ಗೌತಮ್ ಮತ್ತು ಭೂಮಿಕಾಳ ರಹಸ್ಯವನ್ನು ಆನಂದ್ ದಂಪತಿ ಮಾತನಾಡುತ್ತಿರುವುದನ್ನು ಭಾಗ್ಯಮ್ಮ ಕೇಳಿಸಿಕೊಂಡು ಮನೆ ಬಿಟ್ಟಿದ್ದಾಳೆ. ಇತ್ತ ಮಿಂಚು ಮತ್ತು ಆಕಾಶ್ ಅಪ್ಪ-ಅಮ್ಮನನ್ನು ಹೇಗೆ ಒಂದು ಮಾಡುವುದು ಎಂದು ನೋಡುತ್ತಿದ್ದಾರೆ. ಭಾಗ್ಯಮ್ಮ ಮಕ್ಕಳ ಕಣ್ಣಿಗೆ ಬೀಳ್ತಾಳಾ?
ಅಮೃತಧಾರೆ (Amruthadhaare) ಸೀರಿಯಲ್ನಲ್ಲಿ ಸದ್ಯ ಗೌತಮ್ ಮತ್ತು ಭೂಮಿಕಾ ಒಟ್ಟಿಗೇ ಇದ್ದರೂ ಅವರು ಒಂದಾಗುವ ಬದಲು ದೂರ ದೂರ ಹೋಗುವ ಛಾನ್ಸೇ ಕಾಣಿಸುತ್ತಿದೆ. ಅದರ ನಡುವೆಯೇ ಆನಂದ್ ಕೂಡ ಅವರಿಬ್ಬರನ್ನೂ ಒಂದು ಮಾಡಲು ನೋಡಿ ಸೋತಿದ್ದಾನೆ.
27
ಕೇಳಿಸಿಕೊಂಡ ಭಾಗ್ಯಮ್ಮ
ಆನಂದ್ ತನ್ನ ಪತ್ನಿ ಅಪರ್ಣಾ ಬಳಿ ಮಾತನಾಡುತ್ತಿರುವಾಗಲೇ ಅವರ ಮನೆಯಲ್ಲಿ ಇರುವ ಭಾಗ್ಯಮ್ಮ ಎಲ್ಲವನ್ನೂ ಕೇಳಿಸಿಕೊಂಡಿದ್ದಾಳೆ.
37
ಗುಟ್ಟು ರಟ್ಟಾಯ್ತು
ಗೌತಮ್ ಮತ್ತು ಭೂಮಿಕಾ ಒಂದೇ ಕಡೆ ಇರುವಾಗ ಹೀಗೆ ದೂರ ದೂರು ಇರುವುದು ಎಷ್ಟು ಸರಿ, ಆ ಮಗುವನ್ನು ನೋಡಿದ್ರೆ ಮುದ್ದಾಡಬೇಕು ಎನ್ನಿಸತ್ತೆ, ಗೌತಮ್ ಇನ್ನೊಂದು ಮಗುವನ್ನು ತಂದು ಸಾಕುತ್ತಿದ್ದಾನೆ... ಹೀಗೆ ಎಲ್ಲವನ್ನೂ ಆನಂದ್ಗೆ ಪತ್ನಿ ಹೇಳುವಾಗ ಅದನ್ನು ಭಾಗ್ಯಮ್ಮ ಕೇಳಿಸಿಕೊಂಡು ಶಾಕ್ ಆಗಿದ್ದಾಳೆ.
ಹೇಗಾದರೂ ಮಾಡಿ ಅವರನ್ನು ನೋಡುವ ಹಂಬಲದಿಂದ ಭಾಗ್ಯಮ್ಮ ಮನೆ ಬಿಟ್ಟು ಹೋಗಿದ್ದಾಳೆ. ಭಾಗ್ಯಮ್ಮ ಎಲ್ಲೂ ಇಲ್ಲದ್ದನ್ನು ನೋಡಿ ಆನಂದ್ ದಂಪತಿ ಶಾಕ್ ಆಗಿದ್ದಾರೆ. ಇನ್ನು ಭಾಗ್ಯಮ್ಮ ಗೌತಮ್ ಮತ್ತು ಭೂಮಿಕಾ ಹಾಗೂ ಮಕ್ಕಳನ್ನು ಹುಡುಕಿ ಹೊರಟಾದ ಜೈದೇವನ ಕೈಗೆ ಸಿಕ್ಕಿಬೀಳುವ ಸಾಧ್ಯತೆ ಇದೆ. ಹೀಗಾದ್ರೆ ಮುಂದೇನು? ಮತ್ತೆ ಎಲ್ಲರಿಗೂ ಆಪತ್ತು ಎದುರಾಗುತ್ತಾ ಎನ್ನುವ ಚಿಂತೆ ವೀಕ್ಷಕರದ್ದು.
57
ಅಪ್ಪ-ಅಮ್ಮನ ಚಿಂತೆ
ಅದೇ ಇನ್ನೊಂದೆಡೆ, ಗೌತಮ್ ಮತ್ತು ಭೂಮಿಕಾ ವಿಚಿತ್ರವಾಗಿ ಆಡ್ತಿರೋದು ಮಕ್ಕಳಿಗೆ ತಲೆನೋವಾಗಿದೆ. ಇವರಿಬ್ಬರಿಗೂ ಏನಾಗಿದೆ ಎನ್ನೋದೇ ಗೊತ್ತಾಗ್ತಿಲ್ಲ. ಅದರ ಬಗ್ಗೆನೇ ಆಕಾಶ್ ಮತ್ತು ಮಿಂಚು ಚರ್ಚೆ ಮಾಡುತ್ತಿದ್ದಾರೆ. ಹೇಗೆ ಇದನ್ನು ಪತ್ತೆ ಮಾಡುವುದು ಎನ್ನುವ ಚಿಂತೆ ಅವರಿಗೆ.
67
ಮೊಮ್ಮಕ್ಕಳ ಕಣ್ಣಿಗೆ ಬೀಳ್ತಾಳಾ?
ಭಾಗ್ಯಮ್ಮನಿಗೆ ಎಲ್ಲರೂ ಸಿಗಲಿ. ಆದಷ್ಟು ಬೇಗ ಎಲ್ಲರೂ ಒಂದಾಗಲಿ ಎಂದು ವೀಕ್ಷಕರು ಹಾರೈಸುತ್ತಿದ್ದಾರೆ. ಆದಷ್ಟು ಬೇಗ ಆದರೆ ಇದಾಗಲೇ ಭೂಮಿಕಾ ಸೂಚನೆಯಂತೆ ಗೌತಮ್, ಆಕಾಶ್ನಿಂದ ದೂರ ಹೋಗುವ ಪ್ರಯತ್ನ ಮಾಡುತ್ತಿದ್ದಾನೆ. ಆಕಾಶ್ ಮತ್ತು ಗೌತಮ್ ಹತ್ತಿರ ಆಗ್ತಿರೋದನ್ನು ತಡೆಯಲು ಭೂಮಿಕಾ ಮನೆ ಬಿಟ್ಟು ಹೋಗುವ ಸಾಧ್ಯತೆಯೂ ಇದೆ.
77
ಹಾಗಿದ್ದರೆ ಮುಂದೇನು?
ಹಾಗಿದ್ದರೆ ಮುಂದೇನು? ಅಲ್ಲೇ ಅಲ್ಲೇ ಸುತ್ತಿ ಸುತ್ತಿ ಸುತ್ತುತ್ತಿರುವ ಸೀರಿಯಲ್ನಲ್ಲಿ ಮುಂದೇನು ಎಂದು ಊಹಿಸುವುದು ಕಷ್ಟ. ಭೂಮಿಕಾ ಇಂಥ ಕಠಿಣ ನಿರ್ಧಾರ ತೆಗೆದುಕೊಂಡಿರೋದು ಯಾಕೆ ಎನ್ನವ ಸತ್ಯ ಕೂಡ ಇನ್ನಷ್ಟೇ ಬಯಲಾಗಬೇಕಿದೆ.