ಝೀ ಕನ್ನಡದ ಜನಪ್ರಿಯ ಧಾರಾವಾಹಿ ಅಮೃತಧಾರೆ (Amruthadhare serial). ಈಗಷ್ಟೇ ಧಾರಾವಾಹಿಯಲ್ಲಿ ಸುಧಾ ಮದುವೆ ನಡೆದಿದ್ದು, ಗೌತಮ್ ಮತ್ತು ಭೂಮಿಕಾ ಮಗುವಿನ ನಾಮಕರಣ ಕೂಡ ನಡೆದಿದೆ. ಆದ ಇದೀಗ ಸುಧಾ ಲುಕ್ ಬದಲಾಗಿದೆ.
26
ಸೀರಿಯಲ್ ಗೆ ಯಾವಾಗ ಸುಧಾ ಎಂಟ್ರಿಯಾಯಿತೋ, ಅವತ್ತಿನಿಂದ ಒಂದು ಜಡೆ ಹಾಕಿ, ಸಿಂಪಲ್ ಸೀರೆಯಲ್ಲೇ ಕಾಣಿಸಿಕೊಳ್ಳುತ್ತಿದ್ದಳು ಸುಧಾ. ನಂತರ ಗೌತಮ್ ದಿವಾನ್ ತಂಗಿಯೆಂದು ಗೊತ್ತಾದ ನಂತರ ಓಪನ್ ಹೇರ್, ಚೆನ್ನಾಗಿರೋ ಸೀರೆಯಲ್ಲಿ ಕಾಣಿಸಿಕೊಂಡಿದ್ದರು.
36
ಇದೀಗ ಸೃಜನ್ ಜೊತೆ ಮದುವೆಯಾದ ಬಳಿಕ ಸಿಲ್ಕ್ ಸೀರೆಯುಟ್ಟು, ಕರಿಮಣಿ, ನೆಕ್ಲೆಸ್, ಬಳೆ, ಬಿಂದಿ, ಕುಂಕುಮ ಎಲ್ಲಾ ಧರಿಸಿ ತುಂಬಾನೆ ಸುಂದರವಾಗಿ ಕಾಣಿಸುತ್ತಿದ್ದಾರೆ. ಹೇಳಬೇಕಂದ್ರೆ, ಮದುವೆಯಾದ ಬಳಿಕ ಸುಧಾ ಮುಖದ ಗ್ಲೋ ಹೆಚ್ಚಾಗಿದೆ.
ಸುಧಾ ಪಾತ್ರದಲ್ಲಿ ನಟಿಸುತ್ತಿರುವ ನಟಿ ಮೇಘಾ ಶೆಣೈ (Megha Shenoy) ಈ ಹಿಂದೆ ಹಲವು ಸೀರಿಯಲ್ ಗಳಿಗೆ ಬಣ್ಣ ಹಚ್ಚಿದ್ದಾರೆ. ಸುಂದರಿ ಧಾರಾವಾಹಿ ಮೂಲಕ ವಿಲನ್ ಆಗಿ ಕಿರುತೆರೆಗೆ ಎಂಟ್ರಿ ಕೊಟ್ಟ ಮೇಘಾ, ನಂತರ ಜನುಮದ ಜೋಡಿ, ಕಾವೇರಿ, ಮಹಾದೇವಿ ಧಾರಾವಾಹಿಯಲ್ಲಿ ನಟಿಸಿದ್ದರು.
56
ರಕ್ಷಾಬಂಧನ ಧಾರಾವಾಹಿಯಲ್ಲಿ ನಾಯಕನ ಪ್ರೇಯಸಿಯಾಗಿ ಕಾಣಿಸಿಕೊಂಡಿದ್ದರು. ಬಳಿಕ ಆರತಿಗೊಬ್ಬ ಕೀರ್ತಿಗೊಬ್ಬ ಧಾರಾವಾಹಿಯಲ್ಲಿ ನಟಿಸಿದ್ದರು. ಇದು ಕೂಡ ಯಶಸ್ಸು ತಂದುಕೊಟ್ಟಿತ್ತು. ಇನ್ನು ಜೀವ ಹೂವಾಗಿದೆ ಧಾರಾವಾಹಿಯಲ್ಲೂ ವಿಲನ್ ಆಗಿ ಮಿಂಚಿದರು. ಸದ್ಯ ಅಮೃತಧಾರೆಯಲ್ಲಿ ಸಾಫ್ಟ್ ಆಗಿರುವ ಸುಧಾ ಪಾತ್ರದ ಮೂಲಕ ಜನ ಮನ ಸೆಳೆಯುತ್ತಿದ್ದಾರೆ.
66
ಅಮೃತಧಾರೆಯಲ್ಲಿ ಸುಧಾ ಪಾತ್ರದ ಬಗ್ಗೆ ಹೇಳೋದಾದ್ರೆ, ಬಾಲ್ಯದಿಂದ ಕುಟುಂಬದಿಂದ ದೂರವಾದ ಅಮ್ಮ ಮತ್ತು ಮಗಳು, ಮತ್ತೆ ದಿವಾನ್ ಕುಟುಂಬವನ್ನು ಸೇರಿದ್ದು, ಮನೆ ಕೆಲಸದವಳಾಗಿ, ನಂತರ ಆಕೆ ಮನೆ ಮಗಳು ಅನ್ನೋದು ಗೊತ್ತಾಗಿದೆ. ಇದೀಗ ಸೃಜನ್ ಜೊತೆ ಸುಧಾ ಮದುವೆ ಕೂಡ ಆಗಿದೆ.