ನಮಗೆ ನಾವು ಮಾಡಿದ ಕರ್ಮ ಮರೆತುಹೋಗಬಹುದು, ಆದರೆ ಕರ್ಮ ನಮ್ಮನ್ನು ಮರೆಯೋದಿಲ್ಲ ಎಂದು ಹೇಳಲಾಗುತ್ತದೆ. ಅದೇ ರೀತಿ ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾಗೆ ಬಂದಿದೆ. ಜಯದೇವ್ ಹಾಗೂ ಶಕುಂತಲಾ ಸೇರಿಕೊಂಡು ಭೂಮಿಕಾ ಮಗಳನ್ನು ಕಾಡಿನಲ್ಲಿ ಎಸೆದರು. ಈಗ ಶಕುಂತಲಾ ವಂಶ ನಿರ್ವಂಶ ಆಗುವಂತೆ ಹಾಗೆ ಆಗಿದೆ.
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ತನ್ನೆಲ್ಲ ಆಸ್ತಿಯನ್ನು ಜಯದೇವ್-ಶಕುಂತಲಾಗೆ ಕೊಟ್ಟು ಮನೆ ಬಿಟ್ಟು ಹೋಗಿದ್ದಾಳೆ. ಮಗಳು ಹುಟ್ಟಿದ್ದು ಕಿಡ್ನ್ಯಾಪ್ ಆಗಿರೋ ವಿಷಯ ಗೊತ್ತಾಗಿದ್ದಕ್ಕೆ ಭೂಮಿಕಾ ಬೇಸರಗೊಂಡು ಮನೆ ಬಿಟ್ಟು ಹೋಗಿದ್ದಾಳೆ ಅಂತ ಗೌತಮ್ ಅಂದುಕೊಂಡಿದ್ದನು. ಹೀಗಾಗಿ ಅವನು ಅವಳನ್ನು ಹುಡುಕಿಕೊಂಡು ಮನೆ ಬಿಟ್ಟು ಹೋಗಿದ್ದಾನೆ.
26
ಮಕ್ಕಳೇ ಆಗಿಲ್ಲ
ಅಂದಹಾಗೆ ಶಕುಂತಲಾಗೆ ಪಾರ್ಥ ಹಾಗೂ ಜಯದೇವ್ ಎಂಬ ಮಕ್ಕಳಿದ್ದಾರೆ. ಭೂಮಿಕಾಳ ತಂಗಿ ಅಪೇಕ್ಷಾ ಹಾಗೂ ಪಾರ್ಥ ಮದುವೆಯಾಗಿದ್ದಾರೆ. ಜಯದೇವ್, ಮಲ್ಲಿಗೆ ಮೋಸ ಮಾಡಿ ದಿಯಾಳನ್ನು ಮದುವೆ ಆಗಿದ್ದನು. ಇಷ್ಟು ವರ್ಷವಾದರೂ ಈ ಜೋಡಿಗೆ ಮಕ್ಕಳೇ ಆಗಿಲ್ಲ.
36
ಅವನತಿ ಹಂತದಲ್ಲಿ ಜಯದೇವ್
ಜಯದೇವ್ ಈಗಾಗಲೇ 600 ಕೋಟಿ ರೂಪಾಯಿ ಸಾಲ ಮಾಡಿದ್ದಾನೆ. ಈಗ ಬ್ಯಾಂಕ್‌ನವರು ಸಾಲ ತೀರಿಸಿ ಎಂದು ನೋಟೀಸ್ ನೀಡಿದ್ದಾರೆ. ಒಟ್ಟಿನಲ್ಲಿ ಗೌತಮ್ ಆಸ್ತಿ ಕರಗುತ್ತಿದೆ. ಅಷ್ಟೇ ಅಲ್ಲದೆ ಇವರ ವರ್ತನೆ ಅಪೇಕ್ಷಾ, ಪಾರ್ಥನಿಗೆ ಬೇಸರ ತಂದಿದೆ.
“ಗೌತಮ್ ಅಣ್ಣ ಬರೋವರೆಗೂ ನಾವು ಈ ಆಸ್ತಿಯನ್ನು ಕಾಪಾಡಬೇಕು, ಜಯದೇವ್ ಹುಚ್ಚಾಟಕ್ಕೆ ಬ್ರೇಕ್ ಹಾಕಬೇಕು, ಅದೇ ಕಾರಣಕ್ಕೆ ನಾನು ಇಲ್ಲಿದ್ದೀನಿ. ನಾನು ಎಷ್ಟೇ ಬಾರಿ ಎಚ್ಚರಿಕೆ ಕೊಟ್ಟರೂ ಜಯದೇವ್ ತಪ್ಪು ತಿದ್ದಿಕೊಳ್ತಿಲ್ಲ. ಜಯದೇವ್ ಯಾವತ್ತೂ ಚೇಂಜ್ ಆಗಲ್ಲ, ಕೊನೆವರೆಗೆ ಹಾಗೆ ಇರ್ತಾನೆ. ಅವನು ನನ್ನ ಅಣ್ಣ ಅಂತ ಹೇಳೋಕೆ ನಾಚಿಕೆ ಆಗುತ್ತದೆ” ಎಂದು ಪಾರ್ಥ ತನ್ನ ಪತ್ನಿ ಅಪೇಕ್ಷಾಗೆ ಹೇಳಿದ್ದಾನೆ.
56
ವಾರ್ನಿಂಗ್ ಕೊಡಬೇಕು
“ನೀವು ಹೇಳೋದು ನನಗೆ ಅರ್ಥ ಆಗತ್ತೆ. ಆದರೆ ಇವರೆಲ್ಲ ಬಿಹೇವ್ ಮಾಡೋದನ್ನು ನಾನು ನೋಡೋಕೆ ಆಗ್ತಿಲ್ಲ. ದಯವಿಟ್ಟು ಸ್ಟ್ರಾಂಗ್ ಆಗಿ ಎಚ್ಚರಿಕೆ ಕೊಡಿ. ನನ್ನ ಬಾವ ದೊಡ್ಡ ವ್ಯಕ್ತಿ. ಅವರ ಹೆಸರು ಹೇಳಿಕೊಂಡು ಬದುಕಬೇಕು, ಆದರೆ ಇವರು ಎಷ್ಟು ಚೀಪ್ ಆಗಿ ನೋಡಿಕೊಳ್ತಿದ್ದಾರೆ” ಎಂದು ಅಪೇಕ್ಷಾ ಹೇಳಿದ್ದಾರೆ.
66
ಕರ್ಮ ಬಿಡೋದಿಲ್ಲ
“ಇವರೆಲ್ಲ ಸೇರಿಕೊಂಡು ಅಕ್ಕ-ಭಾವನಿಗೆ ಅನ್ಯಾಯ ಮಾಡಿದ್ರಲ್ವಾ, ಆ ಶಾಪಕ್ಕೆ ಈ ಮನೆಯಲ್ಲಿ ಯಾರಿಗೂ ಮಕ್ಕಳೇ ಆಗಿಲ್ಲ, ಈ ವಂಶವೇ ಬೆಳೆಯುತ್ತಿಲ್ಲ. ನಿಮ್ಮ ತಾಯಿ ವಂಶ ಬೆಳೆಯಲಿ ಅಂತ ಅಂದುಕೊಳ್ತಿದ್ದಾರೆ, ಆದರೆ ಮಾಡಿದ ಪಾಪ ಎಲ್ಲರಿಗೂ ಮರೆತುಹೋಗಿದೆ. ಯಾರೂ ಮರೆತರೂ ನಾವು ಮಾಡಿದ ಕರ್ಮ ನಮ್ಮನ್ನು ಮರೆಯೋದಿಲ್ಲ. ಅಕ್ಕ-ಬಾವನಿಗೆ ಮಾಡಿದ ಮೋಸ ಈಗ ನಾವು ನೋವು ತಿನ್ನುವ ಹಾಗೆ ಆಗಿದೆ. ನಾವು ಒಬ್ಬರಿಗೆ ಒಳ್ಳೆಯದು ಮಾಡಿದರೆ ನಮಗೆ ಎಷ್ಟು ಒಳ್ಳೆಯದಾಗತ್ತೋ ಗೊತ್ತಿಲ್ಲ, ನಾವು ಇನ್ನೊಬ್ಬರಿಗೆ ಕೆಟ್ಟದ್ದು ಮಾಡಿದರೆ ನಮಗೆ ಎರಡು ಪಟ್ಟು ಕೆಟ್ಟದ್ದಾಗುತ್ತದೆ” ಎಂದು ಅಪೇಕ್ಷಾ ಹೇಳಿದ್ದಾರೆ.