ತನ್ನ ಅಜ್ಜಿಯ ವಯಸ್ಸಿನ ಅಭಿಮಾನಿ ಭೇಟಿ ಮಾಡಿ ಆಸೆ ಈಡೇರಿಸಿದ ರಕ್ಷಿತಾ ಶೆಟ್ಟಿ

Published : Mar 09, 2026, 10:18 AM IST

ಬಿಗ್‌ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿ,  ತಮ್ಮ ಹಿರಿವಯಸ್ಸಿನ ಅಭಿಮಾನಿಯೊಬ್ಬರನ್ನು ಭೇಟಿ ಮಾಡಿದ್ದಾರೆ. ಅಜ್ಜಿಯ ಆಸೆಯಂತೆ ಅವರ ಮನೆಗೆ ತೆರಳಿ, ಅವರೊಂದಿಗೆ ಸಮಯ ಕಳೆದು ಆಶೀರ್ವಾದ ಪಡೆದಿದ್ದು, ಈ ವೀಡಿಯೋಗಳು ನೆಟ್ಟಿಗರ ಮನಗೆದ್ದಿವೆ.

PREV
16
ತನ್ನ ಅಭಿಮಾನಿ ಅಜ್ಜಿಯನ್ನು ಭೇಟಿ ಮಾಡಿದ ರಕ್ಷಿತಾ

ಬಿಗ್ಬಾಸ್ ಕನ್ನಡ ಸೀಸನ್ 11ರಲ್ಲಿ ಭಾಗವಹಿಸಿ ರಾಜ್ಯದೆಲ್ಲೆಡೆ ಮನೆ ಮಾತಾಗಿರುವ ರಕ್ಷಿತಾ ಶೆಟ್ಟಿ ಸೋಶಿಯಲ್ ಮೀಡಿಯಾ ಮಾತ್ರವಲ್ಲ, ಎಲ್ಲೆಡೆ ತಮ್ಮದೇ ಆದ ವಿಭಿನ್ನ ವಿಶಿಷ್ಟವಾದ ಅಭಿಮಾನಿಗಳನ್ನು ಹೊಂದಿದ್ದಾರೆ. ವಿಶೇಷವಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗದಲ್ಲಿ ಆಕೆಗೆ ಸಿಕ್ಕಾಪಟ್ಟೆ ಫ್ಯಾನ್ಸ್‌ಗಳಿದ್ದಾರೆ. ಯಾವ ಸಿನಿಮಾ ನಟರಿಗೂ ಫ್ಯಾನ್ಸ್ ಆಗದ ಮಂಗಳೂರು ಜನ ಈ ರಕ್ಷಿತಾ ಅವರನ್ನು ಮಾತ್ರ ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಅದಕ್ಕೆ ಮುಖ್ಯವಾಗಿ ರಕ್ಷಿತಾ ಅವರ ಮಾತು ಹಾಗೂ ವಯಸ್ಸಿಗೆ ಮೀರಿದ ಪ್ರಬುದ್ಧತೆ ಕಾರಣ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ಅಜ್ಜಿಯರು ಕೂಡ ಆಕೆ ಬಿಗ್ಬಾಸ್‌ಗೆ ಬಂದ ನಂತರ ಅವರಿಗೆ ಅಭಿಮಾನಿಗಳಾಗಿದ್ದು, ರಕ್ಷಿತಾ ಇತ್ತೀಚೆಗೆ ತಮ್ಮ ಅಜ್ಜಿ ವಯಸ್ಸಿನ ಅಭಿಮಾನಿಯೊಬ್ಬರನ್ನು ಭೇಟಿ ಮಾಡಿದ್ದರು. ಅದರ ವೀಡಿಯೋ ಫೋಟೋಗಳು ಈಗ ವೈರಲ್ ಆಗಿದ್ದು, ಅನೇಕರು ರಕ್ಷಿತಾ ಆ ತನ್ನ ಅಭಿಮಾನಿ ಅಜ್ಜಿಯನ್ನು ಭೇಟಿ ಮಾಡಿದ್ದಕ್ಕೆ ಖುಷಿಯಾಗಿದ್ದಾರೆ.

26
ತನಗೊಬ್ಬರು ಅಜ್ಜಿ ಫ್ಯಾನ್ಸ್ ಇದ್ದಾರೆ ಎಂದು ರಕ್ಷಿತಾಗೆ ಗೊತ್ತಾಗಿದ್ದು ಹೇಗೆ?

ಈ ವೀಡಿಯೋವವನ್ನು ಸಿಂಚು ಶೆಟ್ಟಿ(sinch_shettyy)ಎಂಬುವವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇ ಸಿಂಚ್ ಶೆಟ್ಟಿ ಎಂಬುವವರು ಅಜ್ಜಿ ಬಿಗ್ಬಾಸ್ ದಿನವೂ ನೋಡುತ್ತಿದ್ದು, ಬಿಗ್ಬಾಸ್ ಮುಗಿದ ನಂತರ ಅವರು, ಆ ಕಾರ್ಯಕ್ರಮ ಮುಗಿದಿರುವುದರ ಅರಿವಿಲ್ಲದೇ ತಮ್ಮ ಮೊಮ್ಮಗಳ ಬಳಿ ಆ ಬಗ್ಗೆ ಕೇಳುತ್ತಾರೆ. ಮೊಮ್ಮಗಳು ಯಾರು ಬೇಕು ನಿಮಗೆ ಎಂದು ಕೇಳಿದಾಗ, ತಮ್ಮ ಕುಂದಾಪುರ ಭಾಷೆಯಲ್ಲಿ ಅದೊಂದು ಹೆಣ್ ಬರ್ತಲೆ ಎಂದು ಹೇಳುತ್ತಾರೆ. 

36
ರಕ್ಷಿತಾ ಬಿಗ್ ಫ್ಯಾನ್ ಈ ಹಿರಿ ಜೀವ

ಯಾವ್ ಹೆಣ್ಣ್ ಎಂದು ಕೇಳಿದಾಗ, ಶೆಟ್ರ ಹೆಣ್ ಜೋರಿತ್ತಲ್ಲ ಎಂದಾಗ ಮೊಮ್ಮಗಳು ಆ ಕಾರ್ಯಕ್ರಮ ಮುಗಿತು ಎಂದು ಹೇಳುತ್ತಾರೆ. ಅದಕ್ಕೆ ಅವರು ಮೊಮ್ಮಗಳಿಗೆ ನೀನು ಸುಳ್ಳು ಹೇಳುವುದು ನನಗೆ ಆ ಕಾರ್ಯಕ್ರಮ ಮುಗಿದಿಲ್ಲ ಎಂದು ಹೇಳುತ್ತಾರೆ. ನಿಜವಾಗಿಯೂ ಆ ಕಾರ್ಯಕ್ರಮ ಮುಗಿತು ಎಂದು ನಂತರ ಅವರ ಮೊಮ್ಮಗಳು ಅವರಿಗೆ ಮನವರಿಕೆ ಮಾಡುತ್ತಾರೆ. ನಂತರ ಹೋ ಹೌದಾ ಎಂದು ಅವರು ಬೇಜಾರಾಗಿದ್ದಾರೆ.

46
ಬಿಗ್ಬಾಸ್‌ನಲ್ಲಿ ರಕ್ಷಿತಾ ಆಟ ಇಷ್ಟಪಡ್ತಿದ್ದ ಅಜ್ಜಿ

ಈ ವೀಡಿಯೋವನ್ನು ರಕ್ಷಿತಾ ಶೆಟ್ಟಿ ಅವರಿಗೆ ಟ್ಯಾಗ್ ಮಾಡಿ ಹಾಕಲಾಗಿತ್ತು. ರಕ್ಷಿತಾ ಕೂಡ ಈ ವೀಡಿಯೋ ನೋಡಿ ಹೃದಯದ ಇಮೋಜಿಯನ್ನು ಹಾಕಿದ್ದರು. ಇದಾದ ನಂತರ ಅನೇಕರು ಈ ಅಜ್ಜಿಯನ್ನೊಮ್ಮೆ ಭೇಟಿ ಮಾಡುವಂತೆ ರಕ್ಷಿತಾಗೆ ಮನವಿ ಮಾಡಿದ್ದರು. ಅನೇಕರು ವೀಡಿಯೋವನ್ನು ರಕ್ಷಿತಾಗೆ ಕಳುಹಿಸಿ ಒಮ್ಮೆ ಭೇಟಿ ಮಾಡುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆ ರಕ್ಷಿತಾ ಆ ಅಜ್ಜಿಯನ್ನು ಭೇಟಿ ಮಾಡಿ ಅವರ ಜೊತೆ ಮಾತುಕತೆ ನಡೆಸಿ ಖುಷಿಯಾಗಿದ್ದು, ಅವರ ಹಿರಿಯ ಜೀವದ ಕಾಲಿಗೆ ಬಿದ್ದು ರಕ್ಷಿತಾ ಶೆಟ್ಟಿ ಆಶೀರ್ವಾದ ಪಡೆದಿದ್ದಾರೆ. ಈ ವೀಡಿಯೋ ಕೂಡ ವೈರಲ್ ಆಗಿದ್ದು, ಅನೇಕರು ರಕ್ಷಿತಾ ಶೆಟ್ಟಿ ಅಜ್ಜಿಯನ್ನು ಭೇಟಿ ಮಾಡಿದ್ದಕ್ಕೆ ಧನ್ಯವಾದ ಹೇಳಿದ್ದಾರೆ.

56
ಬಿಗ್ಬಾಸ್ ಮುಗಿದ ನಂತರವೂ ರಕ್ಷಿತಾ ಬಗ್ಗೆ ಕೇಳಿದ್ದ ಅಜ್ಜಿ

ಇನ್ನು ರಕ್ಷಿತಾ ನಿಮ್ಮನ್ನು ಭೇಟಿ ಮಾಡುವುದಕ್ಕೆ ಬರುತ್ತಿದ್ದಾಳೆ ಎಂದು ಅವರ ಮೊಮ್ಮಗಳು ಅಜ್ಜಿಗೆ ಹೇಳುತ್ತಿದ್ದಂತೆ ಅವರು ಖುಷಿಯಿಂದ ಬರಲಿ ಬರಲಿ ಎಂದು ಹೇಳುತ್ತಿರುವ ವೀಡಿಯೋ ಕೂಡ ವೈರಲ್ ಆಗಿದೆ. ಆಕೆ ಬರುತ್ತಾಳೆ ಎಂದು ಹೇಳಿದಾಗ ಅಜ್ಜಿ ಇಲ್ಲೇ ಸ್ಟೇ ಆಗ್ತಾಳಾ ಎಂದು ಮೊಮ್ಮಗಳ ಜೊತೆ ಖುಷಿಯಿಂದ ಕೇಳುತ್ತಾರೆ. ಅದಕ್ಕೆ ಮೊಮ್ಮಗಳು ಇಲ್ಲ ನಿನ್ನ ಮಾತನಾಡಿಸಿ ಹೋಗುವುದಕ್ಕೆ ಬರುತ್ತಿದ್ದಾಳೆ ಎಂದು ಅಜ್ಜಿಗೆ ಹೇಳಿದಾಗ ಅಜ್ಜಿ ಖುಸಿಯಿಂದ ಬರಲಿ ಬರಲಿ ಎಂದು ಹೇಳುತ್ತಾರೆ. ನಂತರ ಆಕೆ ಬರುತ್ತಾಳೆ ಎಂದು ಅಜ್ಜಿ ತಲೆಬಾಚಿ ರೆಡಿಯಾಗ್ತಿರುವ ವೀಡಿಯೋವನ್ನು ಕೂಡ ಅವರ ಮೊಮ್ಮಗಳು ಹಂಚಿಕೊಂಡಿದ್ದಾರೆ. ನಂತರ ರಕ್ಷಿತಾ ಅಜ್ಜಿಯನ್ನು ಭೇಟಿ ಮಾಡಿದ್ದು, ಅವರನ್ನು ತಬ್ಬಿಹಿಡಿದುಕೊಂಡು ಪ್ರೀತಿಯಿಂದ ಮಾತನಾಡಿಸುವ ವೀಡಿಯೋ ವೈರಲ್ ಆಗಿದೆ.

66
ಅಜ್ಜಿಯ ಭೇಟಿಯಾಗುವಂತೆ ಕೇಳಿದ್ದ ಅಭಿಮಾನಿಗಳು

ರಕ್ಷಿತಾ ಅವರು ನನ್ನ ನೋಡಿ ಖುಷಿ ಆಯ್ತಾ ನಾನೇ ಟಿವಿಯಲ್ಲಿ ಬಂದ ರಕ್ಷಿತಾ, ನಾನು ಇನ್ನು ಮೇಲೆ ಟಿವಿಯಲ್ಲಿ ಬರುವುದಿಲ್ಲ ಎಂದು ಬೇಜಾರಿದ್ಯಾ ಎಂದು ಅಜ್ಜಿ ಬಳಿ ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಅಜ್ಜಿ ಮೊನ್ನೆ ಬಂದಿದ್ಯಾಲ್ಲ ಎಂದು ಹೇಳಿದಾಗ, ರಕ್ಷಿತಾನೇ ತುಸು ಗೊಂದಲಕ್ಕೀಡಾಗಿ ಯಾವುದು ಎಂದು ಮೊಮ್ಮಗಳ ಬಳಿ ಕೇಳಿದಾಗ ಗಿಚ್ಚಿಗಿಲಿಗಿಲಿಯ ಪ್ರಮೋಷನ್ ಪ್ರೊಮೋದಲ್ಲಿ ನೋಡಿದ್ದಾಗಿ ವಿವರಿಸಿದ್ದಾರೆ ಅದಕ್ಕೆ ರಕ್ಷಿತಾ ಹೌದು ಎಂದಿದ್ದಾರೆ. ಒಟ್ಟಿನಲ್ಲಿ ರಕ್ಷಿತಾ ತಮ್ಮ ಹಿರಿಯ ಅಭಿಮಾನಿಯನ್ನು ಭೇಟಿ ಮಾಡಿದ್ದಕ್ಕೆ ಅವರ ಅಭಿಮಾನಿಗಳು ನೆಟ್ಟಿಗರು ಖುಷಿ ಆಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories