ಅಮೃತಧಾರೆ ಧಾರಾವಾಹಿಯಲ್ಲಿ, ಎದುರುಬದುರು ಮನೆಯಲ್ಲಿ ವಾಸವಿರುವ ಗೌತಮ್ ಮತ್ತು ಭೂಮಿಕಾಗೆ ತಮ್ಮ ಸಂಬಂಧದ ಸತ್ಯ ತಿಳಿದಿರುವುದಿಲ್ಲ. ಅವರ ಮಕ್ಕಳಾದ ಆಕಾಶ್ ಮತ್ತು ಮಿಂಚು ಶಾಲೆಯಲ್ಲಿ ಜಗಳವಾಡಿದ್ದಕ್ಕಾಗಿ, ಪ್ರಿನ್ಸಿಪಾಲ್ ಇಬ್ಬರನ್ನೂ ಶಾಲೆಗೆ ಕರೆಸುತ್ತಾರೆ, ಇದು ಮುಜುಗರದ ಸನ್ನಿವೇಶವನ್ನು ಸೃಷ್ಟಿಸುತ್ತದೆ.
ಅಮೃತಧಾರೆ (Amruthadhaare Serial) ಇದೀಗ ಕುತೂಹಲದ ಘಟ್ಟ ತಲುಪಿದೆ. ಭೂಮಿಕಾ ಗೌತಮ್ ಮೇಲೆ ಪ್ರಾಣ ಇಟ್ಟುಕೊಂಡರೂ ಅದನ್ನು ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿ ಇದ್ದಾಳೆ. ಅದೇ ಇನ್ನೊಂದೆಡೆ ಗಂಡ ಹೆಂಡತಿ ಎದುರು-ಬದುರು ಮನೆಯಲ್ಲಿ ವಾಸವಾಗಿದ್ದಾರೆ.
25
ಇಬ್ಬರಿಗೂ ಸತ್ಯ ಗೊತ್ತಿಲ್ಲ
ಇತ್ತ ಆಕಾಶ್ಗೆ ಗೌತಮ್ ತನ್ನ ಅಪ್ಪ ಎನ್ನೋದು ಗೊತ್ತಿಲ್ಲ. ಮಿಂಚುಗೆ ಭೂಮಿಕಾನೇ ಗೌತಮ್ ಹೆಂಡ್ತಿ ಎನ್ನೋದು ಗೊತ್ತಿಲ್ಲ. ಈ ಅಕ್ಕ-ತಮ್ಮನದ್ದು ಒಂಥರಾ ಕರುಳಿನ ಕೂಗು. ಮನೆಯಲ್ಲಿ ಅಕ್ಕ-ತಮ್ಮ ಅಥವಾ ಅಣ್ಣ-ತಂಗಿ ಹೇಗೆ ಕಿತ್ತಾಡಿಕೊಳ್ತಾರೋ ಹಾಗೆ ಆಕಾಶ್ ಮತ್ತು ಮಿಂಚು ಜಗಳ.
35
ಶಾಲೆಯಲ್ಲೂ ಜಗಳ
ಈ ಜಗಳ ಮನೆಯಲ್ಲಿ ಅಷ್ಟೇ ಇತ್ತು. ಇದೀಗ ಅದು ಶಾಲೆಯವರೆಗೂ ಹೋಗಿದೆ. ಇವರಿಬ್ಬರ ಜಗಳದ ಬಗ್ಗೆ ಪ್ರಿನ್ಸಿಪಾಲ್ ಹತ್ರ ಕಂಪ್ಲೇಂಟ್ ಹೋಗಿರೋ ಕಾರಣದಿಂದ ಗೌತಮ್ ಮತ್ತು ಭೂಮಿಕಾರನ್ನು ಪ್ರಿನ್ಸಿಪಾಲ್ ಶಾಲೆಗೆ ಕರೆಸಿದ್ದಾರೆ.
ಇಬ್ಬರೂ ಮಕ್ಕಳು ಮಾಡಿದ ತಪ್ಪಿಗೆ ತಲೆ ತಗ್ಗಿಸಿ ಕುಳಿತಿದ್ದಾರೆ. ಪ್ರಿನ್ಸಿಪಾಲ್ ಎದುರೇ ಆಕಾಶ್ ಮತ್ತು ಮಿಂಚು ಜಗಳ ಶುರುಹಚ್ಚಿಕೊಂಡಿದ್ದಾರೆ. ನೀನೇ ಮೊದಲು ಗಲಾಟೆ ಮಾಡಿದ್ದು, ನೀನೇ ಮೊದಲು ಮಾಡಿದ್ದು ಎಂದು ಇಬ್ಬರೂ ಅಲ್ಲಿಯೇ ಗಲಾಟೆ ಮಾಡುತ್ತಿದ್ದಾರೆ.
55
ಇಬ್ಬರಿಗೂ ಬುದ್ಧಿ
ಭೂಮಿಕಾ ಮತ್ತು ಗೌತಮ್ ಸಾರಿ ಕೇಳುವ ಸ್ಥಿತಿಗೆ ಬಂದಿದೆ. ಕೊನೆಗೆ ಮಕ್ಕಳಿಬ್ಬರಿಗೂ ಬುದ್ಧಿ ಹೇಳಿ ಕಳುಹಿಸಲಾಗಿದೆ. ಬಳಿಕ ಪ್ರಿನ್ಸಿಪಾಲ್ ಅವರು, ಮಕ್ಕಳು ಎಂದ ಮೇಲೆ ಇವೆಲ್ಲಾ ಮಾಮೂಲು. ಆದರೆ ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ಹೇಳಿ ಕಳುಹಿಸಿದ್ದಾರೆ. ಇಬ್ಬರೂ ಒಬ್ಬರ ಮುಖ ಒಬ್ಬರು ನೋಡಿ ತೆಪ್ಪಗೆ ಹೋಗಿದ್ದಾರೆ.