Amruthadhaare Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಒಂದು ಕಡೆ ಗೌತಮ್ ಹಾಗೂ ಭೂಮಿಕಾ ಒಂದಾಗಿ, ಒಟ್ಟಿಗೆ ಜೀವನ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಮಲ್ಲಿ ಜೀವನ ಕೂಡ ಸೆಟಲ್ ಆಗೋ ಥರ ಇದೆ. ಹಾಗಾದರೆ ಮುಂದೆ ಏನಾಗುವುದು?
ಹೌದು, ಗೌತಮ್, ಭೂಮಿಕಾ ಈಗ ಏಕಾಂತದಲ್ಲಿ ಸಮಯ ಕಳೆಯುತ್ತಿದ್ದಾರೆ. ಮನೆಯಲ್ಲಿ ಮಕ್ಕಳು ಇಲ್ಲ, ಮಲ್ಲಿಯೂ ಇಲ್ಲ ಎಂದು ಭೂಮಿಕಾ ಪ್ಲ್ಯಾನ್ ಮಾಡಿ, ಗಂಡನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಇದು ಅಪರ್ಣಾ ಕೊಟ್ಟ ಐಡಿಯಾ ಆಗಿತ್ತು.
25
ಭೂಮಿಕಾ ಮಡಿಲಿನಲ್ಲಿ ಗೌತಮ್
ಅಪರ್ಣಾ ಹಾಗೂ ಭೂಮಿಕಾ ಏಕಾಂತದಲ್ಲಿ ಮಾತನಾಡಿಕೊಂಡಿದ್ದಾರೆ. ಗೌತಮ್ ಈಗ ಭೂಮಿಕಾ ಮಡಿಲ ಮೇಲೆ ಮಲಗಿಕೊಂಡಿದ್ದಾನೆ. ತುಂಬ ದಿನಗಳಿಂದ ಭೂಮಿಕಾ ಮಡಿಲಿನಲ್ಲಿ ಮಲಗೋದು ಗೌತಮ್ ಕನಸಾಗಿತ್ತು. ಒಟ್ಟಿನಲ್ಲಿ ಈ ಜೋಡಿ ಮೇಲೆ ಜಯದೇವ್ ಕಣ್ಣು ಬೀಳದೆ ಇದ್ರೆ ಸಾಕು.
35
ಮಲ್ಲಿ ಜೀವನದ ಸತ್ಯ ಸುನೀಲ್‌ಗೆ ಗೊತ್ತಾಯ್ತು
ಇನ್ನು ಮಲ್ಲಿ ಜೀವನದಲ್ಲಿ ಏನು ನಡೆದಿದೆ ಎಂದು ಸುನೀಲ್‌ಗೆ ಗೊತ್ತಾಗಿದೆ. ಅವನು ಮಲ್ಲಿ ಜೀವನದಲ್ಲಿ ನಡೆದ ಘಟನೆ ಬಗ್ಗೆ ಬೇಸರ ಹೊರಹಾಕಿದ್ದಾನೆ. ಜಯದೇವ್ ಹೇಳಿದಂತೆ ಮಲ್ಲಿಯನ್ನು ಅವನ ಲವ್‌ನಲ್ಲಿ ಬೀಳಿಸಿಕೊಳ್ಳೋದು ಪ್ಲ್ಯಾನ್ ಆಗಿತ್ತು. ಆದರೆ ಮಲ್ಲಿ ಜೀವನವನ್ನು ಹಾಳು ಮಾಡಿದವನು ಜಯದೇವ್ ಎಂದು ಅವನಿಗೆ ಗೊತ್ತಾಗಿಲ್ಲ.
ಇನ್ನೊಂದು ಕಡೆ ಮಲ್ಲಿಗೆ ಸುನೀಲ್ ಪ್ರೇಮ ನಿವೇದನೆ ಮಾಡಿದ್ದಾನೆ. ಸುನೀಲ್ ಹಾಗೂ ಮಲ್ಲಿ ಸ್ನೇಹ ಶುರುವಾಗಿದೆ. ಆದರೆ ಇದು ಪರಸ್ಪರರ ಒಪ್ಪಿಗೆ ಮೇರೆಗೆ ಲವ್‌ಗೆ ತಿರುಗಲಿದೆಯಾ ಎಂಬ ಪ್ರಶ್ನೆ ಎದ್ದಿದೆ. ಸುನೀಲ್‌ಗೆ ಮೊದಲಿನಿಂದಲೂ ಮಲ್ಲಿ ಮೇಲೆ ಲವ್ ಇದೆ. ಮಲ್ಲಿ ಈಗ ಲವ್ ಒಪ್ಪಬೇಕು, ಅಷ್ಟೇ.
55
ಮಲ್ಲಿ ನಿರ್ಧಾರ ಏನು?
ನೋಡಲು ಮಾತ್ರ ಮಲ್ಲಿಗಿಂತ ಸುನೀಲ್ ಚಿಕ್ಕವನು ಎಂದು ಕಾಣುತ್ತದೆ. ತನಗಿಂತ ಚಿಕ್ಕವನ ಪ್ರೀತಿಯನ್ನು ಮಲ್ಲಿ ಒಪ್ಪುತ್ತಾಳಾ? ಎರಡನೇ ಮದುವೆ ಆಗ್ತಾಳಾ ಎಂಬ ಪ್ರಶ್ನೆ ಇದೆ. ವಯಸ್ಸಿನಲ್ಲಿ ಚಿಕ್ಕವರಾದವರನ್ನು ಹುಡುಗಿ ಮದುವೆಯಾದರೆ ಪ್ರಪಂಚ ಪ್ರಶ್ನೆ ಮಾಡುವುದು. ಈ ಹಿಂದೆ ಪ್ರಸಾರ ಆಗುತ್ತಿದ್ದ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಶಾಲಿನಿಯು ತನಗಿಂತ ಐದು ವರ್ಷ ಚಿಕ್ಕವನನ್ನು ಮದುವೆ ಆಗಿದ್ದಳು. ಆ ಕಥೆ ರೀತಿ ಈ ಕಥೆ ಸಾಗಲಿದೆಯಾ ಎಂಬ ಪ್ರಶ್ನೆ ಮೂಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.