Amruthadhaare Serial ಭೂಮಿಕಾ ಕೈಯಲ್ಲೆಲ್ಲಾ ರಕ್ತ! ​ ವಿಡಿಯೋ ನೋಡಿ ಫ್ಯಾನ್ಸ್​ ಶಾಕ್​- ಏನಿದು ಟ್ವಿಸ್ಟ್​

Published : May 20, 2026, 12:46 PM IST

'ಅಮೃತಧಾರೆ' ಖ್ಯಾತಿಯ ನಟಿ ಛಾಯಾ ಸಿಂಗ್ ಅವರ ರಕ್ತಸಿಕ್ತ ವಿಡಿಯೋವೊಂದು ವೈರಲ್ ಆಗಿದ್ದು, ಅನೇಕರು ಇದು ಸೀರಿಯಲ್‌ನ ದೃಶ್ಯವೆಂದು ಭಾವಿಸಿದ್ದಾರೆ. ಆದರೆ, ಈ ವೈರಲ್ ವಿಡಿಯೋ 2004ರಲ್ಲಿ ತೆರೆಕಂಡ 'ಭೈರತಿ ರಣಗಲ್' ಸಿನಿಮಾದ್ದು ಎಂದು ಈ ಲೇಖನವು ಸತ್ಯವನ್ನು ಬಹಿರಂಗಪಡಿಸುತ್ತದೆ.

PREV
16
ಅಮೃತಧಾರೆಯ ಭೂಮಿಕಾ-ಗೌತಮ್​

ಅಮೃತಧಾರೆ ಸೀರಿಯಲ್​ (Amruthadhaare Serial) ಎಂದಾಕ್ಷಣ ಸೀರಿಯಲ್​ ಪ್ರೇಮಿಗಳ ಕಣ್ಣೆದುರು ಬರುವುದು ಗೌತಮ್​ ಮತ್ತು ಭೂಮಿಕಾ ಅವರ ಲವ್​ಸ್ಟೋರಿ. ಇದ್ದರೆ ಹೀಗಿರಬೇಕು ದಂಪತಿ ಎನ್ನುವ ಪ್ರೀತಿ ಅವರದ್ದು. ಹಲವರಿಗೆ ಈ ದಂಪತಿಗಳೇ ಮಾದರಿಯಾಗಿದ್ದೂ ಉಂಟು.

26
ನಟನೆಯಲ್ಲಿ ಎತ್ತಿದ ಕೈ

ಗೌತಮ್​ ಪಾತ್ರದಲ್ಲಿ ರಾಜೇಶ್​ ನಟರಂಗ ನಟಿಸುತ್ತಿದ್ದರೆ, ಭೂಮಿಕಾ ಪಾತ್ರದಲ್ಲಿ ಛಾಯಾ ಸಿಂಗ್​ (Chaya Singh) ನಟಿಸುತ್ತಿದ್ದಾರೆ. ಇಬ್ಬರದ್ದೂ ಒಬ್ಬರನ್ನೊಬ್ಬರು ಮೀರಿಸುವ ಅಭಿನಯ. ತಮ್ಮ ಅಭಿನಯದಿಂದಲೇ ಜನರನ್ನು ಮೋಡಿ ಮಾಡಿರುವ ಕಲಾವಿದರು ಇವರು.

36
ಏನಿದು ವೈರಲ್​ ವೀಡಿಯೊ?

ಇದೀಗ ಛಾಯಾ ಸಿಂಗ್​ ಅವರ ವಿಡಿಯೋ ಒಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗ್ತಿದೆ. ss.movies9 ಈ ವಿಡಿಯೋ ಶೇರ್​ ಮಾಡಿಕೊಂಡಿದೆ. ಅದರಲ್ಲಿ ಅವರು ಗಾಬರಿ ಬಿದ್ದಿದ್ದಾರೆ. ಕೈಯಲ್ಲಿ ರಕ್ತವಿದೆ. ಅಲ್ಲೊಂದು ವಿಚಿತ್ರ ಆಕೃತಿಯೂ ನಿಂತಿದೆ. ಇದನ್ನು ನೋಡಿ ಕೆಲವರು ಅಮೃತಧಾರೆ ಸೀರಿಯಲ್​ ಎಂದುಕೊಂಡು ಬಿಟ್ಟಿದ್ದಾರೆ.

46
ಸೀರಿಯಲ್​ದು ಅಲ್ಲ ಇದು

ಅಸಲಿಗೆ ಛಾಯಾ ಸಿಂಗ್​ ಅವರ ಈ ವೈರಲ್​ ವಿಡಿಯೋ 2004ರ ನವೆಂಬರ್​ನಲ್ಲಿ ಬಿಡುಗಡೆಯಾಗಿರುವ Bhairathi Ranagal (ಭೈರತಿ ರಣಗಲ್) ಸಿನಿಮಾದ್ದು ಇದರಲ್ಲಿ ಶಿವರಾಜ್​ ಕುಮಾರ್​ ಅವರ ತಂಗಿಯ ಪಾತ್ರದಲ್ಲಿ ಛಾಯಾ ಸಿಂಗ್​ ನಟಿಸಿದ್ದಾರೆ. ಇದು ಆ ಸಿನಿಮಾದ ಸ್ಟೋರಿ ಆಗಿದೆ.

56
ಏನಿದು ಸ್ಟೋರಿ

ಈ ಸಿನಿಮಾದಲ್ಲಿ, ರೋಣಾಪುರ ಎಂಬ ಗ್ರಾಮದಲ್ಲಿ ಬೆಳೆಯುವ ರಣಗಲ್, ಬಾಲ್ಯದಿಂದಲೂ ಅನ್ಯಾಯವನ್ನು ಸಹಿಸದವನು. ಬೆಳೆದು ವಕೀಲನಾಗಿ ಜನಸಾಮಾನ್ಯರ, ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡುತ್ತಾನೆ. ವ್ಯವಸ್ಥೆ ಮತ್ತು ಸರ್ಕಾರದ ವೈಫಲ್ಯಗಳಿಂದಾಗಿ, ತನ್ನ ಜನರಿಗೆ ನ್ಯಾಯ ಒದಗಿಸಲು ಕಾನೂನನ್ನು ಬಿಟ್ಟು, ಹಿಂಸಾಚಾರದ ಹಾದಿಯನ್ನು ಹಿಡಿಯುತ್ತಾನೆ. ಕಪ್ಪು ಕೋಟು ಬದಿಗೆ ಸರಿಸಿ ಲಾಂಗ್ ಹಿಡಿಯುತ್ತಾನೆ.

66
ತಂಗಿಯ ಪಾತ್ರದಲ್ಲಿ ಛಾಯಾ

ರೋಣಾಪುರದಲ್ಲಿ ತನ್ನದೇ ಆದ ಗಣಿಗಾರಿಕೆ ಸಾಮ್ರಾಜ್ಯವನ್ನು ಕಟ್ಟಿ, ಪರಾಡೆ ಎನ್ನುವ ಮತ್ತೊಬ್ಬ ವಿಲನ್ ಮತ್ತು ಭ್ರಷ್ಟ ರಾಜಕಾರಣಿಗಳನ್ನು ಎದುರಿಸಿ, ದಮನಿತರ ಪಾಲಿನ ರಕ್ಷಕನಾಗಿ ಬೆಳೆಯುತ್ತಾನೆ. ಇವನ ತಂಗಿಯ ಪಾತ್ರದಲ್ಲಿ ನಟಿ ಛಾಯಾ ಸಿಂಗ್​ ನಟಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories