Amruthadhaare Serial: ಅಷ್ಟು ಸುಳಿವು ಸಿಕ್ಕರೂ ಭೂಮಿಕಾ ಸುಮ್ನಿರೋದ್ಯಾಕೆ? ಸಿಡಿದೆದ್ದ ವೀಕ್ಷಕರು

Published : Dec 21, 2025, 05:03 PM IST

Amruthadhaare Kannada Serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್-ಭೂಮಿಕಾ ಕಥೆ ಎಲ್ಲೋ ಹೋಗ್ತಿದೆ. ಈ ಮಧ್ಯೆ ವೀಕ್ಷಕರು ಭೂಮಿ ಪಾತ್ರದ ಬಗ್ಗೆ ಬೇಸರವನ್ನು ಹೊರಹಾಕಿದ್ದಾರೆ. ಇದಕ್ಕೂ ಬಲವಾದ ಕಾರಣವಿದೆ. ಹಾಗಾದರೆ ಏನದು? 

PREV
16
ಸದ್ಯ ಧಾರಾವಾಹಿಯಲ್ಲಿ ಏನಾಗ್ತಿದೆ?

ಸದ್ಯ ಧಾರಾವಾಹಿಯಲ್ಲಿ ಒಂದು ಕಡೆ ಗೌತಮ್‌ ಮಾಡಿದ ಸಾಲ, ಇನ್ನೊಂದು ಕಡೆ ಅಜ್ಜಿಯ ಆಸ್ತಿಯನ್ನು ಲಪಟಾಯಿಸಿದ ಜಯದೇವ್‌, ಇನ್ನೊಂದು ಕಡೆ ಹತ್ತಿರ ಇದ್ದರೂ ದೂರ ಇರುವ ಗೌತಮ್-ಭೂಮಿಕಾ, ಮತ್ತೊಂದು ಕಡೆ ಮಲ್ಲಿ, ಗೌತಮ್‌ನ ಹುಡುಕಾಟದಲ್ಲಿರೋ ಜಯದೇವ್.‌ ಈ ಸಮಸ್ಯೆಗಳಿಗೆ ಒಂದಕ್ಕೂ ಪರಿಹಾರವೇ ಇಲ್ಲದಂತಿದೆ.

26
ಗೌತಮ್‌ ಆಸ್ತಿ

ಗೌತಮ್‌ 600 ಕೋಟಿ ರೂಪಾಯಿ ಸಾಲವನ್ನು ಮಾಡಿದ್ದಾನೆ. ಅವನಿಗೆ ಪತ್ನಿ, ಮಗ ಕೂಡ ಇರೋದರಿಂದ ಇವನು, ತನ್ನ ಆಸ್ತಿಯನ್ನು ಜಯದೇವ್‌ ಮುಖದ ಮೇಲೆ ಬಿಸಾಕಿದರೂ ಕೂಡ ಏನೂ ಪ್ರಯೋಜನವಿಲ್ಲದಂತಾಗಿದೆ. ಆ ಆಸ್ತಿಯನ್ನು ಅವರು ಮಾರುವಂತಿಲ್ಲ, ಅಡ ಇಡುವಂತಿಲ್ಲ. ಹೀಗಾಗಿ ಅವನಿಗೆ ಗೌತಮ್‌ ಹಾಗೂ ಅವನ ಕುಟುಂಬದವರ ಸಹಿ ಬೇಕಿದೆ.

36
ಭೂಮಿ-ಗೌತಮ್‌ ಒಂದಾಗುತ್ತಿಲ್ಲ

ಮಕ್ಕಳಿಗೆ ಈಗ ಭೂಮಿ-ಗೌತಮ್‌ ಮದುವೆಯಾಗಿರೋದು, ನಾವು ಅವರ ಮಕ್ಕಳು ಎನ್ನೋದು ಗೊತ್ತಾಗಿದೆ. ಅಪ್ಪ-ಅಮ್ಮನನ್ನು ಒಂದು ಮಾಡಲು ಅವರು ಕೂಡ ಏನೇನೋ ಪ್ರಯತ್ನಪಡುತ್ತಿದ್ದಾರೆ. ಮಲ್ಲಿ ಕೂಡ ಸಾಥ್‌ ನೀಡುತ್ತಿದ್ದಾಳೆ. ಈ ವಿಷಯ ಯಾರಿಗೂ ಗೊತ್ತಿಲ್ಲ. ಇನ್ನು ಅಜ್ಜಿ ಕೂಡ ಎಂಟ್ರಿ ಕೊಟ್ಟಿದ್ದು, ಮೊಮ್ಮಗನ ಕುಟುಂಬ ಚೆನ್ನಾಗಿರಲಿ ಏನೇನೋ ಪ್ರಯತ್ನಪಡುತ್ತಿದ್ದಾಳೆ.

46
ಭೂಮಿಗೆ ಸತ್ಯ ಯಾಕೆ ಅರ್ಥವಾಗ್ತಿಲ್ಲ?

ಶಕುಂತಲಾ ಮಲತಾಯಿಯಾದ್ರೂ ಕೂಡ ಗೌತಮ್‌ಗೆ ಅವಳೆಂದರೆ ಇಷ್ಟ. ಈ ಹಿಂದೆ ಕೂಡ ಶಕುಂತಲಾ ಮಾತು ನಂಬಿ, ಅವನು ಭೂಮಿಗೆ ಕ್ಲಾಸ್‌ ತಗೊಂಡಿದ್ದನು. ಈಗ ಅವನು ವಠಾರದಲ್ಲಿದ್ದಾನೆ, ಡ್ರೈವರ್‌ ಆಗಿ ಕೆಲಸ ಮಾಡುತ್ತಿದ್ದಾನೆ. ಅಷ್ಟೊಂದು ಆಸ್ತಿ ಇದ್ದ ಗೌತಮ್‌ ವಠಾರದಲ್ಲಿರೋದು ಯಾಕೆ ಎಂದು ಒಮ್ಮೆ ಭೂಮಿ ಕೇಳಿದ್ದಳು. ಆದರೆ ಅವಳು ಅಷ್ಟು ಯೋಚನೆ ಮಾಡಲಿಲ್ಲ.

56
ಇದು ದಡ್ಡತನ ಅಲ್ಲವೇ?

ನಾನಿಲ್ಲ ಎಂದರೆ ಗೌತಮ್‌ ಜೀವನದಲ್ಲಿ ಖುಷಿಯಿಲ್ಲ, ಮಗ ಇದ್ದರೂ ಕೂಡ ಅವನಿಂದ ದೂರ ಇರೋದು ಬೇಸರ ತಂದಿದೆ ಎನ್ನೋದು ಭೂಮಿಗೆ ಗೊತ್ತಿದೆ. ನಾನು, ಗೌತಮ್‌ ಜೊತೆಗೆ ಹೋದರೆ ಶಕುಂತಲಾ ನಮ್ಮನ್ನು, ನಮ್ಮವರನ್ನು ಸುಮ್ಮನೆ ಬಿಡೋದಿಲ್ಲ ಎಂದು ಅವಳು ಹೆದರಿ ದೂರ ಇದ್ದಾಳೆ ಎನ್ನೋದನ್ನು ಒಪ್ಪೋಣ. 

66
ಈ ಸತ್ಯ ಯಾಕೆ ಅರ್ಥ ಆಗ್ತಿಲ್ಲ?

ಅಜ್ಜಿಯನ್ನು ತನ್ನ ಮನೆಗೆ ಕರೆದುಕೊಂಡು ಬರಲು ಆಗೋದಿಲ್ಲ ಎನ್ನುವ ಭೂಮಿಗೆ, ಅಜ್ಜಿ ಯಾಕೆ ಎಲ್ಲೋ ದೂರದಲ್ಲಿದ್ದಾಳೆ? ಶಕುಂತಲಾ ಮನೆಯಲ್ಲಿ ಯಾಕಿಲ್ಲ ಎನ್ನೋದು ಅರ್ಥ ಆಗ್ತಿಲ್ವಾ? ಗೌತಮ್‌ ಒಂದು ದಿನವೂ ಶಕಂತಲಾ ಬಗ್ಗೆ ಮಾತನಾಡಿಲ್ಲ, ಜಯದೇವ್‌ ಬಗ್ಗೆ ಮಾತನಾಡಿಲ್ಲ ಅಂದ್ರೆ ಕುಟುಂಬದಿಂದ ದೂರ ಇದ್ದಾನೆ ಎಂದು ಅರ್ಥ ಅಲ್ಲವೇ? ಇದ್ಯಾಕೆ ಅರ್ಥ ಆಗ್ತಿಲಲ ಅವಳಿಗೆ ಎಂದು ವೀಕ್ಷಕರು ಬೇಸರದಲ್ಲಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories