ಹೆತ್ತ ತಾಯಿ ಮಾಡಿದ ತ್ಯಾಗ, ಪ್ರೀತಿಯನ್ನ ನೆನದು ಭಾವುಕರಾದ ಝೀ ಕನ್ನಡ ನಾಯಕಿಯರು

First Published Oct 19, 2024, 3:54 PM IST

ಝೀ ಕುಟುಂಬ ನಾಮಿನೇಷನ್ ಈವೆಂಟ್ ನಡೆಯುತ್ತಿದ್ದು, ವೇದಿಕೆ ಮೇಲೆ ಝೀ ಕನ್ನಡದ ನಾಯಕಿಯರು ತಮ್ಮ ತಾಯಿಯ ತ್ಯಾಗ, ಪ್ರೀತಿಯನ್ನು ನೆನೆದು ಭಾವುಕರಾಗಿದ್ದಾರೆ. 
 

ಝಿ ಕನ್ನಡ ವಾಹಿನಿಯ ಅತಿ ದೊಡ್ಡ ಹಬ್ಬವಾದ ಝೀ ಕುಟುಂಬ ಅವಾರ್ಡ್ಸ್ (Zee Kutumba Awards) ಸಮಾರಂಭಕ್ಕೂ ಮುನ್ನ ನಡೆಯುವಂತಹ ನಾಮಿನೇಷನ್ ಈವೆಂಟ್ ಭಾರಿ ಅದ್ಧೂರಿಯಾಗಿ ನಡೆದಿದ್ದು, ಇದೀಗ ವಾಹಿನಿಯಲ್ಲಿ ಪ್ರೊಮೋ ಪ್ರಸಾರವಾಗುತ್ತಿದ್ದು, ಕಾರ್ಯಕ್ರಮವು ಭರ್ಜರಿ ಮನರಂಜನೆ, ಮೋಜು, ಮಸ್ತಿಯ ಜೊತೆಗೆ ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಿದೆ. 
 

ಮೊದಲಿಗೆ ತಮ್ಮ ತಾಯಿಯನ್ನು ನೆನಪಿಸಿಕೊಂಡು ಮಾತನಾಡಿದ ಅಮೃತಧಾರೆಯ ಭೂಮಿಕಾ ಆಲಿಯಾಸ್ ಛಾಯಾ ಸಿಂಗ್ (Chaya Singh), ನಾನು ಇಲ್ಲಿ ಇರೋದಕ್ಕೆ ಕಾರಣಾನೆ ನನ್ನ ಅಮ್ಮ.  ನಾವು ತುಂಬಾ ಸಂಪ್ರದಾಯಸ್ಥ ಠಾಕೂರು ಕುಟುಂಬದಿಂದ ಬಂದಿದ್ದವರು, ಅಂತ ಕುಟುಂಬದಿಂದ ಗ್ಲಾಮರ್ ಇಂಡಸ್ಟ್ರಿಗೆ ಬರಬೇಕಾದರೆ ನನ್ನ ಅಮ್ಮ ತುಂಬಾನೆ ವಿರುದ್ಧಗಳನ್ನ ಎದುರಿಸಬೇಕಾಗಿತ್ತು, ನಾನು ಸಿನಿಮಾಗಳಲ್ಲಿ ನಟಿಸುತ್ತಿದ್ದಾಗಲೂ ಅಮ್ಮ, ಮುಖಕ್ಕೆ ಪರದೆ ಮುಚ್ಚಿಯೇ ಬರುತ್ತಿದ್ದರು. ಆದರೆ ಯಾವಾಗ್ಲೂ ನನಗಾಗಿ ಎಲ್ಲರನ್ನೂ ಎದುರು ಹಾಕಿಕೊಂಡಿದ್ದರು. 
 

Latest Videos


ನನ್ನ ಮಗಳಲ್ಲಿ ಟ್ಯಾಲೆಂಟ್ ಇದೆ, ಅದಕ್ಕಾಗಿ ನಾನು ಅವಳ ಜೊತೆ ನಿಲ್ತೇನೆ ಎಂದು ಛಾಯಾ ಸಿಂಗ್ ಬ್ಯಾಕ್ ಬೋನ್ ಆಗಿ ಅವರ ತಾಯಿ ನಿಂತಿದ್ದರು, ಅನ್ನೋದನ್ನ ನೆನಪಿಸಿಕೊಂಡು ನಟಿ ಕಣ್ಣೀರಿಟ್ಟರು. ನಾನು ಬೆಸ್ಟ್ ಮಗಳು ಅಂತ ನಂಗೆ ಅನಿಸಿಲ್ಲ, ಆದ್ರೆ ಒಂದು ದಿನ ನಾನು ಒಳ್ಳೆ ಮಗಳು ಅನಿಸಿಕೊಳ್ತೇನೆ. ನನ್ನಗೆ ಅಪ್ಪನ ಪ್ರೀತಿ, ಅಣ್ಣನ ಪ್ರೀತಿ ತೋರಿಸಿದ ಅಮ್ಮನಿಗೆ ಥ್ಯಾಂಕ್ಯೂ ಸೋ ಮಚ್, ಗೊತ್ತೋ ಗೊತ್ತಿಲ್ಲದೇನೋ ನೋವು ಮಾಡಿದ್ರೆ ಕ್ಷಮಿಸಿ ಬಿಡು ಎಂದು ಭೂಮಿಕಾ ಭಾವುಕರಾದರು (emotional). 
 

ಶ್ರಾವಣಿ ಸುಬ್ರಹ್ಮಣ ಧಾರಾವಾಹಿಯ ಶ್ರಾವಣಿ ಆಲಿಯಾಸ್ ಆಸಿಯಾ ಫಿರ್ ದೋಸೆ (Asiya Firdose) ಅಮ್ಮ ಎನ್ನುವ ಶಬ್ಧ ಹೇಳ್ತಾನೆ ಕಣ್ಣೀರಾದರು. ಅಮ್ಮ ನನ್ನ ಸೋಲ್ ಮೆಟ್ ಎಂದ ಆಸಿಯಾ, ಎಲ್ಲಾ ಹುಡುಗಿಯರು ಮದ್ವೆ ಆಗೋಕೆ ನಮ್ಮ ಅಪ್ಪನ ಥರ ಹುಡುಗ ಬೇಕು ಅಂತಾರೆ, ಆದರೆ ನಂಗೆ ನಮ್ಮ ಅಮ್ಮನ ಥರ ಕೇರ್ ಮಾಡೋ, ಪ್ರೀತಿ ಮಾಡೋ, ಅರ್ಥ ಮಾಡೋ ಹುಡುಗ ಸಿಗಬೇಕು ಎಂದಿದ್ದಾರೆ. 
 

ಬ್ರಹ್ಮಗಂಟು ಧಾರಾವಾಹಿಯ ದೀಪಾ ಅಂದ್ರೆ ದಿಯಾ ಪಳಕ್ಕಲ್ (Diya Palakkal) ಅವರ ತಾಯಿ ವೆಸ್ಟ್ ಇಂಡೀಸ್ ನಲ್ಲಿದ್ದು, ಮೂರು ವರ್ಷಗಳಿಂದ ಅಲ್ಲಿದ್ದಾರಂತೆ, ಅವರನ್ನ ನೋಡದೆ ತುಂಬಾನೆ ಸಮಯ ಆಗಿದೆ ಎಂದು ಕಣ್ಣಿರಿಟ್ಟ ದಿಯಾಗೆ ಛಾಯಾ ಸಿಂಗ್, ನಾವು ನಿನ್ನ ಜೊತೆ ಇದ್ದೇವೆ ಬೇಜಾರ್ ಮಾಡ್ಬೇಡ ಅಂದ್ರೆ, ಸೀರಿಯಲ್ ನಲ್ಲಿ ಅಪ್ಪನ ಪಾತ್ರ ಮಾಡೋ ಶಿವಾಜಿ ರಾವ್ ಕೂಡ ಭಾವುಕರಾಗಿ, ದೀಪಾ ಈವಾಗ ನಿಂಗೆ ನಾವೇ ಅಪ್ಪ -ಅಮ್ಮ ಬೇಜಾರ್ ಮಾಡ್ಕೋಬೇಡ ಎನ್ನುತ್ತಾ ಮಗಳನ್ನ ತಬ್ಬಿಕೊಂಡರು. 
 

ಇನ್ನು ಅಕುಲ್ ಸೀತಾ ರಾಮ ಖ್ಯಾತಿಯ ಸಿಹಿ ಬಗ್ಗೆ ಮಾತನಾಡಿ ಸಿಹಿ ಬೆಂಗಳೂರಿಗೆ ಬಂದಾಗ ತುಂಬಾನೆ ಕಷ್ಟದಲ್ಲಿದ್ರು, ಇರೋದಕ್ಕೆ ಮನೆ ಇರಲಿಲ್ಲ, ಕೈಯಲ್ಲಿ ಹಣ ಇಲ್ಲದೇ ಮೆಜೆಸ್ಟಿಕ್ ನಲ್ಲಿ ಸುತ್ತಾಡ್ತಿದ್ರು, ನಾಳೆ ಜೀವನ ಹೇಗೆ ಅನ್ನೋ ಪ್ರಶ್ನೆಗೆ ಅವರ ಬಳಿ ಉತ್ತರನೆ ಇರಲಿಲ್ಲ. ಆದರೆ ಸಿಹಿಗೆ ಅವಕಾಶ ಸಿಕ್ಕಮೇಲೆ ಎಲ್ಲವೂ ಬದಲಾಗುತ್ತೆ. ಆ ಮನೆಯ ಧೈರ್ಯ ಅಂದ್ರೆ ಸಿಹಿ ಎನ್ನುವಾಗ ಸಿಹಿ ಅಂದ್ರೆ ರೀತು ಸಿಂಗ್ ತಾಯಿಯ ಕಣ್ಣಾಲಿಗಳು ಒದ್ದೆಯಾದವು. 
 

ಈಗ ಸಿಹಿನೇ ಆ ಮನೆಯ ಆಧಾರ, ಓದುತ್ತಲೇ ಆಕ್ಟಿಂಗ್ ಕೂಡ ಮಾಡುವ ಸಿಹಿ ಆ ಮನೆಯ ಮಗಳಲ್ಲ, ಆ ಮನೆಯ ತಾಯಿ. ಈಕೆ ನಿಜವಾದ ಹೀರೋ ಎಂದಿದ್ದಾರೆ ಅಕುಲ್. ಅಕುಲ್ ಹೀಗೆ ಹೇಳ್ತಿದ್ದಂತೆ, ಅಕುಲ್ ಎದೆಗೊರಗಿದ ಸಿಹಿ ತಾನು ಕಣ್ಣಿರಿಟ್ಟಿದ್ದಾಳೆ. ನನಗೆ ಎಲ್ಲಾದಕ್ಕೂ ಅಮ್ಮ ಸಪೋರ್ಟ್ ಮಾಡೋದು ಎನ್ನುತ್ತಾ ಅಮ್ಮನಿಗೆ ಐ ಲವ್ ಯು ಎಂದಿದ್ದಾಳೆ ಸಿಹಿ. ಕೊನೆಗೆ ಸಿಹಿಯ ನಿಜವಾದ ಅಮ್ಮ ಹಾಗೂ ಸೀತಮ್ಮ ಇಬ್ಬರು ಜೊತೆಯಾಗಿ ಸಿಹಿ ಕೆನ್ನೆಗೆ ಸಿಹಿ ಮುತ್ತುಗಳನ್ನ ನೀಡಿದ್ದಾರೆ. ಅಮ್ಮನನ್ನು ನೆನೆದು ತಾರೆಯರು ಭಾವುಕಾರದ ಕ್ಷಣಗಳನ್ನ ನೋಡುತ್ತಾ ಅಭಿಮಾನಿಗಳು, ವೀಕ್ಷಕರ ಕಣ್ಣಾಲಿಗಳು ಕೂಡ ಒದ್ದೆಯಾಗಿರೋದಂತೂ ನಿಜ. 
 

click me!