Amruthadhaare Serial: ಮಿಡಲ್ ಕ್ಲಾಸ್ ಫ್ಯಾಮಿಲಿ ಬಗ್ಗೆ ವ್ಯಂಗ್ಯವಾಡಿದ ಅಮೃತಧಾರೆ ದಿಯಾ… ಡ್ರಿಂಕ್ಸ್ ಮಾಡೋದು ಶ್ರೀಮಂತರ ಲಕ್ಷಣಾನ?

Published : Sep 26, 2025, 02:49 PM IST

ಅಮೃತಧಾರೆ ಧಾರಾವಾಹಿಯಲ್ಲಿ ಶಾಕುಂತಲಾ, ಜೈದೇವ್ ನಿಂದ ಆಸ್ತ್ರಿಯನ್ನು ತನ್ನ ಕಂಟ್ರೋಲ್ ಗೆ ತರಲು ಪ್ಲ್ಯಾನ್ ಮಾಡುತ್ತಿರುವ ದಿಯಾ, ಇದೀಗ ಮಿಡಲ್ ಕ್ಲಾಸ್ ಫ್ಯಾಮಿಲಿ ಬಗ್ಗೆ ಮಾತನಾಡಿ, ಅಪ್ಪಿ ಕೈಯಲ್ಲಿ ಚೆನ್ನಾಗಿ ಉಗಿಸಿಕೊಂಡಿದ್ದಾರೆ. ಹಾಗಿದ್ರೆ ಡ್ರಿಂಕ್ಸ್ ಮಾಡೋದು ಶ್ರೀಮಂತರ ಲಕ್ಷಣಾನ?

PREV
16
ಅಮೃತಧಾರೆ ಸೀರಿಯಲ್

ಅಮೃತಧಾರೆ ಧಾರಾವಾಹಿಯಲ್ಲಿ ಒಂದು ಕಡೆ ಭೂಮಿಕಾ- ಗೌತಮ್ ಕಥೆ ನಡೆಯುತ್ತಿದ್ದರೆ, ಮತ್ತೊಂದು ಕಡೆ ಜೈದೇವ್ ಗೆ ಬ್ಯುಸಿನೆಸ್ ನಲ್ಲಿ ಹೊಡೆದ ಬಿದ್ದರೆ, ಶಾಕುಂತಲಾ ಕ್ಲಬಿಂಗ್ ಮಾಡಿಕೊಂಡು ಕೋಟಿ ರೂಪಾಯಿ ವ್ಯರ್ಥ ಮಾಡುತ್ತಿದ್ದಾರೆ.

26
ಆಸ್ತಿಯನ್ನು ಕಂಟ್ರೋಲ್ ಮಾಡಲು ದಿಯಾ ಪ್ಲ್ಯಾನ್

ಇದೀಗ ಜೈದೇವ್ ಮುದ್ದಿನ ಪತ್ನಿ ದಿಯಾ, ಹೀಗೆ ಹೋದ್ರೆ ಆಸ್ತಿ ಯಾವುದೂ ನಮ್ಮ ಕೈಗೆ ಸಿಗದೆ ಬೀದಿ ಪಾಲಾಗಬಹುದು ಎನ್ನುವ ಭಯದಿಂದ ಆಸ್ತಿಯನ್ನು ತನ್ನ ಕಂಟ್ರೋಲ್ ಗೆ ಪಡೆದುಕೊಳ್ಳಲು ಪ್ಲ್ಯಾನ್ ಮಾಡ್ತಿದ್ದಾಳೆ. ಅದಕ್ಕಾಗಿ ಜೈ ದೇವ್ ಡ್ರಿಂಕ್ಸ್ ನಲ್ಲಿ ಏನನ್ನೋ ಬೆರೆಸುತ್ತಿದ್ದಾಳೆ.

36
ಬುದ್ಧಿಮಾತು ಹೇಳಿದ ಅಪ್ಪಿ

ಬೆಳಗ್ಗೆ ಬೆಳಗ್ಗೆ ಗಂಡನಿಗೆ ಡ್ರಿಂಕ್ಸ್ ತಯಾರಿಸಿ ಕೊಡುತ್ತಿರುವ ದಿಯಾಳನ್ನು ನೋಡಿ ಅಪ್ಪಿ ಬುದ್ದಿಮಾತು ಹೇಳುತ್ತಾ, ನೀವು ಜೈದೇವ್ ಹೆಂಡ್ತಿಯಾಗಿ, ಅವರಿಗೆ ಬುದ್ದಿ ಮಾತು ಹೇಳಿ ಕಂಟ್ರೋಲಲ್ಲಿ ಇಡೋದು ಬಿಟ್ಟು, ನೀವೆ ಬೆಳಿಗ್ಗೆ ಬೆಳಿಗ್ಗೆ ಕುಡೀಯೋಕೆ ಕೊಡೋದು ಸರೀನಾ ಎನ್ನುವ ಪ್ರಶ್ನೆ ಕೇಳುತ್ತಾಳೆ.

46
ಮಿಡಲ್ ಕ್ಲಾಸ್ ಫ್ಯಾಮಿಲಿ ಬಗ್ಗೆ ವ್ಯಂಗ

ಅಪ್ಪಿ ಬುದ್ದಿ ಮಾತು ಕೇಳಿ ವ್ಯಂಗ್ಯವಾಡುವ ದಿಯಾ, ಅವರಿಗೆ ಏನು ಇಷ್ಟಾನೋ, ಅದನ್ನೆ ನಾನು ಮಾಡಬೇಕು, ಅವರ ಹೆಂಡ್ತಿಯಾಗಿ ಅವರನ್ನು ಖುಷಿಯಾಗಿ ಇಟ್ಟುಕೊಳ್ಳೋದು ನನ್ನ ಜವಾಬ್ಧಾರಿ, ನಾನು ಅದನ್ನೇ ಮಾಡ್ತಿದ್ದೀನಿ, ನೀವು ಮಿಡಲ್ ಕ್ಲಾಸ್ ಫ್ಯಾಮಿಲಿಯಿಂದ ಬಂದಿದ್ದೀರಲ್ಲ, ನಿಮಗೆ ಇದೆಲ್ಲಾ ಗೊತ್ತಾಗಲ್ಲ ಎಂದು ವ್ಯಂಗ್ಯವಾಡುತ್ತಾಳೆ ದಿಯಾ.

56
ಕಿಡಿ ಕಾರಿದ ಅಪ್ಪಿ

ದಿಯಾ ಮಾತಿನಿಂದ ಕೋಪಗೊಳ್ಳುವ ಅಪ್ಪಿ, ಒಂದು ವಿಷ್ಯ ನೆನಪಿರಲಿ, ಲೋ ಕ್ಲಾಸ್ ಇರಲಿ, ಹೈ ಕ್ಲಾಸ್ ಇರಲಿ ಬದುಕೋದಕ್ಕೆ ವ್ಯಾಲ್ಯೂಸ್ ತುಂಬಾನೆ ಮುಖ್ಯ. ನಮ್ಮ ಸ್ಟೇಟಸ್ ಅನ್ನೋದು ಕ್ಲಾಸ್ ನೋಡಿ ಡಿಸೈಡ್ ಆಗೋದು ಅಲ್ಲ, ನಾವು ಹೇಗೆ ಇದ್ದೀವಿ ಅನ್ನೋದರ ಮೇಲೆ ಡಿಸೈಡ್ ಆಗೋದು ಎನ್ನುತ್ತಾಳೆ.

66
ಮಿಡಲ್ ಕ್ಲಾಸ್ ವ್ಯಾಲ್ಯೂ ಅಂದ್ರೆ ಏನು?

ದಿಯಾ ಮಾತಿನ ಪ್ರಕಾರ ಮಿಡಲ್ ಕ್ಲಾಸ್ ಅಂದ್ರೆ ಏನು? ಶ್ರೀಮಂತಿಕೆ ಅಂದ್ರೆ ಏನು? ಬೆಳಗ್ಗೆ ಎದ್ದು ಕುಡಿಯೋದು ಶ್ರೀಮಂತರ ಕ್ಲಾಸ್ ತೋರಿಸುತ್ತಾ? ದಿಯಾ ಕೊಂಕು ನುಡಿಗೆ ಸರಿಯಾಗಿಯೇ ಉತ್ತರ ಕೊಟ್ಟು, ಮಿಡಲ್ ಕ್ಲಾಸ್ ಮೈಂಡ್ ಸೆಟ್ ದಿಯಾದ್ದು ಎಂದು ತೋರಿಸಿಕೊಟ್ಟಿದ್ದಾಳೆ ಅಪ್ಪಿ.

Read more Photos on
click me!

Recommended Stories