ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ತನ್ನ ಮಗ ಆಕಾಶ್ ಜೊತೆ ಮನೆ ಬಿಟ್ಟು ಹೋಗಿ ಐದು ವರ್ಷಗಳಾಗಿವೆ. ಅಲ್ಲಿಂದ ಇಲ್ಲಿಯವರೆಗೆ ಹೆಂಡ್ತಿ ಎಲ್ಲಿದ್ದಾಳೆ ಅಂತ ಗೌತಮ್ ದಿವಾನ್ ಹುಡುಕುತ್ತಿದ್ದಾನೆ. ಹೀಗಿರುವಾಗ ಶಕುಂತಲಾ, ಜಯದೇವ್ ಏನಾದರು?
25
ಈಗಾಗಲೇ ಗೌತಮ್ ದಿವಾನ್ ಹಾಗೂ ಆಕಾಶ್ ಭೇಟಿಯಾಗಿದೆ. ಆಕಾಶ್ ಸಿಕ್ಕಾಪಟ್ಟೆ ಬುದ್ಧಿವಂತ, ತರಲೆ ಅಂತ ಗೌತಮ್‌ಗೆ ಗೊತ್ತಾಗಿದೆ. ಅಷ್ಟೇ ಅಲ್ಲದೆ ಅವನನ್ನು ಕಂಡರೆ ಗೌತಮ್‌ಗೆ ಇಷ್ಟ. ಹೀಗಿರುವಾಗ ಗೌತಮ್-ಭೂಮಿಕಾ ಭೇಟಿಯಾಗಬೇಕಿದೆ. ಗೌತಮ್ ಹುಡುಕಾಟಕ್ಕೆ ಭೂಮಿ ಸಿಗುತ್ತಾಳಾ ಎಂದು ಕಾದು ನೋಡಬೇಕಿದೆ.
35
ಭೂಮಿಕಾ ಟೀಚರ್ ಆಗಿ ಕೆಲಸ ಮಾಡುತ್ತಿದ್ದರೆ, ಮಲ್ಲಿ ಕೂಡ ಐಎಎಸ್ ಪರೀಕ್ಷೆ ತಯಾರಿ ಮಾಡುತ್ತಿದ್ದಾಳೆ. ಇವರಿಗೆ ಹಣದ ಕೊರತೆ ಇದ್ದರೂ ಕೂಡ, ಪ್ರೀತಿ ಮಾತ್ರ ಜಾಸ್ತಿಯೇ ಇದೆ. ಇನ್ನು ಆಕಾಶ್ ಅಂತೂ ಸಿಕ್ಕಾಪಟ್ಟೆ ಬುದ್ಧಿವಂತ, ತರಲೆ, ಥೇಟ್ ಅಪ್ಪನ ಹಾಗೆ.
ಶಕುಂತಲಾ ಹಾಗೂ ಜಯದೇವ್ ಆರಾಮಾಗಿದ್ದಾರೆ, ಆಸ್ತಿಯನ್ನು ಅನುಭವಿಸುತ್ತಿದ್ದಾರೆ. ಕೆಟ್ಟವರಿಗೆ ಒಳ್ಳೆಯದಾಗತ್ತೆ ಅಂತಾಯ್ತು, ಕರ್ಮ ರಿಟರ್ನ್ಸ್ ಎನ್ನೋದು ಇಲ್ಲವೇ? ಈ ತಾಯಿ-ಮಗನಿಗೆ ಶಿಕ್ಷೆ ಆಗೋದು ಯಾವಾಗ? ಹೀಗಿರುವಾಗ ಗೌತಮ್‌ನನ್ನು ಕುರಿತು ಅನೇಕರು ಪತ್ರ ಬರೆಯುತ್ತಿದ್ದಾರೆ, ಇದನ್ನು ನೋಡಿ ತಾಯಿ-ಮಗನಿಗೂ ಸಿಟ್ಟು ಬರುತ್ತಿದೆ. ಅವರು ಮುಂದೇನು ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.