Amruthadhaare Serial: ದೇವ್ರು ಒಂದು ಕೊಟ್ಟು ಇನ್ನೊಂದು ಕಿತ್ಕೋತಾನಂತೆ! ಮಗಳು ಸಿಕ್ಕಿ, ಈಗ ಭೂಮಿ ಸಾಯ್ತಾಳಾ?

Published : Aug 11, 2025, 11:00 AM ISTUpdated : Aug 11, 2025, 11:05 AM IST

'ಅಮೃತಧಾರೆ' ಧಾರಾವಾಹಿಯಲ್ಲಿ ಒಂದು ಕಡೆ ಗೌತಮ್‌ಗೆ ಮಗಳು ಸಿಗುತ್ತಾಳೆ, ಇನ್ನೊಂದು ಕಡೆ ಭೂಮಿ ಸಾಯುತ್ತಾಳಾ ಎಂಬ ಪ್ರಶ್ನೆ ಎದ್ದಿದೆ. ಜಯದೇವ್‌ ಹಾಗೂ ಶಕುಂತಲಾ ಒಟ್ಟಾಗಿ ಭೂಮಿಯನ್ನು ಸಾಯಿಸಲು ಯೋಜನೆ ಹಾಕಿದ್ದಾರೆ. ಇದು ಯಶಸ್ವಿಯಾಗುತ್ತದೆಯೇ? 

PREV
15

ಬಹಳ ದಿನಗಳಿಂದ ಗೌತಮ್‌ ತನ್ನ ಮಗಳ ಹುಡುಕಾಟದಲ್ಲಿದ್ದನು. ಈಗ ಅನಾಥಾಶ್ರಮದಲ್ಲಿ ಅವನಿಗೆ ಮಗಳು ಇರೋದು ಗೊತ್ತಾಗಿದೆ. ಆನಂದ್‌ ಜೊತೆ ಹೋಗಿ ಅವನು ಮಗಳನ್ನು ಕೈಗೆತ್ತಿಕೊಂಡು ಖುಷಿಪಟ್ಟಿದ್ದಾನೆ. ಇದು ಕನಸೋ? ನನಸೋ ಎಂದು ಕಾದು ನೋಡಬೇಕಿದೆ. ವೀಕ್ಷಕರು ಈ ಎಪಿಸೋಡ್‌ ನೋಡಲು ಬಹಳ ಕಾತುರದಿಂದ ಕಾಯುತ್ತಿದ್ದಾರೆ. ಶಕುಂತಲಾ, ಗೌತಮ್‌, ಆನಂದ್‌, ಜಯದೇವ್‌ಗೆ ಬಿಟ್ಟು ಬೇರೆ ಯಾರಿಗೂ ಭೂಮಿಗೆ ಅವಳಿ ಮಕ್ಕಳಾಗಿರೋದು ಗೊತ್ತಿರಲಿಲ್ಲ.

25

ಇನ್ನು ಭೂಮಿಯು ತನ್ನ ಮಗನ ಜೊತೆ ಕಾರ್‌ನಲ್ಲಿ ಹೊರಗಡೆ ಹೊರಟಿದ್ದಳು. ಆಗ ಡ್ರೈವರ್‌ ಬದಲು ನಾನೇ ಕರೆದುಕೊಂಡು ಹೋಗ್ತಿನಿ ಎಂದು ಪಾರ್ಥ ಕೂಡ ಹೋಗಿದ್ದಾನೆ. ಶಕುಂತಲಾ ಮುಖವಾಡವು ಭೂಮಿಗೆ ಗೊತ್ತಾಗಿದೆ. ಇವರಿಬ್ಬರ ನೇರಯುದ್ಧ ಶುರುವಾಗಿದೆ. ಶಕುಂತಲಾ ಪ್ಲ್ಯಾನ್‌ ಪ್ರಕಾರ ಈಗ ಭೂಮಿ ಕಾರ್‌ಗೆ ಲಾರಿಯವನು ಗುದ್ದಬೇಕಿದೆ. ರಸ್ತೆಯಲ್ಲಿ ಲಾರಿಯವನಿಂದ ತಪ್ಪಿಸಿಕೊಳ್ಳಲು ಪಾರ್ಥ ಏನು ಮಾಡುತ್ತಾನೋ ಏನೋ!

35

ಅಪಘಾತದಲ್ಲಿ ಭೂಮಿ ಸಾಯುತ್ತಾಳಾ ಎನ್ನೋದು ಒಂದು ಕಡೆಯಾದರೆ, ಇನ್ನೊಂದು ಕಡೆ ತನಗೆ ಮಗಳಿರೋ ವಿಷಯ ಭೂಮಿಗೆ ಗೊತ್ತಾದರೆ ಏನಾಗಬಹುದು? ಗೌತಮ್‌ ತನ್ನಿಂದ ಈ ಮಹಾಸತ್ಯವನ್ನು ಮುಚ್ಚಿಟ್ಟಿದ್ದಾನೆ ಅಂತ ಗೊತ್ತಾದರೆ ಅವಳು ಸುಮ್ಮನಿರುತ್ತಾಳಾ? ಈ ವಿಷಯ ಇಟ್ಕೊಂಡು ಭೂಮಿ, ಗೌತಮ್‌ ನಡುವೆ ಶಕುಂತಲಾ ಕಡ್ಡಿ ಗೀರಿದರೂ ಕೂಡ ಆಶ್ಚರ್ಯವಿಲ್ಲ.

45

ನಿಜಕ್ಕೂ ಗೌತಮ್‌ಗೆ ಮಗು ಸಿಗತ್ತಾ? ಮಗಳನ್ನು ಅವನು ಮನೆಗೆ ಕರೆದುಕೊಂಡು ಹೋಗ್ತಾನಾ? ಆ ಮಗಳನ್ನು ನೋಡಿದಾಗ ಭೂಮಿ ರಿಯಾಕ್ಷನ್‌ ಏನು? ಶಕುಂತಲಾ ಮುಂದೆ ಏನು ಮಾಡ್ತಾಳೆ? ಶಕುಂತಲಾ ಮುಖವಾಡವನ್ನು ಭೂಮಿ ಹೇಗೆ ಕಳಚಿ ಇಡ್ತಾಳೆ ಎಂಬ ಕುತೂಹಲ ಇದೆ. ಅಷ್ಟೇ ಅಲ್ಲದೆ ಒಟ್ಟಿನಲ್ಲಿ ಮುಂಬರುವ ಸಂಚಿಕೆಗಳು ಭಾರೀ ಕುತೂಹಲದಿಂದ ಕೂಡಿವೆ.

55

ಗೌತಮ್‌ ದಿವಾನ್-‌ ರಾಜೇಶ್‌ ನಟರಂಗ

ಶಕುಂತಲಾ- ವನಿತಾ ವಾಸು

ಭೂಮಿಕಾ- ಛಾಯಾ ಸಿಂಗ್‌

ಆನಂದ್‌- ನಟ ಆನಂದ್‌

ಜಯದೇವ್‌- ರಾಣವ್‌ 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories