ಈ ನಗುಮುಖದ ಒಡತಿ, ಗುಳಿಕೆನ್ನೆ ಚೆಲುವೆಗಿಂದು ಹುಟ್ಟು ಹಬ್ಬ; ಯಾರು ಗೆಸ್ ಮಾಡಿ?

First Published | Feb 20, 2024, 1:09 PM IST

ಕಿರುತೆರೆಯಲ್ಲಿ ಗುಳಿ ಕೆನ್ನೆ ಚೆಲುವೆ ಎಂದೇ ಜನಪ್ರಿಯತೆ ಪಡೆದಿರುವ ವೈಷ್ಣವಿ ಗೌಡ, ಇಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದು, ಅಭಿಮಾನಿಗಳು ನಗುಮುಖದ ಚೆಲುವೆಗೆ ಶುಭ ಕೋರಿದ್ದಾರೆ. 

ಈ ಫೋಟೋದಲ್ಲಿರೋ ಮುದ್ದು ಮುದ್ದಾದ ಮಗು ಯಾರು ಅನ್ನೋದನ್ನು ಗೆಸ್ ಮಾಡಿದ್ರಾ? ಖಂಡಿತಾ ಮಾಡಿರ್ತೀರಿ ಅಲ್ವಾ? ಯಾಕಂದ್ರೆ ಈಗಲೂ ಅದೇ ಮಗುವಿನ ಮುಗ್ಧತೆ ಉಳಿಸಿಕೊಂಡಿರುವ ನಟಿ ವೈಷ್ಣವಿ ಗೌಡ (Vaishnavi Gowda).
 

ಕಿರುತೆರೆಯ ಜನಪ್ರಿಯ ಮತ್ತು ಜನಮೆಚ್ಚಿನ ನಾಯಕಿಯರಲ್ಲಿ ಒಬ್ಬರು ವೈಷ್ಣವಿ ಗೌಡ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿ ಸಾಕ್ಷಿ (Agni Sakshi) ಸೀರಿಯಲ್ ನಲ್ಲಿ ಸನ್ನಿಧಿಯಾಗಿ ಕಾಣಿಸಿಕೊಂಡು ಮನೆಮಾತಾಗಿದ್ದ ನಟಿ ಇವರು. 

Tap to resize

ಅಗ್ನಿ ಸಾಕ್ಷಿ ಬಳಿಕ ನಟನೆಯಿಂದ ದೂರವೇ ಉಳಿದಿದ್ದ ವೈಷ್ಣವಿ ನಂತರ ಬಿಗ್ ಬಾಸ್ ಸೀಸನ್ 8 (Bigg Boss Season 8)ರಲ್ಲಿ ಸ್ಪರ್ಧಿಯಾಗಿ ಭಾಗವಹಿಸುವ ಮೂಲಕ ಮತ್ತೆ ತಮ್ಮ ಮಾತು, ಒಳ್ಳೆಯತನದಿಂದ ಜನಮನ ಗೆದ್ದಿದ್ದರು. 

ಇದೀಗ ಝೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಸೀತಾ ರಾಮ ಸೀರಿಯಲ್ ನಲ್ಲಿ ಸೀತಾ ಆಗಿ ಜನರಿಗೆ ಮತ್ತಷ್ಟು ಹತ್ತಿರವಾಗಿರುವ ನಟಿ ವೈಷ್ಣವಿ ಗೌಡ, ಇಂದು ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದು, ಗುಳಿ ಕೆನ್ನೆ ಚೆಲುವೆಗೆ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ. 

ಅಭಿಮಾನಿಗಳು ಕಾಮನ್ ಡಿಪಿ ಮಾಡಿ ಶೇರ್ ಮಾಡಿದ್ದು, ಅಪಾರ ಅಭಿಮಾನಿಗಳನ್ನು ಹೊಂದಿರುವ ವೈಷ್ಣವಿ ಅಪಾರ ಫ್ಯಾನ್ ಪೇಜಸ್ ಗಳನ್ನು ಸಹ ಹೊಂದಿದ್ದಾರೆ, ಎಲ್ಲಾ ಅಭಿಮಾನಿಗಳು ನಟಿಗೆ ಶುಭ ಕೋರಿದ್ದು, ನಗು ಮುಖದ ಒಲವೇ..ಗುಳಿ ಕೆನ್ನೆ ಚೆಲುವೇ.. ಹುಟ್ಟು ಹಬ್ಬದ ಶುಭಾಶಯಗಳು ಎಂದಿದ್ದಾರೆ.

ಸ್ಮಾಲ್ ಸ್ಕ್ರೀನ್ ಕ್ವೀನ್ (Smallscreen queen), ನಗುತಾ ನಗುತಾ ಹೀಗೆ ನೂರು ವರ್ಷ ಸಂತೋಷವಾಗಿ ಬಾಳಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. ಜೊತೆಗೆ ಸಹನಟರಾದ ಮೇಘನಾ, ಇಶಿತಾ ವರ್ಷ, ಮತ್ತಿತರ ಸೆಲೆಬ್ರಿಟಿಗಳು ಸಹ ಕಿರುತೆರೆಯ ಸೀತೆಗೆ ವಿಷ್ ಮಾಡಿದ್ದಾರೆ. 

ಸೀರಿಯಲ್, ಸಿನಿಮಾಗಳಲ್ಲಿ ನಟಿಸಿರುವ ವೈಷ್ಣವಿ ತಮ್ಮ ಪಾತ್ರದ ಆಯ್ಕೆಗೆ ತುಂಬಾನೆ ಚೂಸಿಯಾಗಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ 1.4 ಮಿಲಿಯನ್ ಇನ್ ಸ್ಟಾಗ್ರಾಂ ಫಾಲೋವರ್ ಹೊಂದಿದ್ದಾರೆ, ಜೊತೆಗೆ ಯೂಟ್ಯೂಬ್ ಚಾನೆಲ್ ಕೂಡ ಹೊಂದಿದ್ದಾರೆ. 

ಮಲ್ಟಿ ಟ್ಯಾಲೆಂಟ್ ಆಗಿರೋ ವೈಷ್ಣವಿ ಗೌಡ, ಭರತನಾಟ್ಯ, ಕೂಚಿಪುಡಿ ಅಷ್ಟೇ ಯಾಕೆ ಬೆಲ್ಲಿ ಡ್ಯಾನ್ಸ್ ಕೂಡ ಮಾಡ್ತಾರೆ. ಫಿಟ್ ಆಗಿರೋದಕ್ಕೆ ತಪ್ಪದೇ ಯೋಗ ಮಾಡ್ತಾರೆ. ಮನೆ ಆಹಾರವನ್ನೆ ಹೆಚ್ಚಾಗಿ ತಿನ್ನುವ ಮೂಲಕ ಫಿಟ್ ಆಗಿರೋದನ್ನೆ ಬಯಸ್ತಾರೆ. ಈ ಜನಮೆಚ್ಚಿದ ನಟಿಗೆ ನಮ್ ಕಡೆಯಿಂದಲೂ ಹುಟ್ಟು ಹಬ್ಬದ ಶುಭಾಶಯಗಳು. 

Latest Videos

click me!