Amruthadhaare Serial: ಅಕ್ರಮ ಸಂಬಂಧ ಸಾಕು, ಹೆಂಗಸ್ರೆಲ್ಲಾ ಕುಡುಕರಾಗಿ ಎಂದು ಸಾರುತಿವೆ ಸೀರಿಯಲ್​ಗಳು?

Published : Apr 06, 2026, 12:31 PM IST

ಕನ್ನಡ ಸೀರಿಯಲ್​ಗಳಲ್ಲಿ ಪ್ರೇಮ ನಿವೇದನೆ ಮಾಡಲು ನಾಯಕಿಯರಿಗೆ ಮದ್ಯ ಕುಡಿಸುವ ಟ್ರೆಂಡ್ ಹೆಚ್ಚಾಗುತ್ತಿದೆ. ಅಮೃತಧಾರೆ ಸೀರಿಯಲ್​ನಲ್ಲಿ ಭೂಮಿಕಾಗೆ ಕುಡಿಸಿದ ಪ್ರಸಂಗವು ಇದಕ್ಕೆ ಇತ್ತೀಚಿನ ಉದಾಹರಣೆಯಾಗಿದ್ದು, ಇಂತಹ ಕಥಾಹಂದರಕ್ಕೆ ನೆಟ್ಟಿಗರಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.

PREV
16
ಕುಡಿಯುವುದು ಮಾಮೂಲು

ಪ್ರೇಮ ನಿವೇದನೆ ಮಾಡಿಕೊಳ್ಳಲು, ನೇರಾನೇರವಾಗಿ ಹೇಳುವ ಧೈರ್ಯ ಗಂಡ-ಹೆಂಡತಿಗೇ ಇಲ್ಲ ಎನ್ನುವುದು ಬಹುತೇಕ ಸೀರಿಯಲ್​​ಗಳ ತಿರುಳು. ಮದುವೆಯಾದರೂ ದಾಂಪತ್ಯ ಜೀವನ ನಡೆಸದೇ ಕೊನೆಗೆ ಪ್ರೀತಿ ಆಗಿದೆ ಎಂದು ಹೇಳಲು ಇಬ್ಬರಲ್ಲಿ ಒಬ್ಬರಿಗೆ ಕುಡಿಸುವುದು ಮಾಮೂಲಾಗಿಬಿಟ್ಟಿದೆ.

26
ಈ ಹಿಂದೆಯೂ ಇದೇ ರೀತಿ

ಈ ಮೊದಲು ಎಲ್ಲಾ ಭಾಷೆಗಳ ಬಹುತೇಕ ಎಲ್ಲಾ ಸೀರಿಯಲ್​ಗಳಲ್ಲಿಯೂ ಅಕ್ರಮ ಸಂಬಂಧಗಳೇ ರಾರಾಜಿಸುತ್ತಿದ್ದವು. ಈಗಲೂ ಅದು ಇಲ್ಲ ಎಂದೇನಲ್ಲ. ಒಂದೇ ರೀತಿಯ ಕಥೆಗಳನ್ನೇ ತಿರುವು ಮುರುವು ಮಾಡುವುದು ಮಾಮೂಲು. ಆದರೆ ಇದೀಗ ಹೆಂಗಸರನ್ನು ಕುಡುಕನ್ನಾಗಿ ಮಾಡುವುದು ಹೆಚ್ಚಾಗ್ತಿವೆ. ಈ ಹಿಂದೆ ಅಮೃತಧಾರೆ, ಬ್ರಹ್ಮಗಂಟು ಸೇರಿದಂತೆ ವಿವಿಧ ಸೀರಿಯಲ್​ಗಳಲ್ಲಿ ಇದೇ ಥಿಯರಿ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ಅಮೃತಧಾರೆಯಲ್ಲಿ ಪುನಃ ಭೂಮಿಕಾಗೆ ಕುಡಿಸಲಾಗಿದೆ.

36
ಹನಿಮೂನ್​ನಲ್ಲಿ ಭೂಮಿಕಾ ಕುಡುಕಿ

ಮಲ್ಲಿ ಮತ್ತು ಸುನಿಲ್​​ ಹನಿಮೂನ್​ಗೆ ಹೋಗಿದ್ದು, ಅದಲ್ಲಿ ಭೂಮಿಕಾ-ಗೌತಮ್​ ಮತ್ತು ಆನಂದ್​-ಅಪರ್ಣಾ ಜೋಡಿಯೂ ಹೋಗಿದೆ. ಆಗ ಭೂಮಿಕಾ ತಮ್ಮ ಮನಸ್ಸಿನಲ್ಲಿ ಇರೋದನ್ನೆಲ್ಲಾ ಹೇಳಿಕೊಳ್ಳಬೇಕಲ್ಲ, ಅದಕ್ಕಾಗಿ ಅವಳಿಗೆ ಆನಂದ್​ ಕೂಲ್​​ ಡ್ರಿಂಕ್ಸ್​ನಲ್ಲಿ ಮದ್ಯ ಸೇರಿಸಿ ಕೊಟ್ಟಿದ್ದಾನೆ.

46
ನ್ಯಾಯ ಬೇಕು ಎಂದ ಭೂಮಿಕಾ

ಇದರಿಂದ ಗೌತಮ್​ ದಿವಾನ್​​ ಭೂಮಿಕಾಗೆ ಮೋಸ ಮಾಡಿದ್ದಾರೆ ಎಂದು ಹೇಳಿರೋ ಭೂಮಿಕಾ ನನಗೆ ನ್ಯಾಯ ಬೇಕು ಎಂದು ಪಟ್ಟು ಹಿಡಿದು ಕೂತಿದ್ದಾಳೆ.

56
ನೆಟ್ಟಿಗರ ಆಕ್ಷೇಪ

ಇದು ನೋಡಲು ಮಜಾ ಎನ್ನಿಸಬಹುದು, ವೀಕ್ಷಕರು ಇದನ್ನು ತಮಾಷೆಯಾಗಿಯೂ ತೆಗೆದುಕೊಳ್ಳಬಹುದು. ಆದರೆ ಪದೇ ಪದೇ ಈ ರೀತಿ ಹೆಂಗಸರಿಗೂ ಕುಡಿಸುವುದಕ್ಕೆ ಕೆಲವು ನೆಟ್ಟಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

66
ಏನು ಹೇಳ ಹೊರಟಿವೆ ಸೀರಿಯಲ್​ಗಳು?

ಒಂದೇ ಸಿದ್ಧಾಂತವನ್ನು ಪದೇ ಪದೇ ತೋರಿಸಿದರೆ ಅದು ಜೋಕ್​ ಎನ್ನಿಸುವುದಿಲ್ಲ. ಸೀರಿಯಲ್​ ನೋಡಿ ಅದರಿಂದ ಪ್ರಭಾವಿತರಾಗುವವರು ಅದೆಷ್ಟೋ ಮಂದಿ ಇದ್ದಾರೆ. ಇಂಥ ಅಹಸ್ಯ ನಿಲ್ಲಿಸಿ ಎಂದು ಕಿಡಿ ಕಾರುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories