Amruthadhaare Serial: ದಿಯಾ ಬೇಬಿ ಅಸಲಿ ಮುಖ ಬಯಲಾಯ್ತು! ಜಯದೇವ್‌ಗೆ ಈಗ ಐತಿ ಮಾರಿಹಬ್ಬ!

Published : Sep 20, 2025, 11:18 AM IST

Amruthadhaare Tv Serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್‌ ಎರಡನೇ ಪತ್ನಿ ದಿಯಾಗೆ ಇನ್ನೊಂದು ಮುಖ ಇದೆ. ಇನ್ನೊಂದು ಕಡೆ ಮಲ್ಲಿ ಸಿಂಗಲ್‌ ಆಗಿರೋಕೆ ಕೂಡ ಕಾರಣ ಇದೆ ಎಂದು ಕಾಣುತ್ತಿದೆ. ಹಾಗಾದರೆ ಮುಂದೆ ಏನಾಗುವುದು? 

PREV
15
ಮದುವೆ ಆಗಲು ಮಲ್ಲಿ ರೆಡಿ ಇಲ್ಲ

ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿಯನ್ನು ಬಿಟ್ಟು ಜಯದೇವ್‌ ಇನ್ನೊಂದು ಮದುವೆ ಆಗಿ ಬಹಳ ಟೈಮ್‌ ಆಯ್ತು. ಐದು ವರ್ಷಗಳಿಂದ ಅವಳು ಭೂಮಿಕಾ ಜೊತೆ ವಾಸ ಮಾಡುತ್ತಿದ್ದಾಳೆ. ಅಷ್ಟೇ ಅಲ್ಲದೆ ಮಲ್ಲಿ ಈಗ ಐಎಎಸ್‌ ಪರೀಕ್ಷೆಗೆ ತಯಾರಾಗುತ್ತಿದ್ದಾಳೆ. ಅವಳಿಗೆ ಇನ್ನೊಂದು ಮದುವೆ ಆಗು ಅಂತ ಭೂಮಿ ಎಷ್ಟೇ ಹೇಳಿದರೂ ಕೂಡ ಕೇಳಲು ರೆಡಿ ಇಲ್ಲ.

25
ಮಲ್ಲಿ ಆಸ್ತಿ ಎಲ್ಲೋಯ್ತು?

ರಾಜೇಂದ್ರ ಭೂಪತಿ ಮಗಳಾಗಿರೋ ಅವಳಿಗೆ ಸಿಕ್ಕಾಪಟ್ಟೆ ಆಸ್ತಿ ಇದೆ. ಗೌತಮ್‌ ಮನೆಯಲ್ಲಿರುವಾಗ ಅವಳು ಆಸ್ತಿಯನ್ನು ನೋಡಿಕೊಳ್ಳುತ್ತಿದ್ದಳು. ಯಾವಾಗ ಭೂಮಿ ಮನೆ ಬಿಟ್ಟು ಹೋದಳೋ, ಆಗ ಅವಳು ಕೂಡ ಅವರ ಜೊತೆ ಬಂದಳು. ಹಾಗಾದರೆ ಆ ಆಸ್ತಿ ಏನು ಮಾಡಿದಳು ಎನ್ನೋ ಪ್ರಶ್ನೆ ಎದುರಾಗಿದೆ.

35
ಬಡತನದಲ್ಲಿ ಒದ್ದಾಡುತ್ತಿರೋ ಭೂಮಿಕಾ

ಇನ್ನೊಂದು ಕಡೆ ಭೂಮಿಕಾ ಮಾತ್ರ ಕುಶಾಲನಗರದಲ್ಲಿ ಟೀಚರ್‌ ಆಗಿ ದುಡಿಯುತ್ತಿದ್ದಾಳೆ. ಮಗನ ಶಾಲೆ ಫೀ, ಮಲ್ಲಿ ಪರೀಕ್ಷೆಯ ಖರ್ಚು ವೆಚ್ಚ, ದಿನನಿತ್ಯಕ್ಕೆ ಬೇಕಾದ ಊಟ-ತಿಂಡಿ, ಅಗತ್ಯ ವಸ್ತುಗಳು, ಮನೆ ಬಾಡಿಗೆ ಎಲ್ಲವನ್ನು ಕೂಡ ಭೂಮಿಯೇ ನೋಡಿಕೊಳ್ಳುತ್ತಿದ್ದಾಳೆ.

45
ದಿಯಾ ಅಸಲಿ ಮುಖ ಬಯಲಾಗತ್ತಾ?

ಜಯದೇವ್‌ನನ್ನು ಪ್ರೀತಿಸಿ ಮದುವೆಯಾಗಿರೋ ದಿಯಾಗೆ ಇನ್ನೂ ಮಕ್ಕಳಾಗಿಲ್ಲ. ಈಗ ಅವಳು ಸುಖದ ಸುಪ್ಪತ್ತಿಗೆಯಲ್ಲಿದ್ದರೂ ಕೂಡ ಆ ಮನೆಗೆ ಅವಳು ಬಂದಿರೋ ಉದ್ದೇಶ ಬೇರೆ ಇದೆ. ನಾನು ಈ ಮನೆಯಲ್ಲಿರೋದು ಲೆಕ್ಕಕ್ಕೆ ಇಲ್ಲ, ನಾನು ಅಂದುಕೊಂಡಿರೋದು ಆಗ್ತಿಲ್ಲ ಎಂದು ಅವಳು ಮನಸ್ಸಿನಲ್ಲೇ ಹೇಳಿಕೊಂಡಿದ್ದಾಳೆ. ಜಯದೇವ್‌ನನ್ನು ಅವಳು ಇಷ್ಟಪಟ್ಟು ಮದುವೆ ಆಗಿಲ್ಲ, ಅವಳ ಉದ್ದೇಶ ಬೇರೆ ಇದೆ ಎನ್ನೋದು ಇಲ್ಲಿಯೇ ಅರ್ಥ ಆಗುತ್ತದೆ.

55
ಮಲ್ಲಿ-ಜಯದೇವ್‌ ಒಂದಾಗ್ತಾರಾ?

ದಿಯಾ ಉದ್ದೇಶ ಏನು ಎನ್ನೋದು ಬಯಲಾದರೆ, ಜಯದೇವ್‌ ಅವಳನ್ನು ಬಿಡುತ್ತಾನೆ. ಒಂದುವೇಳೆ ಅವನು ಬದಲಾದರೆ ಮತ್ತೆ ಮಲ್ಲಿ ಜೊತೆ ಸಂಸಾರ ಮಾಡಬಹುದು. ಈ ಕಾರಣಕ್ಕೆ ಈ ಸೀರಿಯಲ್‌ ತಂಡವು ಮಲ್ಲಿಯನ್ನು ಇನ್ನೂ ಸಿಂಗಲ್‌ ಆಗಿ ಇಡಬಹುದು. ಒಟ್ಟಿನಲ್ಲಿ ಈ ಧಾರಾವಾಹಿಯಲ್ಲಿ ಸಾಕಷ್ಟು ಟ್ವಿಸ್ಟ್‌ ಎದುರಾಗುತ್ತಿದೆ.

Read more Photos on
click me!

Recommended Stories