾಹಿಯಲ್ಲಿ ಮಹಿಮಾ ಪಾತ್ರದಲ್ಲಿ ನಟಿಸುತ್ತಿದ್ದ ಸಾರಾ ಅಣ್ಣಯ್ಯ ಇದ್ದಕ್ಕಿದ್ದಂತೆ ಸೀರಿಯಲ್ ನಿಂದ ಹೊರ ನಡೆದಿದ್ದರು. ಬಳಿಕ ನಟನೆಯಿಂದಲೇ ದೂರ ಉಳಿದಿದ್ದ ನಟಿ ಇದೀಗ ಸೀರೀಸ್ ಒಂದರಲ್ಲಿ ನಟ ಅಭಿಷೇಕ್ ಶ್ರೀಕಾಂತ್ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ.
ಜೀ ಕನ್ನಡ ವಾಹಿನಿಯ ಜನಪ್ರಿಯ ಅಮೃತಧಾರೆ ಧಾರಾವಾಹಿಯಲ್ಲಿ ಮಹಿಮಾ ಪಾತ್ರದಲ್ಲಿ ನಟಿಸಿದ್ದ ಸಾರಾ ಅಣ್ಣಯ್ಯ (Sara Annaiah), ಇದ್ದಕ್ಕಿದ್ದಂತೆ ಸೀರಿಯಲ್ ನಿಂದ ಹೊರ ನಡೆದಿದ್ದರು. ನಂತರ ನಟನೆಯಿಂದಲೇ ದೂರ ಉಳಿದಿದ್ದ ಸಾರಾ ಇದೀಗ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
27
ಮಿನಿ ಸೀರೀಸ್ ನಲ್ಲಿ ಸಾರಾ
ಸಾರಾ ಅಣ್ಣಯ್ಯ ಇಷ್ಟು ದಿನ ತೆರೆ ಮೇಲಿನಿಂದಲೇ ನಾಪತ್ತೆಯಾಗಿದ್ದರು. ಇದೀಗ ನಟಿ ಮತ್ತೆ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿದ್ದಾರೆ. ಆದರೆ ಈ ಬಾರಿ ಯಾವುದೇ ಸೀರಿಯಲ್ ಸಿನಿಮಾ ಮೂಲಕ ಅಲ್ಲ, ಮಿನಿ ಸೀರೀಸ್ (mini serieis) ನಲ್ಲಿ ನಟಿಸಿದ್ದಾರೆ ಸಾರಾ ಅಣ್ಣಯ್ಯ.
37
ಲವ್ ಮಿ ಇಫ್ ಯೂ ಡೇರ್
ಇದು ಮಿನಿ ಸೀರೀಸ್ ಗಳ ಯುಗ. ಜನರು ಹೆಚ್ಚಾಗಿ ಮೊಬೈಲ್ ಅವಲಂಭಿಸಿರೋದರಿಂದ ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲೂ ಹಲವಾರು ಮಿನಿ ಸೀರೀಸ್ ಗಳು ಬರುತ್ತಿದೆ. ಅದರಲ್ಲಿ ಒಂದು ಸೀರೀಸ್ ಲವ್ ಮಿ ಇಫ್ ಯೂ ಡೇರ್. ಕುಕು ಎಫ್ ಎಂ ನಲ್ಲಿ ಪ್ರಸಾರವಾಗುತ್ತಿದೆ.
ಸೀರಿಯಲ್ ಗಳಲ್ಲಿ ಖಳನಾಯಕಿ ಶೇಡ್ ಇರುವ ಅಥವಾ ಸೈಡ್ ರೋಲ್ ನಲ್ಲಿ ಮಿಂಚುತ್ತಿದ್ದ ಸಾರಾ ಅಣ್ಣಯ್ಯ ಇದೀಗ ‘ಲವ್ ಮಿ ಇಫ್ ಯೂ ಡೇರ್’ (love me if you dare) ಸೀರೀಸ್ ನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ರೋಮ್ಯಾಂಟಿಕ್ ದೃಶ್ಯಗಳಲ್ಲೂ ಕಾಣಿಸಿಕೊಂಡಿದ್ದಾರೆ.
57
ಅಭಿಷೇಕ್ ಶ್ರೀಕಾಂತ್ ಗೆ ನಾಯಕಿ
ಲಕ್ಷಣ ಸೀರಿಯಲ್ ನಲ್ಲಿ ವಿಲನ್ ಆಗಿ, ಸದ್ಯ ಸಿನಿಮಾಗಳಲ್ಲಿ ನಟಿಸುತ್ತಿರುವ ಅಭಿಷೇಕ್ ಶ್ರೀಕಾಂತ್ ಗೆ (Abhishek Sreekanth)ನಾಯಕಿಯಾಗಿ ಸಾರಾ ನಟಿಸಿದ್ದಾರೆ. ಮುಂಗೋಪಿ ನವಮಿಯಾಗಿ ಸಾರಾ ಹಾಗೂ ಅಹಂ ತುಂಬಿದ ಅಭಿನವ್ ಆಗಿ ಅಭಿಷೇಕ್ ನಟಿಸಿದ್ದಾರೆ.
67
ರೋಮ್ಯಾನ್ಸ್ ಬಲು ಜೋರು
ಸಾರಾ ಅಣ್ಣಯ್ಯ ಅವರದ್ದು ಈ ಸೀರೀಸ್ ನಲ್ಲಿ ಮುಂಗೋಪ ಜಾಸ್ತಿ ಇರುವ ಬೋಲ್ಡ್ ಹುಡುಗಿ, ಆದರೆ ಕೆಟ್ಟವಳು ಅಲ್ಲ. ಈ ಸೀರೀಸ್ ನಲ್ಲಿ ಅಭಿಷೇಕ್ ಜೊತೆ ಸಾರಾ ರೊಮ್ಯಾನ್ಸ್ ಕೂಡ ಮಾಡಿದ್ದಾರೆ. ಕಿರುತೆರೆ ನಟ ಅಥರ್ವ ಕೂಡ ಇದರಲ್ಲಿ ನಟಿಸಿದ್ದಾರೆ.
77
ಕನ್ನಡತಿಯ ವರೂಧಿನಿಯಾಗಿ ಎಂಟ್ರಿ
ಸಾರಾ ಅಣ್ಣಯ್ಯ ನಟನೆಗೆ ಎಂಟ್ರಿ ಕೊಟ್ಟದ್ದು, ಜನಪ್ರಿಯ ಧಾರಾವಾಹಿ ಕನ್ನಡತಿ (Kannadati serial) ಮೂಲಕ. ಈ ಧಾರಾವಾಹಿಯಲ್ಲಿ ವರೂಧಿನಿಯಾಗಿ, ಭುವಿಯ ಬೆಸ್ಟ್ ಫ್ರೆಂಡ್, ಹರ್ಷನನ್ನು ಲವ್ ಮಾಡುವ ಹುಡುಗಿಯ ಪಾತ್ರದಲ್ಲಿ ನಟಿಸಿದ್ದರು. ಆ ಪಾತ್ರವನ್ನು ಜನ ಸಿಕ್ಕಾಪಟ್ಟೆ ಇಷ್ಟ ಪಟ್ಟಿದ್ದರು.