ಅಮೃತಧಾರೆ ಸೀರಿಯಲ್‌ನಲ್ಲಿ ನಾಯಕಿ ಭೂಮಿಕಾಗೆ ಬ್ರೆಸ್ಟ್ ಕ್ಯಾನ್ಸರ್ ಇರುವುದು ಮತ್ತು ಆಕೆ ಕೆಲವೇ ತಿಂಗಳು ಬದುಕುತ್ತಾಳೆ ಎಂದು ತೋರಿಸಲಾಗುತ್ತಿದೆ. ಈ ಕಥಾಹಂದರವು ನಿಜ ಜೀವನದ ಕ್ಯಾನ್ಸರ್ ರೋಗಿಗಳು ಮತ್ತು ಅವರ ಕುಟುಂಬದವರ ಮನಸ್ಸಿಗೆ ನೋವುಂಟು ಮಾಡುತ್ತಿದೆ.
ಅಮೃತಧಾರೆ ಸೀರಿಯಲ್ (Amruthadhaare Serial) ನಲ್ಲಿ ಸದ್ಯ ಭೂಮಿಕಾಗೆ ಬ್ರೆಸ್ಟ್ ಕ್ಯಾನ್ಸರ್. ಆಕೆಗೆ ಇರುವುದು ಕೆಲವೇ ತಿಂಗಳುಗಳು ಎಂದು ವೈದ್ಯರು ಹೇಳಿಯಾಗಿದೆ. ಆದರೆ ಭೂಮಿಕಾ ಈ ವಿಷಯವನ್ನು ಗೌತಮ್ ಸೇರಿ ಯಾರಿಗೂ ತಿಳಿಸಿರಲಿಲ್ಲ. ತನ್ನೊಳಗೇ ಎಲ್ಲ ನೋವನ್ನು ಮುಚ್ಚಿಟ್ಟುಕೊಂಡಿದ್ದಳು.
26
ಗೌತಮ್ಗೆ ಗೊತ್ತಾಯ್ತು ಸತ್ಯ
ಆದರೆ, ಪತ್ನಿಯಲ್ಲಿ ಆಗುತ್ತಿರುವ ಬದಲಾವಣೆ ನೋಡಿದ ಗೌತಮ್ ರಿಪೋರ್ಟ್ ಹುಡುಕಿದ್ದಾನೆ. ವೈದ್ಯರ ಬಳಿ ಓಡಿ ಬಂದಿದ್ದಾನೆ. ವೈದ್ಯರು ಇರುವ ಸತ್ಯವನ್ನು ಹೇಳಿದ್ದಾರೆ. ಭೂಮಿಕಾಗೆ ಬ್ರೆಸ್ಟ್ ಕ್ಯಾನ್ಸರ್ ಇದೆ. ಅವರು ಬದುಕೋದು ಕೆಲವೇ ತಿಂಗಳು ಎಂದಿದ್ದಾರೆ.
36
ರೋಚಕತೆ ಹೆಸರಿನಲ್ಲಿ ಇದೇನಿದು?
ಸೀರಿಯಲ್ ಪ್ರೇಮಿಗಳು ಗೌತಮ್ ಮತ್ತು ಭೂಮಿಕಾನ್ನ ದೂರ ಮಾಡಬೇಡಿ ಎನ್ನುತ್ತಿದ್ದರೆ, ಅದೇ ಇನ್ನೊಂದೆಡೆ, ಸೀರಿಯಲ್‌ನಲ್ಲಿ ನಡೆಯುವುದೆಲ್ಲಾ ಸತ್ಯ ಎಂದುಕೊಂಡಿರುವ ಕ್ಯಾನ್ಸರ್ ಪೇಷಂಟ್ಗಳು ಹಾಗೂ ಅವರನ್ನು ನಂಬಿಕೊಂಡವರಿಗೆ, ಅವರ ಕುಟುಂಬಸ್ಥರಿಗೆ ಮಾತ್ರ ಆಘಾತವಾಗಿದೆ. ಇದಕ್ಕೆ ಕಾರಣ, ಬ್ರೆಸ್ಟ್ ಕ್ಯಾನ್ಸರ್ಗೆ ಸಾವೇ ಪರಿಹಾರ ಎಂದು ಪದೇ ಪದೇ ವೈದ್ಯರು ಹೇಳುತ್ತಿರುವ ಮಾತು.
ಸೀರಿಯಲ್ಗಳು ಅದರಲ್ಲಿಯೂ ಒಂದೊಳ್ಳೆ ಟ್ರ್ಯಾಕ್ನಲ್ಲಿ ಜನರನ್ನು ಹಿಡಿದಿಟ್ಟುಕೊಂಡಿದ್ದ ಅಮೃತಧಾರೆಯಂಥ ಸೀರಿಯಲ್, ವೀಕ್ಷಕರ ಮನಸ್ಸಿನ ಮೇಲೆ ಅದರಲ್ಲಿಯೂ ಕ್ಯಾನ್ಸರ್ ಪೇಷಂಟ್ಗಳು ಹಾಗೂ ಅವರ ಕುಟುಂಬಸ್ಥರ ಮೇಲೆ ಇನ್ನಿಲ್ಲದ ಆಘಾತ ಬೀರುತ್ತಿರುವುದಂತೂ ಸತ್ಯ. ಎಷ್ಟೋ ಸಂದರ್ಭಗಳಲ್ಲಿ ವೈದ್ಯರು ರೋಗಿಗಳಿಗೆ ಅವರ ಕುಟುಂಬಸ್ಥರಿಗೆ ನೀಡಿರುವ ಭರವಸೆಯ ಮಾತುಗಳು ಈ ಸೀರಿಯಲ್ ನೋಡಿದವರ ಮನಸ್ಸನ್ನು ಛಿದ್ರಗೊಳಿಸುತ್ತಿವೆ.
56
ಏಕೆ ಮನಸ್ಸು ನೋಯಿಸುವಿರಿ?
ಬ್ರೆಸ್ಟ್ ಕ್ಯಾನ್ಸರ್ ಗೆದ್ದವರು ಹಲವರಿದ್ದಾರೆ. ಕೆಲವು ಹೋಮಿಯೋಪಥಿ ವೈದ್ಯರ ಕೈಗುಣದಿಂದ ಬ್ರೆಸ್ಟ್ ಕ್ಯಾನ್ಸರ್ ಮಾತ್ರವಲ್ಲದೇ ಎಲ್ಲಾ ರೀತಿಯ ಕ್ಯಾನ್ಸರ್, ಅದರಲ್ಲಿಯೂ ಕೊನೆಯ ಹಂತದಲ್ಲಿ ಇದ್ದವರೂ ಗುಣಮುಖರಾದ ಉದಾಹರಣೆಗಳಿವೆ. ಸೀರಿಯಲ್‌ನಲ್ಲಿ ಪದೇಪದೇ ಭೂಮಿಕಾಗೆ ಕೆಲವೇ ತಿಂಗಳು ಟೈಮ್ ಇರೋದು ಎಂದು ತೋರಿಸಿ ಸದ್ಯದ ಮಟ್ಟಿಗೆ ಇಂಥವರ ಬದುಕನ್ನೇ ಕಸಿಯುವಂತೆ ಸೀರಿಯಲ್ ಮಾಡ್ತಿದೆಯಾ ಎನ್ನುವ ಪ್ರಶ್ನೆಯನ್ನು ಕಮೆಂಟ್ಸ್ಗಳಲ್ಲಿ ಕೆಲವರು ಹಾಕುತ್ತಿದ್ದಾರೆ.
66
ಗೂಗಲ್ನಲ್ಲಿ ಹುಡುಕಾಟ
ಮುಂದೆ ಭೂಮಿಕಾಗೆ ಟ್ರೀಟ್ಮೆಂಟ್ ಸಿಕ್ಕು ಆಕೆ ಗುಣವಾಗಬಹುದೇನೋ ಗೊತ್ತಿಲ್ಲ, ಅಥವಾ ಆಕೆಯನ್ನು ಸಾಯಿಸಿಯೇ ಬಿಡ್ತಾರೋ ಎನ್ನುವುದೂ ತಿಳಿದಿಲ್ಲ. ಆದರೆ ಸದ್ಯದ ಪರಿಸ್ಥಿತಿಯಲ್ಲಂತೂ ಈ ಸೀರಿಯಲ್ನಿಂದ ಇಂಥದ್ದನ್ನು ಊಹಿಸಿ ಇರಲಿಲ್ಲ. ವೀಕ್ಷಕರ ಭಾವನೆಗೆ, ಅವರ ಬದುಕಿನ ಮೇಲೆ ಇಷ್ಟು ಕೆಟ್ಟ ಪರಿಣಾಮ ಬೀರುವಂಥದ್ದನ್ನು ತೋರಿಸುತ್ತಿರುವಿರಿ ಎಂದು ಕೆಲವು ವೀಕ್ಷಕರು ನೋವಿನಿಂದ ನುಡಿಯುತ್ತಿದ್ದಾರೆ. ಬ್ರೆಸ್ಟ್ ಕ್ಯಾನ್ಸರ್ ಗುಣವಾಗುತ್ತದೆಯೋ ಇಲ್ಲವೇಎನ್ನುವ ಬಗ್ಗೆ ಗೂಗಲ್ನಲ್ಲಿ ಸರ್ಚ್ ಮಾಡಿದಾಗ ಅದು ಸಾಧ್ಯ ಎಂದೇ ಇದೆ. ಆದರೆ ಸೀರಿಯಲ್‌ನಲ್ಲಿ ಹೀಗೇಕೆ ಎಂದೂ ಹಲವರು ಪ್ರಶ್ನಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.