Photos: ಸೀರಿಯಲ್‌ ಮುಗಿದು 4 ವರ್ಷಗಳ ಬಳಿಕ ವೈಷ್ಣವಿ ಗೌಡ ನಿಶ್ಚಿತಾರ್ಥದಲ್ಲಿ ಒಟ್ಟಗೆ ಸೇರಿದ ಅಗ್ನಿಸಾಕ್ಷಿ ತಂಡ!

Published : Apr 15, 2025, 01:22 PM ISTUpdated : Apr 15, 2025, 01:35 PM IST

‘ಅಗ್ನಿಸಾಕ್ಷಿʼ ಧಾರಾವಾಹಿ ಖ್ಯಾತಿಯ ನಟಿ ವೈಷ್ಣವಿ ಗೌಡ ಅವರು ಹಸೆಮಣೆ ಏರೋಕೆ ರೆಡಿಯಾಗಿದ್ದಾರೆ. ಈಗಾಗಲೇ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಶುಭ ಸಂದರ್ಭದಲ್ಲಿ ʼಅಗ್ನಿಸಾಕ್ಷಿʼ ಧಾರಾವಾಹಿ ಕಲಾವಿದರು ಭಾಗಿಯಾಗಿ ಹಾರೈಸಿದ್ದಾರೆ.  

PREV
18
Photos: ಸೀರಿಯಲ್‌ ಮುಗಿದು 4 ವರ್ಷಗಳ ಬಳಿಕ ವೈಷ್ಣವಿ ಗೌಡ ನಿಶ್ಚಿತಾರ್ಥದಲ್ಲಿ ಒಟ್ಟಗೆ ಸೇರಿದ ಅಗ್ನಿಸಾಕ್ಷಿ ತಂಡ!

ಅಂದಹಾಗೆ ಆರು ವರ್ಷಗಳಿಗೂ ಅಧಿಕ ಕಾಲ ʼಅಗ್ನಿಸಾಕ್ಷಿʼ ಧಾರಾವಾಹಿ ಪ್ರಸಾರ ಆಗಿತ್ತು. ಟಿಆರ್‌ಪಿಯಲ್ಲಿ ಈ ಧಾರಾವಾಹಿ ಕಮಾಲ್‌ ಮಾಡಿತ್ತು. 
 

28

ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸನ್ನಿಧಿ-ಸಿದ್ದಾರ್ಥ್‌ ಪಾತ್ರದಲ್ಲಿ ವೈಷ್ಣವಿ ಗೌಡ, ವಿಜಯ್‌ ಸೂರ್ಯ ನಟಿಸಿದ್ದರು. ಇವರಿಬ್ಬರ ಕೆಮಿಸ್ಟ್ರಿ ಅನೇಕರಿಗೆ ಇಷ್ಟ ಆಗಿತ್ತು.
 

38

ಸೀತಾರಾಮ ಧಾರಾವಾಹಿ ನಟಿ ವೈಷ್ಣವಿ ಗೌಡ ಅವರು ʼಅಗ್ನಿಸಾಕ್ಷಿʼ ಧಾರಾವಾಹಿ ಕಲಾವಿದರನ್ನು ತಮ್ಮ ನಿಶ್ಚಿತಾರ್ಥ ಸಮಾರಂಭಕ್ಕೆ ಆಹ್ವಾನಿಸಿದ್ದರು. 
 

48

ವೈಷ್ಣವಿ ಗೌಡ ಅವರ ನಿಶ್ಚಿತಾರ್ಥಕ್ಕೆ ಚಿತ್ಕಳಾ ಬಿರಾದಾರ್‌ ದಂಪತಿ, ಇಷಿತಾ ವರ್ಷ- ಮುರುಗಾನಂದ, ಅಮಿತ್‌ ರಾವ್‌ ದಂಪತಿ ಮುಂತಾದವರು ಆಗಮಿಸಿದ್ದಾರೆ. 
 

58

ಅಷ್ಟೇ ಅಲ್ಲದೆ ಸೀತಾರಾಮ ಧಾರಾವಾಹಿ ಕಲಾವಿದರಾದ ಜ್ಯೋತಿ ರೈ, ಪದ್ಮಕಲಾ ಡಿ ಎಸ್‌, ಪೂಜಾ ಲೋಕೇಶ್‌, ಮೇಘನಾ ಶಂಕರಪ್ಪ ಸೇರಿದಂತೆ ದೊಡ್ಡ ತಾರಾಬಳಗ ಆಗಮಿಸಿದೆ. 
 

68

‘ಅಗ್ನಿಸಾಕ್ಷಿ’ ಧಾರಾವಾಹಿ ಮುಗಿದು ನಾಲ್ಕು ವರ್ಷಗಳು ಕಳೆದವು. ಇದಾದ ಬಳಿಕವೂ ಕೂಡ ಧಾರಾವಾಹಿ ತಂಡವು ಒಟ್ಟಿಗೆ ಇರೋದು, ಈ ರೀತಿ ಸಮಾರಂಭಗಳಲ್ಲಿ ಭಾಗಿ ಆಗಿರೋದು ಖುಷಿಯ ವಿಷಯ. 
 

78

ಕನ್ನಡ ನಟಿ ವೈಷ್ಣವಿ ಗೌಡ ಹಾಗೂ ಅನುಕೂಲ್‌ ಮಿಶ್ರಾ ಅವರು ಹಾರ್ಟ್‌ ಸಿಂಬಾಲ್‌ ತೋರಿಸಿ ಕ್ಯಾಮರಾಕ್ಕೆ ಪೋಸ್‌ ನೀಡಿದ್ದು ಹೀಗಿತ್ತು.

88

ಚಿತ್ಕಳಾ ಬಿರಾದಾರ್‌ ದಂಪತಿ, ಅಮಿತ್‌ ರಾವ್‌ ದಂಪತಿ, ಇಷಿತಾ ರಾವ ದಂಪತಿ ಎಲ್ಲರೂ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡಿದ್ದು ಹೀಗೆ... 

Read more Photos on
click me!

Recommended Stories