ಚಂದನ್ ಮತ್ತು ಕವಿತಾ ತಾವು ಇಬ್ಬರಿಂದ ಮೂವರು ಆಗುತ್ತಿರುವ ಸಂತಸದ ವಿಷಯವನ್ನು ಅಭಿಮಾನಿಗಳ ಜೊತೆ ಮೇ ಮೊದಲ ವಾರದಲ್ಲಿ ಹಂಚಿಕೊಂಡಿದ್ದರು. ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡಿರುವ ಕವಿತಾ ವಿಶ್ರಾಂತಿಯಲ್ಲಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮಾ ಧಾರಾವಾಹಿಯಲ್ಲಿ ಕವಿತಾ ಮತ್ತು ಚಂದನ್ ಜೊತೆಯಾಗಿ ನಟಿಸಿದ್ದರು. ನಂತರ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿಯೂ ಪ್ರತ್ಯೇಕ ಸೀಸನ್‌ನಲ್ಲಿ ಸ್ಪರ್ಧಿಗಳಾಗಿದ್ದರು.
ಇಂದು ಇನ್‌ಸ್ಟಾಗ್ರಾಂನಲ್ಲಿ ಪಟ ಪಟ ಅಂತ ಕಣ್ಣು ಮಿಟುಕಿಸುತ್ತಿರುವ ವಿಡಿಯೋ ಕ್ಲಿಪ್ ಶೇರ್ ಮಾಡಿಕೊಂಡಿದ್ದಾರೆ. ಇದು ಇನ್ನೆಷ್ಟು ದಿನ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ. ಇದೀಗ ಈ ಪೋಸ್ಟ್‌ಗೆ ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.
ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಬಿಗ್‌ಬಾಸ್ ಮಾಜಿ ಸ್ಪರ್ಧಿ ಧನರಾಜ್, ಈ ಸಮಯದಲ್ಲಿ ಹೀಗೆಲ್ಲಾ ಆಗುತ್ತೆ. ಕಾಫಿ ಕುಡಿ, ಹುಷಾರಾಗಿರುವ ಎಂದು ಕಮೆಂಟ್ ಮಾಡಿದ್ದಾರೆ. ಈ ಕಮೆಂಟ್‌ಗೆ ರಿಯಾಕ್ಟ್ ಮಾಡಿರುವ ಕವಿತಾ, ನಾನು ನಿಮಗೆ ಕಾಲ್ ಮಾಡುವೆ ಎಂದು ಹೇಳಿದ್ದಾರೆ.
ಲವ್ ಯು ಅಕ್ಕಾ, ಹುಷಾರಾಗಿರಿ. ನಿಮ್ಮ ಮೇಲೆ ಯಾವ ಕೆಟ್ಟ ದೃಷ್ಠಿ ಬೀಳದಿರಲಿ. ಈಗ ನಿಮಗೆಷ್ಟು ತಿಂಗಳು ಎಂದು ಕೇಳಬಹುದಾ ಎಂದು ಫ್ಯಾನ್ಸ್ ಪ್ರಶ್ನೆ ಮಾಡಿದ್ದಾರೆ. ನೀವು ಹಸಿರು ಬಣ್ಣದ ಸೀರೆ ಧರಿಸಿ ಫೋಟೋ ತೆಗೆಸಿಕೊಳ್ಳಿ ಎಂದು ಅಭಿಮಾನಿಯೊಬ್ಬರು ಮನವಿ ಮಾಡಿಕೊಂಡಿದ್ದಾರೆ.
ಲಕ್ಷ್ಮಿ ಬಾರಮ್ಮ ಸೀರಿಯಲ್ ನಲ್ಲಿ ಗಂಡನ ಪಾತ್ರದಲ್ಲಿ ಮಿಂಚಿದ್ದ ಚಂದನ್ ಗೌಡ ಅವರನ್ನೇ ನಟಿ ಕವಿತಾ ಮದುವೆಯಾಗಿದ್ದಾರೆ. 2021 ಮೇ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಇದೇ ಧಾರಾವಾಹಿಯಲ್ಲಿ ಗೊಂಬೆ ಪಾತ್ರದಲ್ಲಿ ನಟಿಸಿದ್ದ ನೇಹಾ ಗೌಡ ತಮ್ಮ ಬಾಲ್ಯದ ಗೆಳೆಯ ಚಂದನ್ ಅವರನ್ನು ಮದುವೆಯಾಗಿದ್ದಾರೆ. ನೇಹಾ ಮತ್ತು ಕವಿತಾ ಆಪ್ತ ಗೆಳತಿಯರಾಗಿದ್ದು, ಕಾಕತಾಳೀಯ ಎಂಬಂತೆ ಇಬ್ಬರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ನೇಹಾ ಸೀರೆ ಧರಿಸಿ ತೋಟದಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದರು.