Amruthadhaare Serial: ಶಕುಂತಲಾ ಮಾಡಿದ ಕರ್ಮ ಮಗಳಿಗೆ ತಟ್ಟಿತು; ಗೌತಮ್-ಭೂಮಿಗೆ ಹೊಸ ಕಷ್ಟ ಬಂತು!

Published : May 25, 2026, 11:18 AM IST

Amruthadhaare Kannada Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಲಕ್ಷ್ಮೀಕಾಂತ್‌ ಮಾವ ಕಿಡ್ನ್ಯಾಪ್‌ ಆಗಿದೆ. ಗೌತಮ್‌ ಹಾಗೂ ಭೂಮಿಕಾಳ ರಿಯಲ್‌ ಮಗಳು ಯಾರು ಎಂದು ಗೊತ್ತಾಗಬೇಕಿತ್ತು. ಹೀಗಿರುವಾಗ ಇನ್ನೊಂದು ಸಮಸ್ಯೆ ಎದುರಾಗಿದೆ. 

PREV
15
ಮಹಿಮಾಗೆ ಮತ್ತೆ ಗರ್ಭಪಾತ

ಹೌದು, ಗೌತಮ್‌ ದಿವಾನ್‌ ತಂಗಿ ಮಹಿಮಾಗೆ ಮತ್ತೆ ಗರ್ಭಪಾತ ಆಗಿದೆ. ಈ ಹಿಂದೆ ಅವಳೇ ಗರ್ಭಪಾತ ಮಾಡಿಸಿಕೊಂಡಿದ್ದಳು. ಈಗ ಅವಳು ಬಯಸಿದರೂ ಕೂಡ ತಾಯಿ ಆಗೋಕೆ ಆಗ್ತಿಲ್ಲ. ಅವಳಿಗೆ ತಾಯಿ ಆಗೋಕೆ ಆಗ್ತಿಲ್ಲ ಎನ್ನೋದು ಬಹಳ ನೋವು ಕೊಟ್ಟಿದೆ.

25
ಮಿಂಚುಳನ್ನು ದತ್ತು ಕೊಡಿ

ಈಗ ಸದಾಶಿವ ದಂಪತಿ ಗೌತಮ್‌ ಮನೆಗೆ ಬಂದು, “ಮಹಿಮಾ ನಾರ್ಮಲ್‌ ಆಗಿರುತ್ತಾಳೆ, ಒಮ್ಮೊಮ್ಮೆ ವಿಚಿತ್ರವಾಗಿ ಆಡ್ತಾಳೆ. ಅವಳಿಗೆ ಮಗು ಇಲ್ಲ ಎಂದು ತುಂಬ ಬೇಸರ ಆಗಿದೆ. ಮಿಂಚುಳನ್ನು ಅವಳಿಗೆ ದತ್ತು ಕೊಟ್ಟರೆ ಚೆನ್ನಾಗಿರುತ್ತದೆ” ಎಂದು ಹೇಳಿದ್ದಾರೆ.

35
ಆಕಾಶ್‌, ಗೌತಮ್‌ ಕಂಗಾಲು!

ಈ ಮಾತು ಕೇಳಿ ಭೂಮಿಕಾ, ಆಕಾಶ್‌, ಗೌತಮ್‌ ಎಲ್ಲರೂ ಕಂಗಾಲಾಗಿದ್ದಾರೆ. ಇನ್ನೊಂದು ಕಡೆ ಎಷ್ಟೇ ಜಗಳ ಆಡಿಕೊಂಡರೂ ಕೂಡ ಆಕಾಶ್-ಮಿಂಚು ಇಬ್ಬರೂ ತುಂಬ ಪ್ರೀತಿ ಮಾಡ್ತಾರೆ. ಇವರಿಬ್ಬರು ಒಂದೇ ಥರ ಆಡುತ್ತಾರೆ, ಅವಳಿ ಜವಳಿ ಎಂದು ಡೌಟ್‌ ಬರೋ ಹಾಗೆ ಇವರಿಬ್ಬರು ವರ್ತಿಸುತ್ತಾರೆ. ಇದನ್ನು ನೋಡಿ ಗೌತಮ್‌-ಭೂಮಿಕಾಗೆ ಆಶ್ಚರ್ಯ ಆಗಿದೆ.

45
ಮಿಂಚು ಇಲ್ಲ ಅಂದ್ರೆ ಆಕಾಶ್‌ ಕಥೆ ಏನು?

ಈಗ ಮಿಂಚು ತನ್ನಿಂದ ದೂರ ಆಗ್ತಾಳೆ ಎಂದು ಆಕಾಶ್‌ಗೆ ಗೊತ್ತಾದರೆ ಅವನು ಸಹಿಸೋದಿಲ್ಲ. ಇನ್ನೊಂದು ಕಡೆ ಗೌತಮ್-ಭೂಮಿಗೂ ಕೂಡ ಮಿಂಚು ಇಲ್ಲ ಅಂದರೆ ಕಷ್ಟ ಆಗುವುದು. ಒಟ್ಟಿನಲ್ಲಿ ಇದೇ ವಿಚಾರಕ್ಕೆ ಮತ್ತೊಂದಿಷ್ಟು ಜಗಳ ಕೂಡ ಆಗಬಹುದು. ಒಟ್ಟಿನಲ್ಲಿ ಮಿಂಚು ಟಾಪಿಕ್‌ನಿಂದ ಇನ್ನೇನು ಆಗಬಹುದೋ ಏನೋ!

55
ವೀಕ್ಷಕರು ಏನು ಹೇಳ್ತಾರೆ?
  • ಕಹಾನಿ ಮೆ ಟ್ವಿಸ್ಟ್ ಇದೆ. ದತ್ತು ತಗೊಂಡ ಮೇಲೆ ಮಹಿಮಾ ಮತ್ತೆ ಪ್ರಗ್ನೆಂಟ್‌ ಆಗ್ತಾಳೆ. ಯಾಕಂದ್ರೆ ಮಿಂಚು ಅದೃಷ್ಟ ದೇವತೆ
  • ಡೈರೆಕ್ಟರ್ ಸರ್, ಏನಿದು ಇಷ್ಟೊಂದು ಅನ್ಯಾಯ ಮಾಡೋದು ಸರಿ ಇಲ್ಲ. ಸೀರಿಯಲ್‌ನ ಎಲ್ಲಿಂದ ಎಲ್ಲಿಗೋ ತಗೊಂಡ್ ಹೋಗ್ತಾ ಇದ್ದೀರಾ, ಬೇಡ. ಈ ತರ ಕಥೆ.
  • ಪಾಪ ಮಹಿಮಾಗೆ ಒಂದು ಮಗು ಆಗ್ಬೇಕು
  • ಈಗ ಮಿಂಚುಳನ್ನು ದತ್ತು ಕೊಡ್ತಾರೋ ಇಲ್ಲವೋ ಅಂತ ಡೌಟ್ ಯಾರಿಗೆ ಇದೆ?
  • ಮಿಂಚು ಗೌತಮ್ ಸರ್ ಭೂಮಿ ಇಂದ ದೂರ ಆಗ್ಬಾರ್ದು, ಅವರ ಮಗಳು ಅಂತ ಗೊತ್ತಾಗ್ಬೇಕು.
  • ಯಾವುದೇ ಕಾರಣಕ್ಕೂ ಮಿಂಚುಳನ್ನು ದತ್ತು ಕೊಡಬಾರದು
  • ಶಕುಂತಲಾ ನೀನು ಮಾಡಿದ ಪಾಪ, ನೀ ಅನ್ಯಾಯವಾಗಿ ಮಹಿಮಾಗೆ ತಟ್ಟಿದೆ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories