ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಹಾಗೂ ಭೂಮಿಕಾ ಇಬ್ಬರೂ ಒಂದೇ ವಠಾರದಲ್ಲಿದ್ದರೂ ಕೂಡ ಬೇರೆ ಬೇರೆಯಾಗಿ ಬದುಕುತ್ತಿದ್ದಾರೆ. ಇನ್ನೊಂದು ಕಡೆ ಮೊಮ್ಮಗನನ್ನು ಮಗ ಮಾತನಾಡಿಸುವ ಹಾಗೆಯೂ ಇಲ್ಲ, ಮುದ್ದಾಡುವ ಹಾಗಿಲ ಎಂದು ಭಾಗ್ಯಮ್ಮಳಿಗೆ ಗೊತ್ತಾಗಿದೆ. ಈಗ ಭಾಗ್ಯಮ್ಮ ಬದುಕಿನಲ್ಲಿ ಒಂದು ಮ್ಯಾಜಿಕ್ ಆಗಿದೆ.
25
ಗೌತಮ್-ಭೂಮಿ ಒಂದಾಗೋದು ಯಾವಾಗ?
ಹೌದು, ಜೀ ಕನ್ನಡ ವಾಹಿನಿಯು ಹೊಸ ಪ್ರೋಮೋವನ್ನು ರಿಲೀಸ್ ಮಾಡಿದೆ. ಅದರಲ್ಲಿ ಭೂಮಿಕಾ, ಗೌತಮ್, ಭಾಗ್ಯಮ್ಮ ಮೂವರು ಒಂದೇ ಕಡೆ ಸೇರಿದ್ದಾರೆ. ಅಲ್ಲಿ ಏನಾಗಲಿದೆ ಎನ್ನುವ ಕುತೂಹಲ ಪ್ರೇಕ್ಷಕರನ್ನು ಕಾಡುತ್ತಿದೆ. ಭೂಮಿಕಾ, ಗೌತಮ್ ಒಂದಾಗೋದು ಯಾವಾಗ ಎಂಬ ಪ್ರಶ್ನೆಯೇ ಎದ್ದು ಕಾಣುತ್ತಿದೆ.
35
ಮಗ-ಸೊಸೆಯನ್ನು ಒಂದು ಮಾಡಬೇಕು
ಆನಂದ್ ಮನೆಯಲ್ಲಿ ಬದುಕುತ್ತಲಿರುವ ಭಾಗ್ಯಮ್ಮಳಿಗೆ ಮಗ-ಸೊಸೆ ಹತ್ತಿರ ಇದ್ದೂ ದೂರ ಆಗಿ ಬದುಕುತ್ತಿರುವ ವಿಷಯ ಗೊತ್ತಾಗಿದೆ. ಮಗ-ಸೊಸೆಯನ್ನು ಒಂದು ಮಾಡಬೇಕು ಎಂದು ಭಾಗ್ಯಮ್ಮ ಮನೆ ಬಿಟ್ಟು ಹೋಗಿದ್ದಾಳೆ. ತಾಯಿ ಎಲ್ಲಿ ಎಂದು ಗೌತಮ್ ಹುಡುಕುತ್ತಿದ್ದಾನೆ.
ಭಾಗ್ಯಮ್ಮ ಬೆಂಗಳೂರಿನ ಬಂಡಿಮಹಾಕಾಳಿ ದೇವಸ್ಥಾನಕ್ಕೆ ಬಂದಿದ್ದಾಳೆ. ಅಲ್ಲಿ ಭೂಮಿಕಾ ಕೂಡ ಇದ್ದಾಳೆ. ಆಗ ಭೂಮಿಕಾ ಸೀರೆಗೆ ಬೆಂಕಿ ಹಚ್ಚಿಕೊಂಡಿದೆ. ಅದು ಭಾಗ್ಯಮ್ಮ ಕಣ್ಣಿಗೆ ಬಿದ್ದಿದೆ. ಮಾತೇ ಆಡದ ಭಾಗ್ಯಮ್ಮ ಈಗ ಭೂಮಿಕಾ ಎಂದು ಕೂಗಿದ್ದಾಳೆ. ಶಕುಂತಲಾ ನೀಡಿದ ಹಿಂಸೆಗೆ ಭಾಗ್ಯಮ್ಮಗೆ ಮಾತು ಬರದಂತೆ ಆಗಿತ್ತು.
55
ಗೌತಮ್-ಭೂಮಿ ಒಂದಾಗಲಿದ್ದಾರಾ?
ಈಗ ಭಾಗ್ಯಮ್ಮ ಭೂಮಿಕಾ ಎಂದು ಕರೆದಿದ್ದಾಳೆ. ಅತ್ತೆ ಕರೆದಿರೋದು ಭೂಮಿಗೆ ಕೇಳಿಸಿದೆ. ಅವಳು ತನ್ನ ಸೆರಗಿಗೆ ಹತ್ತಿದ್ದ ಬೆಂಕಿಯನ್ನು ಆರಿಸಿಕೊಂಡು ಅತ್ತೆ ಎಂದು ಮಾತನಾಡಿಸಲು ಮುಂದಾಗಿದ್ದಾಳೆ. ಅಲ್ಲಿ ಗೌತಮ್ ಕೂಡ ಬಂದಿದ್ದಾನೆ. ಗೌತಮ್, ಭೂಮಿಕಾ, ಭಾಗ್ಯಮ್ಮ ಈ ಮೂವರ ಮಿಲನ ಆಗಲಿದೆಯಾ ಎಂದು ಕಾದು ನೋಡಬೇಕಿದೆ. ಭಾಗ್ಯಮ್ಮ ಮಾತು ಕೇಳಿ ಗೌತಮ್-ಭೂಮಿಕಾ ಒಂದಾಗಲಿದ್ದಾರಾ ಎಂಬ ಕುತೂಹಲವಿದೆ.