Ashwini Gowda ಚಾಲೆಂಜ್ ಮಾಡಿದ ಬೆನ್ನಲ್ಲೇ…. Rakshitha Shettyಗೆ ತುಳು ಸಿನಿಮಾದಲ್ಲಿ ಸಿಕ್ತು ಬಿಗ್ ಆಫರ್!

Published : Nov 10, 2025, 04:41 PM IST

ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಅವರು ರಕ್ಷಿತಾ ಶೆಟ್ಟಿಗೆ ನೀನು 100 ಸಿನಿಮಾ ಮಾಡಿ ತೋರಿಸು ಎಂದು ಚಾಲೆಂಜ್ ಹಾಕುತ್ತಿದ್ದಂತೆ ರಕ್ಷಿತಾಗೆ ಈಗಾಗಲೇ ತುಳು ಸಿನಿಮಾದಲ್ಲಿ ಮುಖ್ಯ ಪಾತ್ರವೊಂದರಲ್ಲಿ ನಟಿಸುವ ಅವಕಾಶ ಸಿಕ್ಕಿದೆ ಎನ್ನುವ ವಿಚಾರ ಬಯಲಾಗಿದೆ.

PREV
16
ಬಿಗ್ ಬಾಸ್ ಕನ್ನಡ

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಕಳೆದ ವಾರ ರಕ್ಷಿತಾ ಶೆಟ್ಟಿ ಮತ್ತು ಅಶ್ವಿನಿ ಗೌಡ ನಡುವೆ ಜಿದ್ದಾಜಿದ್ದಿ ಜೋರಾಗಿಯೇ ನಡೆದಿತ್ತು. ಆ ಸಂದರ್ಭದಲ್ಲಿ ಅಶ್ವಿನಿ ಗೌಡ ರಕ್ಷಿತಾಗೆ ನೀನು ನನ್ನ ಹಾಗೆ 39-40 ವರ್ಷ ಆಗುವ ಮುನ್ನ 100 ಸಿನಿಮಾಗಳನ್ನು ಮಾಡಿ ತೋರಿಸು ಎಂದು ಚಾಲೆಂಜ್ ಮಾಡಿದ್ದರು.

26
ರಾಜ್ ಬಿ ಶೆಟ್ಟಿಯಿಂದ ಆಫರ್

ಅಶ್ವಿನಿ ಗೌಡ ಚಾಲೆಂಜ್ ಮಾಡಿದ್ದ ಬೆನ್ನಲ್ಲೆ ರಕ್ಷಿತಾ ಶೆಟ್ಟಿಗೆ ರಾಜ್ ಬಿ ಶೆಟ್ಟಿಯವರು ಕನ್ನಡ ಸಿನಿಮಾ ಒಂದರಲ್ಲಿ ನಟಿಸುವ ಆಫರ್ ಕೊಟ್ಟಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಬಳಿಕ ಅದು ಸುಳ್ಳು ಸುದ್ದಿ. ಯಾರೋ ಬೇಕಂತಲೇ ಇದನ್ನು ವೈರಲ್ ಮಾಡಿದ್ದಾರೆ ಎನ್ನಲಾಗುತ್ತಿತ್ತು.

36
ಇದೀಗ ತುಳು ಸಿನಿಮಾದಿಂದ ಆಫರ್

ಇದೀಗ ಈ ಮಂಗಳೂರು ಹುಡುಗಿ ರಕ್ಷಿತಾ ಶೆಟ್ಟಿಗೆ ತುಳು ಸಿನಿಮಾದಿಂದ ದೊಡ್ಡ ಆಫರ್ ಸಿಕ್ಕಿದೆ ಎನ್ನಲಾಗುತ್ತಿದೆ. ಆ ಕುರಿತು ಪೋಸ್ಟ್ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿ ರಕ್ಷಿತಾ ಶೆಟ್ಟಿ ಅಭಿಮಾನಿಗಳು ಖುಷಿಯಾಗಿದ್ದಾರೆ.

46
ತರವಾಡ್ ಸಿನಿಮಾದಲ್ಲಿ ರಕ್ಷಿತಾ

ನಟ, ಶೋಧನ್ ಶೆಟ್ಟಿ ಅವರ ಚಿತ್ರ ತರವಾಡ್. ತುಳುನಾಡಿನ ಮಣ್ಣಿನ ಕಥೆ ಇರುವ ಈ ಚಿತ್ರದಲ್ಲಿ ರಕ್ಷಿತಾ ಶೆಟ್ಟಿಗೆ ಮುಖ್ಯ ಪಾತ್ರ ನೀಡಲಾಗಿದೆ ಎನ್ನಲಾಗುತ್ತಿದೆ. ಈ ಕುರಿತು ಶೋಧನ್ ಶೆಟ್ಟಿ ಕೂಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಗೆ ಹೋಗುವ ಮುನ್ನವೇ ರಕ್ಷಿತಾ ಶೆಟ್ಟಿ ಈ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ ಎನ್ನಲಾಗುತ್ತಿದೆ.

56
ರಕ್ಷಿತಾ ಶೆಟ್ಟಿಗೆ ಬಿಗ್ ಆಫರ್

ಶರತ್ ಎಸ್ ಪೂಜಾರಿ ಬಗ್ಗತೋಟ ಆಕ್ಷನ್ ಕಟ್ ಹೇಳ್ತಿರೋ ತುಳು ಮೂವೀ "ತರವಾಡ್" ಇದರ ಟೈಟಲ್ ಟೀಸರ್ ರಿಲೀಸ್ ಜೂನ್ ತಿಂಗಳಲ್ಲೇ ಆಗಿದೆ, ಇ ಶುಭಾ ಶೆಟ್ಟಿ ಪ್ರೊಡಕ್ಷನ್ಸ್‌ ಲಾಂಛನದಡಿ ತಯಾರಾಗುತ್ತಿರುವ ಚಿತ್ರದಲ್ಲಿ ಯುವ ನಟ ಶೋಧನ್ ಶೆಟ್ಟಿ ನಾಯಕನಾಗಿ ಕೋಸ್ಟಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಪ್ರಸನ್ನ ಶೆಟ್ಟಿ ಬೈಲೂರು ಮುಂತಾದವರು ಮುಖ್ಯಭೂಮಿಕೆಯಲ್ಲಿದ್ದಾರೆ. ರಕ್ಷಿತಾ ಶೆಟ್ಟಿಗೂ ಆಫರ್ ನೀಡಲಾಗಿದೆ.

66
ಸಿನಿಮಾ ಪ್ರಪೋಷನ್ ಮಾಡಿದ್ದ ರಕ್ಷಿತಾ

ಈ ಹಿಂದೆ ರಕ್ಷಿತಾ ಶೆಟ್ಟಿಯವರು ತರವಾಡ್ ಸಿನಿಮಾದ ಟೈಟಲ್ ಲಾಂಚ್, ಟೀಸರ್ ಲಾಂಚ್ ನ ಪ್ರಚಾರ ಕೂಡ ಮಾಡಿದ್ದರು. ಇದೀಗ ಅಶ್ವಿನಿ ಗೌಡ ಚಾಲೆಂಜ್ ಮಾಡಿದ್ದ ಬೆನ್ನಲ್ಲೇ ಶೋಧನ್ ಶೆಟ್ಟಿಯವರು ರಕ್ಷಿತಾಗೆ ದೊಡ್ಡ ಅವಕಾಶವನ್ನು ಕೊಟ್ಟಿರುವುದನ್ನು ತಿಳಿದು ಅಭಿಮಾನಿಗಳು ಸಂಭ್ರಮಿಸಿದ್ದಾರೆ. .

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories