129 ವರ್ಷದ ಹಳೆಯ ಮೈಸೂರಿನ ಪಾರಂಪರಿಕ ಕಟ್ಟಡದಲ್ಲಿ ಎಡವಟ್ಟು ಮಾಡ್ಕೊಂಡ Bigg Boss ರಜತ್;‌ ಹೊಸ ವಿವಾದ ಎಳ್ಕೊಂಡ್ರು

Published : Feb 05, 2026, 09:22 AM IST

Bigg Boss Rajath: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ರಜತ್‌ ಅವರು ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಹೌದು, ಅಂದು ಮಚ್ಚು ಬಳಸಿ ರೀಲ್ಸ್‌ ಮಾಡಿದ್ದ ರಜತ್‌ ಈ ಬಾರಿ ಮೈಸೂರಿನ ಪಾರಂಪರಿಕ ಕಟ್ಟದಲ್ಲಿ ಸಿಗರೇಟ್‌ ಸೇದಿದ್ದಾರೆ. 

PREV
15
ಒಂದಿಲ್ಲೊಂದು ವಿವಾದ

ಹೌದು, ಬಿಗ್‌ ಬಾಸ್‌ ರಜತ್‌ ಅವರು ಆಗಾಗ ಒಂದಿಲ್ಲೊಂದು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುತ್ತಾರೆ. ಈ ಬಾರಿ ಕೂಡ ಅವರು ಬಿಗ್‌ ಬಾಸ್‌ ಶೋಗೆ ಆಗಮಿಸಿದ್ದರು. ಇವರ ಹಾಗೂ ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ಧ್ರುವಂತ್‌ ನಡುವೆ ಜಗಳ ಕೂಡ ಆಗಿತ್ತು.

25
ಡಿಸಿ ಕಚೇರಿ ಮುಂದೆ ಸಿಗರೇಟ್‌ ಸೇದಿದ್ರು

ಈಗ ರಜತ್‌ ಅವರು ಮೈಸೂರಿನ ಪಾರಂಪರಿಕ ಕಟ್ಟ ಡಿಸಿ ಕಚೇರಿ ಮುಂದೆ ಸಿಗರೇಟ್‌ ಸೇದುತ್ತ ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ. 

35
ಸರ್ಕಾರಿ ಸ್ಥಳಗಳಲ್ಲಿ ಸಿಗರೇಟ್‌ ನಿಷಿದ್ಧ

COTPA ಪ್ರಕಾರ ( ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ) ಸರ್ಕಾರಿ ಕಚೇರಿ, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ. ಈ ರೀತಿ ಮಾಡಿದರೆ ದಂಡ ವಿಧಿಸಲಾಗುವುದು.

45
ರಾಜರು ಕಟ್ಟಿಸಿದ್ದ ಡಿಸಿ ಕಚೇರಿ

ಮೈಸೂರಿನ ಕೃಷ್ಣರಾಜ ಬೌಲೆವಾರ್ಡ್‌ನಲ್ಲಿ ಪಾರಂಪರಿಕ ಡಿಸಿ ಕಚೇರಿ (ಅಟ್ಟಾರಾ ಕಚೇರಿ) ಇದೆ. ಇದು 129 ವರ್ಷಗಳಷ್ಟು ಹಳೆಯದಾದ ಕಚೇರಿ ಆಗಿದೆ. 1895ರಲ್ಲಿ ಚಾಮರಾಜ ಒಡೆಯರ್ ಅವರು ನಿರ್ಮಿಸಿದ್ದ ಐತಿಹಾಸಿಕ ಕಟ್ಟಡವಿದು.

55
ಪ್ರವಾಸಿ ತಾಣ ಮಾಡುವ ಸೂಚನೆ

ಈ ಕಟ್ಟಡವು ಇಂಡೋ-ಸಾರ್ಸೆನಿಕ್ ಶೈಲಿಯಲ್ಲಿದೆ. ಇದನ್ನು ಮ್ಯೂಸಿಯಂ, ಪ್ರವಾಸಿ ತಾಣವಾಗಿ ಪರಿವರ್ತಿಸುವ ಯೋಜನೆ ಆಗುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories