ಅಮೃತಾ ಬಳಿಕ 'ಆದಿಲಕ್ಷ್ಮೀ ಪುರಾಣ'ದಿಂದ ಇಬ್ಬರು ಔಟ್… ಹೊಸ ನಟರ ಎಂಟ್ರಿ

Published : Mar 31, 2026, 04:21 PM IST

Adilakshmi Purana: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಆದಿ ಲಕ್ಷ್ಮೀ ಪುರಾಣ’ ಧಾರಾವಾಹಿಯಿಂದ ಇಬ್ಬರು ನಟರು ಔಟ್ ಆಗಿದ್ದಾರೆ. ಈಗಾಗಲೆ ಮತ್ತಿಬ್ಬರು ಹೊಸ ನಟರ ಆಗಮನವೂ ಆಗಿದೆ. ಹಾಗಿದ್ರೆ ಧಾರಾವಾಹಿಯಿಂದ ಹೊರ ಬಂದವರು ಯಾರು? ಅದಕ್ಕೇ ಕಾರಣ ಏನು ನೋಡೋಣ.

PREV
16
ಆದಿಲಕ್ಷ್ಮೀ ಪುರಾಣ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ ‘ಆದಿಲಕ್ಷ್ಮೀ ಪುರಾಣ’. ಒಲ್ಲದ ಮದುವೆಗೆ ತಲೆ ಒಡ್ಡಿ, ಇಷ್ಟ ಇಲ್ಲದೇ ಇದ್ದರೂ, ಒಟ್ಟಿಗೆ ವಾಸಿಸುವ, ಒಂದೇ ಕಾಲೇಜಿಗೆ ಹೋಗುವ ಆದಿ ಮತ್ತು ಲಕ್ಷ್ಮಿಯ ಕತೆ ಇದಾಗಿದೆ. ಇದೀಗ ಧಾರಾವಾಹಿಯಿಂದ ಇಬ್ಬರು ನಟರು ಹೊರ ಬಂದಿದ್ದಾರೆ.

26
ಇಬ್ಬರು ನಟರು ಔಟ್

ಹೌದು, ಆದಿಲಕ್ಷ್ಮೀ ಪುರಾಣ ಧಾರಾವಾಹಿಯಿಂದ ಇತ್ತೀಚೆಗಷ್ಟೇ ಅಮೃತಾ ಪಾತ್ರ ಬದಲಾಗಿತ್ತು, ಇದೀಗ ಮತ್ತೆ ಇಬ್ಬರು ಮುಖ್ಯ ಪಾತ್ರಧಾರಿಗಳು ಔಟ್ ಆಗಿದ್ದಾರೆ. ಈಗಾಗಲೇ ಅವರ ಜಾಗಕ್ಕೆ ಇನ್ನಿಬ್ಬರು ಹೊಸ ನಟರ ಎಂಟ್ರಿ ಕೂಡ ಆಗಿದೆ ಎನ್ನುವ ಮಾಹಿತಿ ಕೂಡ ಇದೆ. ಹಾಗಿದ್ರೆ ಆದಿಲಕ್ಷ್ಮೀ ಪುರಾಣ ಧಾರಾವಾಹಿಯಿಂದ ಹೊರ ನಡೆದ ನಟರು ಯಾರ್ಯಾರು?

36
ಇಬ್ಬರು ನಟರು ಔಟ್, ಹೊಸ ನಟರು ಇನ್

ಅಂದ ಹಾಗೇ ಆದಿ ಲಕ್ಷ್ಮೀ ಪುರಾಣದಿಂದ ಆದಿ ತಾಯಿ ವಿಮಲಾ ಪಾತ್ರಧಾರಿ ರಶ್ಮಿ ಗೌಡ ಹಾಗೂ ಆದಿ ತಂದೆಯಾಗಿ ನಟಿಸುತ್ತಿದ್ದ ಗಿರಿ ಪಾತ್ರಧಾರಿ ಕೈಲಾಶ್ ಅವರು ಧಾರಾವಾಹಿಯಿಂದ ಹೊರ ಬಂದಿದ್ದಾರೆ. ಇಬ್ಬರು ಸ್ವ ಇಚ್ಚೆಯಿಂದ ಧಾರಾವಾಹಿಯಿಂದ ಹೊರ ನದೆದಿದ್ದಾರೆ ಎನ್ನಲಾಗುತ್ತಿದೆ. ಇದೀಗ ಆದಿ ತಾಯಿ ವಿಮಲಾ ಪಾತ್ರಕ್ಕೆ ಶಾಲಿನಿ ರಾವ್ ಎಂಟ್ರಿ ಕೊಟ್ಟಿದ್ದಾರೆ ಹಾಗೂ ಆದಿ ತಂದೆಯ ಪಾತ್ರಕ್ಕೆ ರಾಜೇಶ್ ರಾವ್ ಎಂಟ್ರಿಯಾಗಿದೆ. ಈ ಇಬ್ಬರೂ ಕೂಡ ಹಲವಾರು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವಂತಹ ನಟರಾಗಿದ್ದಾರೆ.

46
ರಶ್ಮಿ ಗೌಡ ಹೇಳಿದ್ದೇನು?

ನಟಿ ರಶ್ಮಿ ಗೌಡ ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು ‘ಆದಿಲಕ್ಷ್ಮೀ ಪುರಾಣ’ದಲ್ಲಿ ವಿಮಲ ಪಾತ್ರ ಮಾಡಿದ್ದು ತುಂಬಾ ಖುಷಿ ಕೊಟ್ಟಿದೆ. ಈ ಪಾತ್ರದ ಅವಕಾಶ ನೀಡಿದ ಸಂತೋಷ್ ಕೋಟಿ ಸರ್, ಜನಾರ್ಧನ್‌ ಸರ್‌ ಮತ್ತು ಆರೂರು ಜಗದೀಶ್ ಸರ್‌ ಮತ್ತು ಜೀ ಕನ್ನಡ ವಾಹಿನಿಗೆ ಧನ್ಯವಾದಗಳು. ಮತ್ತೊಂದು ಹೊಸ ತ್ರದ ಮೂಲಕ ಶೀಘ್ರದಲ್ಲೇ ಬರ್ತಿನಿ” ಎಂದಿದ್ದಾರೆ.

56
ಅಮೃತಾ ಪಾತ್ರಧಾರಿಯೂ ಔಟ್

ಕೆಲವು ದಿನಗಳ ಹಿಂದೆಯಷ್ಟೇ ಆದಿಯ ಅಕ್ಕ ಹಾಗೂ ಸಂಜೀವನ ಪತ್ನಿ ಅಮೃತಾ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ರಕ್ಷಿತಾ ಹೊರ ಬಂದಿದ್ದರು. ನಾನು ಇಷ್ಟಪಟ್ಟು ನಟಿಸಿದ್ದ ಪಾತ್ರ, ಈ ಪಾತ್ರದಲ್ಲಿ ಇನ್ನು ತುಂಬಾ ಸಮಯ ಇರುವ ಬಯಕೆ ಇತ್ತು. ಆದರೆ ಕಾರಣಾಂತರಗಳಿಂದ ಪಾತ್ರದಲ್ಲಿ ಮುಂದುವರೆಯಲು ಸಾಧ್ಯ ಆಗಲಿಲ್ಲ ಎಂದು ರಕ್ಷಿತಾ ಹೇಳಿದ್ದರು.

66
ಯಾರೆಲ್ಲಾ ನಟಿಸುತ್ತಿದ್ದಾರೆ?

ಆದಿಲಕ್ಷ್ಮೀ ಪುರಾಣದಲ್ಲಿ ಆಶಾ ಅಯ್ಯನಾರ್, ರಜನೀಶ್, ಮಂಜುನಾಥ್ ಹೆಗಡೆ, ಅಶೋಕ್ ಶರ್ಮಾ, ಮಾನ್ಸಿ ಜೋಷಿ, ಸುಷ್ಮಾ, ಮಾಲತಿ ಸಿರ್ದೇಶಪಾಂಡೆ, ಜ್ಯೋತಿ, ಸವಿತಾ ಕೃಷ್ಣಮೂರ್ತಿ ಮತ್ತು ಭಾಗ್ಯಶ್ರೀ ರಾವ್ ನಟಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories