ಚಿಕ್ಕೆಜಮಾನಿ ಸೀರಿಯಲ್ ಪಾತ್ರದ ಬಗ್ಗೆ ಈ ಹಿಂದೆ ಮಾತನಾಡಿದ್ದ ಅಕ್ಷತಾ, ನಾನು ಇನ್ನು ಮುಂದೆ ಕಾವೇರಿಯಾಗಿ ನಿಮ್ಮ ಮುಂದೆ ಬರ್ತಿದ್ದೇನೆ. ಹೆಣ್ಣು ಮಕ್ಕಳು ಎಂದರೆ ಜವಾಬ್ದಾರಿ, ಕೇರ್ ಇರುವವರು, ಕನ್ಸರ್ನ್ ಇರುವವರು ಅಂಥ ಹೇಳ್ತಾರೆ. ನಾನು ಈ ಪಾತ್ರದಲ್ಲಿ ಅದೇ ಒಂದು ಕೇರ್‌ನ, ಎಮೋಶನ್‌ನ ನನ್ನ ಫ್ಯಾಮಿಲಿ ಜೊತೆಗೆ ಶೇರ್ ಮಾಡ್ತಾ ಇದ್ದೀನಿ. ಇಲ್ಲಿ ಚಿಕ್ಕೆಜಮಾನಿ ಅಂದ್ರೆ ನಾನು ನನ್ನ ಮನೆ ಯಜಮಾನಿ ಅಂತೂ ಅಲ್ಲ. ನಾನು ಯಾರ ಮನೆಗೆ ಯಜಮಾನಿಯಾಗಿ ಹೋಗ್ತೀನಿ, ಹೇಗೆ ಹೋಗ್ತೀನಿ ಎನ್ನುವುದೇ ನಮ್ಮ ಸೀರಿಯಲ್‌ನ ಕಥೆ. ತುಂಬಾ ಇಷ್ಟಪಟ್ಟು ಕಾವೇರಿ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ" ಎಂದು ನಟಿ ಹೇಳಿದ್ದರು.