"ಇದ್ಯಾಕೋ ಅತಿಯಾಯ್ತು"...ಭೂಮಿಕಾ ಎಷ್ಟೇ ಚೆನ್ನಾಗಿ ಅಭಿನಯಿಸಿದ್ರೂ ಈ ವಿಚಾರಕ್ಕೆ ರಗಡ್ ಆದ ಪ್ರೇಕ್ಷಕ ಮಹಾಪ್ರಭು

Published : Sep 19, 2025, 05:14 PM IST

Amruthadhaare Serial: ಇದುವರೆಗೆ ಧಾರಾವಾಹಿಯಲ್ಲಿ ಏನಾದರೊಂದು ಟ್ವಿಸ್ಟ್ ನೋಡುತ್ತಲೇ ಬಂದಿರುವ ಪ್ರೇಕ್ಷಕರು ಈಗ ತಮ್ಮ ಬೇಸರವನ್ನು ಹೊರಹಾಕುತ್ತಿದ್ದಾರೆ. ವಿಶೇಷವಾಗಿ ಭೂಮಿಕಾ ಪಾತ್ರದ ಮೇಲೆ.

PREV
16

ತನ್ನದೇ ಆದ ವೀಕ್ಷಕರ ಬಳಗವನ್ನು ಹೊಂದಿರುವ 'ಅಮೃತಧಾರೆ' ಧಾರಾವಾಹಿಯಲ್ಲಿ ಭೂಮಿಕಾ, ಗೌತಮ್ ಪ್ರೇಕ್ಷಕರಿಗೆ ಹತ್ತಿರವಾದ ಪಾತ್ರಗಳು. ಆದರೆ ಇದುವರೆಗೆ ಧಾರಾವಾಹಿಯಲ್ಲಿ ಏನಾದರೊಂದು ಟ್ವಿಸ್ಟ್ ನೋಡುತ್ತಲೇ ಬಂದಿರುವ ಪ್ರೇಕ್ಷಕರು ಈಗ ತಮ್ಮ ಬೇಸರವನ್ನು ಹೊರಹಾಕುತ್ತಿದ್ದಾರೆ. ವಿಶೇಷವಾಗಿ ಭೂಮಿಕಾ ಪಾತ್ರದ ಮೇಲೆ.

26

ಸದ್ಯ ಧಾರಾವಾಹಿಯಲ್ಲಿ ಭೂಮಿಕಾ ಮನೆ ಬಿಟ್ಟು ಬಿಂದ ಮೇಲೆ, ಗೌತಮ್‌ನಿಂದ ದೂರವಾಗಿ ಐದು ವರ್ಷಗಳ ನಂತರ ಏನಾಯ್ತು ಎಂಬುದನ್ನು ತೋರಿಸಲಾಗುತ್ತಿದೆ. ಭೂಮಿಕಾ ಮಗ ಈಗ ದೊಡ್ಡವನಾಗಿದ್ದು, ಮಲ್ಲಿ ಕೂಡ ಭೂಮಿಯ ಜೊತೆಯಲ್ಲೇ ಇದ್ದಾಳೆ. ಜೀವನ ಸಾಗಿಸಲು ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಭೂಮಿಕಾ ಮನಸ್ಸಿನಲ್ಲಿ ಇಂದಿಗೂ ಗೌತಮ್ ಇದ್ದರೂ, ಆಕೆ ಅದನ್ನು ಎಲ್ಲಿಯೂ ತೋರಿಸಿಕೊಳ್ಳುತ್ತಿಲ್ಲ. ಸ್ವತಃ ಗೌತಮ್  ಮುಂದೆ. ಅದೇ ವೀಕ್ಷಕರಿಗೆ ಈಗ ದೊಡ್ಡ ತಲೆನೋವಾಗಿದೆ.

36

ಹೌದು, ಅಂತೂ ಕುಶಾಲನಗರದಲ್ಲಿ ವಾಸಿಸುತ್ತಿರುವ ಭೂಮಿಕಾಳನ್ನು ಈಗ ಗೌತಮ್ ಭೇಟಿಯಾಗಿದ್ದಾಗಿದೆ. ಇನ್ನೇನು ಬಿಡು ನಾಯಕ-ನಾಯಕಿ ಒಂದಾದರಲ್ಲ ಅನ್ನುವ ಹೊತ್ತಿಗೆ ಭೂಮಿಕಾ ಮತ್ತೆ ಅದೇ ರಾಗ ಅದೇ ಹಾಡು ಎನ್ನುವಂತೆ ಶಕುಂತಲಾ ಬೆದರಿಕೆ ಹಾಕಿದ್ದನ್ನೇ ಮನಸ್ಸಿನಲ್ಲಿಟ್ಟುಕೊಂಡು ಗೌತಮ್‌ನಿಂದ ದೂರವಿರುವ ಬಗ್ಗೆ ಮಾತನಾಡಿದ್ದಾಳೆ. ಇದೇ ಸಮಯಕ್ಕೆ ಗೌತಮ್ ಮಗನನ್ನು ನೋಡುವ ಆಸೆಯಿಂದ ಭೂಮಿ ಮನೆಗೆ ಬಂದಿದ್ದಾನೆ.

46

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಗೌತಮ್‌ ಈಗಾಗಲೇ ಮಗನನ್ನು ಮಾತನಾಡಿಸಿದ್ದಾನೆ, ಜೊತೆಗೆ ಐಸ್‌ಕ್ರೀಂ ತಿಂದಿದ್ದಾನೆ. ಆದರೆ ಆತನೇ ತನ್ನ ಮಗ ಎಂಬುದು ಗೊತ್ತಾಗಿಲ್ಲ. ಹಾಗಾಗಿ ಮಗನನ್ನು ನೋಡುವ ಆಸೆಯಿಂದ ಗೌತಮ್ ಮನೆಗೆ ಬಂದರೆ ಬಹುಶಃ ಭೂಮಿಕಾ ಅದಕ್ಕೂ ಅವಕಾಶ ಮಾಡಿಕೊಡುವ ಹಾಗೆ ಕಾಣುತ್ತಿಲ್ಲ.

56

ಇದನ್ನೆಲ್ಲಾ ನೋಡಿ ಬೇಸರಗೊಂಡ ವೀಕ್ಷಕರೊಬ್ಬರು " ಒಬ್ಬ ರಾಜಕಾರಣಿಗೇ ಅವಶ್ಯಕತೆಗಿಂತ ಹೆಚ್ಚು ನೀತಿ ಬೋಧನೆ ಮಾಡಲು, ಅವನನ್ನು ಎದುರು ಹಾಕಿಕೊಳ್ಳಲು ಭೂಮಿಕಾಗೆ ಧೈರ್ಯ, ತಾಕತ್ತು ಇದೆ. ಆದರೆ, ವರ್ಷಗಳ ಹಿಂದೆ ಶಕುಂತಲಾ ಹಾಕಿದ್ದ ಬೆದರಿಕೆಯ ವಿಷಯವನ್ನು ಈಗಲೂ ಗೌತಮನ ಹತ್ತಿರ ಹೇಳುವ ಧೈರ್ಯ ಭೂಮಿಕಾಗೆ ಇಲ್ಲ.ಇಷ್ಟು ವರ್ಷಗಳ ಬಳಿಕ ಭೇಟಿಯಾದಾಗ, ಯೋಗಕ್ಷೇಮ ವಿಚಾರಿಸುವ ಸೌಜನ್ಯವೂ ಇಲ್ಲ. ಅಷ್ಟು ಸಾಲದು ಅಂತ ಏನೂ ತಪ್ಪು ಮಾಡದಿರುವ ಗೌತಮನಿಗೆ ಬೈಯ್ದು ಅವಮಾನಿಸುವುದು ಬೇರೆ. ಯಾವುದಾದರೂ ಅರ್ಥ, ತರ್ಕ ಇದೆಯಾ?ಹಾಗಾಗಿ, ಭೂಮಿಕಾ ಎಷ್ಟೇ ಚೆನ್ನಾಗಿ ಅಭಿನಯಿಸಿದರೂ, ಆಸ್ವಾದಿಸಲು ಸಾಧ್ಯವಾಗುವುದಿಲ್ಲ" ಎಂದು ಹೇಳಿದ್ದಾರೆ.

66

ಅಷ್ಟೇ ಅಲ್ಲ, "ಇದ್ಯಾಕೋ ಅತಿಯಾಯ್ತು" "ಭೂಮಿಕಾಗೆ ಎರಡು ಭಾರಿಸಬೇಕು, ಅತಿಯಾಗಿ ಆಡ್ತಾಳೆ. ಎಲ್ಲ ವಿಚಾರ ಮಾತಾಡಿ , ಹೇಗಿದ್ದೀರ ಅಂತ ಕೇಳೋ ಮನಸ್ಸಿಲ್ವಾ. ಬೇರೆಯವರಿಗೆ ಕ್ಲಾಸ್ ತಗೊಳ್ತಾಳೆ, ತಾನು ಮಾತ್ರ ಅರ್ಥ ಮಾಡ್ಕೋತಿಲ್ಲ". "ಭೂಮಿಕಾ ನಿನ್ನ ಪಾತ್ರವನ್ನು ನಿರ್ದೇಶಕ taken for granted ರೀತಿ ಮಾಡಿದ್ದಾರೆ... ಒಮ್ಮೆ ಬಹಳ ಜ್ಞಾನಿ ರೀತಿ ಮತ್ತೊಮ್ಮೆ ತಲೆ ಖಾಲಿ...". "ಒಂದು ಮುಗ್ಸಿ ಇಲ್ಲ ಅಂದ್ರೆ ಸಾಯಿಸಿ ಏನಿದು ಪದೇ ಪದೇ ಗೋಳು" ಅಂತೆಲ್ಲಾ ವೀಕ್ಷಕರು ಭೂಮಿಕಾ ಮೇಲೆ ಮುನಿಸು ತೋರಿರುವುದನ್ನು ನೀವಿಲ್ಲಿ ನೋಡಬಹುದು.

Read more Photos on
click me!

Recommended Stories