Amruthadhaare Serial Update: ಭೂಮಿಯ ಇನ್ನೊಂದು ಮಗುವನ್ನು ಹೊತ್ತೊಯ್ದನಾ ಆ ಪಾಪಿ ಜಯದೇವ್?

Published : Jul 26, 2025, 09:11 AM IST

‘ಅಮೃತಧಾರೆʼ ಧಾರಾವಾಹಿಯಲ್ಲಿ ಈಗಾಗಲೇ ಮಗಳನ್ನು ಕಳೆದುಕೊಂಡು ಗೌತಮ್‌ ಚಿಂತೆಯಲ್ಲಿದ್ದಾನೆ, ಈಗ ಇನ್ನೊಂದು ಮಗು ಕಿಡ್ನ್ಯಾಪ್‌ ಆಗಿದೆಯಾ? 

PREV
15

‘ಅಮೃತಧಾರೆʼ ಧಾರಾವಾಹಿಯಲ್ಲಿ ಈಗಾಗಲೇ ಗೌತಮ್‌, ಭೂಮಿಕಾ ಅವಳಿ ಮಕ್ಕಳಲ್ಲಿ ಜಯದೇವ್‌ ಒಂದು ಮಗುವನ್ನು ಎತ್ತಿಕೊಂಡು ಹೋಗಿ ಎಸೆದಿದ್ದಾನೆ. ಈಗ ಮನೆಗೆ ಬಂದಿರೋ ಅವನಿಗೆ ಗೌತಮ್‌ ಕ್ಯಾಕರಿಸಿ ಉಗಿದು ಹೊರಗಡೆ ಕಳಿಸಿದ್ದನು. ಈಗ ಅವನು ಮತ್ತೊಂದು ಮಗುವನ್ನು ಕಿಡ್ನ್ಯಾಪ್‌ ಮಾಡಿದ್ದಾನಾ?

25

ಭೂಮಿಕಾ ಹಾಗೂ ಗೌತಮ್‌ ಇಬ್ಬರೂ ಲಾಂಗ್‌ ಡ್ರೈವ್‌ ಹೋಗಿದ್ದರು. ಆಗ ಅವರ ಮಗ ಆಕಾಶ್‌ ಮಲಗಿದ್ದನು. ಆ ಮಗುವನ್ನು ಸುಧಾ, ಮಲ್ಲಿ ನೋಡಿಕೊಳ್ತೀವಿ ಎಂದು ಹೇಳಿದ್ದರು. ಆ ಸಮಯ ನೋಡಿಕೊಂಡು ಮತ್ತೆ ಗೌತಮ್‌ ಮನೆಗೆ ಬಂದಿರೋ ಜಯದೇವ್‌ ಮಾಸ್ಕ್‌ ಹಾಕಿಕೊಂಡು ಆ ಮಗು ಕಿಡ್ನ್ಯಾಪ್‌ ಮಾಡಲು ನೋಡಿದ್ದಾನೆ.

35

ರೂಮ್‌ವೊಳಗಡೆ ಬಂದು ನಿನ್ನ ಸಹೋದರಿ ಬೇರೆ ಕಡೆ ಇದ್ದಾಳೆ, ನೀನು ಯಾಕೆ ಇಲ್ಲಿರಬೇಕು ಎಂದು ಹೇಳಿ ಆ ಮಗುವನ್ನು ಅವನು ಎತ್ತಿಕೊಂಡಿದ್ದಾನೆ. ಅದನ್ನು ಮಲ್ಲಿ ನೋಡಿ ತಡೆದಿದ್ದಾಳೆ. ಅದೇ ಸಮಯಕ್ಕೆ ಸುಧಾ ಕೂಡ ಬಂದಿದ್ದಾಳೆ. ಸುಧಾ ಹಾಗೂ ಮಲ್ಲಿ ಇಬ್ಬರೂ ಆ ಮಾಸ್ಕ್‌ ಬಿಚ್ಚಲು ನೋಡಿದ್ದಾರೆ. ಸದ್ಯ ಪ್ರೋಮೋದಲ್ಲಿ ಇಷ್ಟೇ ರಿವೀಲ್‌ ಆಗಿದೆ.

45

ಜಯದೇವ್‌ ಅಂತ ಗೊತ್ತಾದರೆ ಈ ವಿಷಯ ಗೌತಮ್‌ ಕಿವಿ ತಲುಪಿದರೆ ನನ್ನ ಮಗಳನ್ನು ಇವನೇ ಕಿಡ್ನ್ಯಾಪ್‌ ಮಾಡಿದ್ದಾನೆ ಅಂತ ಗೊತ್ತಾಗಲೂಬಹುದು. ಒಂದು ವೇಳೆ ಜಯದೇವ್‌ ಮಾಸ್ಕ್‌ ತೆಗೆಯಲು ಅವಕಾಶ ಕೊಡದೆ ಹಾಗೆ ಓಡಿ ಹೋಗೋ ಚಾನ್ಸ್‌ ಕೂಡ ಇದೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ಕುತೂಹಲದಿಂದ ಕೂಡಿವೆ.

55

ಮಗನನ್ನು ಒಂದು ನಿಮಿಷ ಕೂಡ ಬಿಟ್ಟಿರದ ಭೂಮಿಗೆ ಈ ವಿಷಯ ಗೊತ್ತಾದರೆ ಗಾಬರಿ ಆಗುತ್ತಾಳೆ. ಆರೋಗ್ಯದ ದೃಷ್ಟಿಯಿಂದ ಅವಳಿಗೆ ಈ ರೀತಿಯ ವಿಷಯಗಳು ಗೊತ್ತಾಗಬಾರದು. ಒಟ್ಟಿನಲ್ಲಿ ಈ ಕಿಡ್ನ್ಯಾಪ್‌ ವಿಷಯ ಯಾವ ರೀತಿಯ ಟ್ವಿಸ್ಟ್‌ ಕೊಡುತ್ತದೆ ಎಂದು ಕಾದು ನೋಡಬೇಕಿದೆ.

Read more Photos on
click me!

Recommended Stories