ವರ್ಷದ ಹಿಂದೆ ಹುಟ್ಟಿದ ಮಕ್ಕಳ ಜೊತೆ ಒಟ್ಟಿಗೆ ನವರಾತ್ರಿ ಆಚರಿಸಿ Lakshmi Baramma Serial ನೇಹಾ ಗೌಡ, ಕವಿತಾ ಗೌಡ

Published : Sep 25, 2025, 10:05 PM IST

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಚ್ಚಿ, ಗೊಂಬೆ ಪಾತ್ರ ಭಾರೀ ಫೇಮಸ್‌ ಆಗಿತ್ತು. ಈ ಸೀರಿಯಲ್‌ ಮುಗಿದ ಬಳಿಕ ಕೂಡ ಇವರಿಬ್ಬರ ಸ್ನೇಹ ಹಾಗೆ ಮುಂದುವರೆದಿತ್ತು. ಈಗ ಇವರಿಬ್ಬರು ಒಂದಾಗಿ ನವರಾತ್ರಿ ಆಚರಣೆಯಲ್ಲಿ ಭಾಗಿಯಾಗಿದ್ದಾರೆ. 

PREV
15
ಮಕ್ಕಳು ಭಾಗಿ

ನಟಿ ನೇಹಾ ರಾಮಕೃಷ್ಣ ಹಾಗೂ ಕವಿತಾ ಗೌಡ, ಸೋನು ಗೌಡ ಅವರು ನವರಾತ್ರಿ ಆಚರಣೆಯಲ್ಲಿ ಭಾಗಿಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಕವಿತಾ ಗೌಡ ಮಗ, ನೇಹಾ ರಾಮಕೃಷ್ಣರ ಮಗಳು ಶಾರದಾ ಕೂಡ ಭಾಗಿಯಾಗಿದ್ದರು.

25
ನವರಾತ್ರಿ ಆಚರಣೆ

ಒಟ್ಟಿನಲ್ಲಿ ತಾಯಿಯಾದ ಮೇಲೆ ಕೂಡ ನೇಹಾ ಗೌಡ, ಕವಿತಾ ಗೌಡ ಅವರು ಒಟ್ಟಿಗೆ ಮಕ್ಕಳ ಜೊತೆಗೆ ನವರಾತ್ರಿ ಆಚರಿಸಿರುವುದು ವಿಶೇಷವಾಗಿದೆ.

35
ನೇಹಾ ಮಗಳು ಶಾರದಾ

ನೇಹಾ ಗೌಡ ಅವರು ಮಗಳಿಗೆ ಶಾರದಾ ಎಂದು ಹೆಸರಿಟ್ಟಿದ್ದಾರೆ. ಸದ್ಯ ಅವರು ಕಿರುತೆರೆಯಿಂದ ದೂರ ಇದ್ದಾರೆ. ಆಗಾಗ ಮಗಳ ಜೊತೆಗಿನ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

45
ಶಾರದಾ ಕಂಡರೆ ಇಷ್ಟ

ಇನ್ನು ಶಾರದಾ ಕಂಡರೆ ನೇಹಾ ಗೌಡ ಅಕ್ಕ ಸೋನು ಗೌಡ, ಅನುಪಮಾ ಗೌಡಗೆ ತುಂಬ ಇಷ್ಟ. ಇವರು ಕೂಡ ಶಾರದಾ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

55
ತೆರೆಯಿಂದ ದೂರ ಇರುವ ನೇಹಾ, ಕವಿತಾ ಗೌಡ

ಕವಿತಾ ಗೌಡ ಹಾಗೂ ನೇಹಾ ಗೌಡ ಅವರು ಸದ್ಯ ತೆರೆಯಿಂದ ದೂರ ಇದ್ದಾರೆ. ಇವರು ಯಾವಾಗ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.

Read more Photos on
click me!

Recommended Stories