ಮಲೆನಾಡಿನ ಉಳಿವಿಗಾಗಿ ಗಿಡ ನೆಟ್ಟು ಮಾದರಿಯಾದ ನಟಿ ಶ್ವೇತಾ ಪ್ರಸಾದ್

First Published | Jul 25, 2024, 4:24 PM IST

ಜನರು ತಮ್ಮ ಸೌಕರ್ಯಕ್ಕಾಗಿ, ತಮ್ಮ ಸ್ವಾರ್ಥಕ್ಕಾಗಿ, ರಸ್ತೆ ಅಗಲೀಕರಣಕ್ಕಾಗಿ ಮರಗಿಡಗಳನ್ನು ಕಡೆದು, ನಾಶ ಮಾಡುತ್ತಿದ್ರೆ, ನಟಿ ಶ್ವೇತಾ ಪ್ರಸಾದ್ ತಮ್ಮ ಪ್ರಸಾದ್ ಫೌಂಡೇಶನ್ ಮೂಲಕ ಗಿಡ ನೆಡುವ ಅಭಿಯಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ. 
 

ಕರ್ನಾಟಕದಾದ್ಯಂತ ವಿಪರೀತ ಮಳೆಯಾಗುತ್ತಿದ್ದು, ಮಲೆನಾಡು ಪ್ರದೇಶಗಳಲ್ಲಂತೂ ಮರಗಳ ನಾಶದಿಂದಾಗಿ ಭೂಕುಸಿತಗಳು (earthquake) ತುಂಬಾನೆ ಹೆಚ್ಚಾಗಿವೆ. ಹಲವೆಡೆ ಗುಡ್ಡೆಗಳು ಕುಸಿದು ಬಿತ್ತು, ಅದೆಷ್ಟೋ ಜನ ಮಣ್ಣು ಪಾಲಾಗಿದ್ದಾರೆ. ನಿಜ ಹೇಳಬೇಕಂದ್ರೆ ಮಾನವನ ಅತಿಯಾದ ದುರಾಸೆಯಿಂದಾಗಿ ಇದೆಲ್ಲಾ ಆಗೋಕೆ ಕಾರಣ. 
 

ಮಲೆನಾಡಿನಲ್ಲಿ ಒಂದೆಡೆ ರಸ್ತೆ ಅಗಲೀಕರಣದ ಹೆಸರಿನಲ್ಲಿ ಮರಗಿಡಗಳ ನಾಶ ಆಗ್ತಿದ್ರೆ, ಮತ್ತೊಂದೆಡೆ ರಾಧಾ ರಮಣ ಖ್ಯಾತಿಯ ರಾಧಾ ಮಿಸ್ ಅಂದ್ರೆ ಶ್ವೇತಾ ಪ್ರಸಾದ್ (Shwetha Prasad) ತಮ್ಮ ಪ್ರಸಾದ್ ಫೌಂಡೇಶನ್ ಮೂಲಕ ಮಲೆನಾಡಿನಲ್ಲಿ ಗಿಡಗಳನ್ನ ನೆಡುವ ಮೂಲಕ ಪ್ರಕೃತಿಯ ಉಳಿವಿಗಾಗಿ ಸೇವೆ ಮಾಡುವ ಮೂಲಕ ಜನರಿಗೆ ಮಾದರಿಯಾಗಿದ್ದಾರೆ. 
 

Latest Videos


ಜುಲೈ 20, 2024 ರಂದು, ಪ್ರಸಾದ್ ಫೌಂಡೇಶನ್ (Prasad Foundation) ಶಿವಮೊಗ್ಗದ ಸುದೂರಿನಲ್ಲಿ  ಗಿಡ ನೆಡುವ ಅಭಿಯಾನವನ್ನು ಆಯೋಜಿಸಿದ್ದು, ಅದು ಯಶಸ್ವಿಯಾಗಿ ನಡೆದಿದೆ. ಈ ಕಾರ್ಯಕ್ರಮದ ಮೂಲಕ ಶ್ವೇತಾ ಪ್ರಸಾದ್ ಮತ್ತು ತಂಡ ಸುದೂರಿನಲ್ಲಿ ಸ್ಥಳೀಯ ಜಾತಿಗಳಾದ ಜಾಮೂನ್, ಹಲಸು ಮತ್ತು ಮಾವಿನ ಗಿಡಗಳನ್ನು ನೆಟ್ಟಿದೆ. ಈ ಪ್ರದೇಶವನ್ನು ಸಂರಕ್ಷಿಸುವ ಸಲುವಾಗಿ, ಅತ್ಯುತ್ತಮ ಗಿಡಗಳನ್ನ ಪ್ರಸಾದ್ ಫೌಂಡೇಶನ್ ನೆಟ್ಟಿದೆ. 
 

ಈ ಕುರಿತು ತಮ್ಮ ಪ್ರಸಾದ ಫೌಂಡೇಶನ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಶ್ವೇತಾ ಪ್ರಸಾದ್ ಈ ಪ್ರಕ್ರಿಯೆಯುದ್ದಕ್ಕೂ ನಮಗೆ ಮಾರ್ಗದರ್ಶನ ನೀಡಿದ ನನ್ನ ಸ್ನೇಹಿತ, RFO ರಾಜೇಂದ್ರ ಪ್ರಸಾದ್ ಅವರಿಗೆ ಧನ್ಯವಾದ ಹೇಳ್ತೀನಿ, ಜೊತೆಗೆ. ಎಲ್ಲಾ ವ್ಯವಸ್ಥೆಗಳ ಉಸ್ತುವಾರಿ ವಹಿಸಿದ್ದ ಕೌಶಿಕ್ ಜೋಯಿಸ್ ಅವರಿಗೂ ಥ್ಯಾಂಕ್ಸ್ ಹೇಳಿದ್ದಾರೆ. 
 

ಅಷ್ಟೇ ಅಲ್ಲದೇ ಸಂತೋಷದಿಂದ ಸಸಿಗಳನ್ನು ನೆಟ್ಟ ಎಲ್ಲಾ ಸ್ವಯಂಸೇವಕರಿಗೆ ವಿಶೇಷ ಧನ್ಯವಾದಗಳು. ಅವರ ಸಮರ್ಪಣೆ ಮತ್ತು ಕಠಿಣ ಪರಿಶ್ರಮದಿಂದಾಗಿ ಈ ಕಾರ್ಯಕ್ರಮ ಯಶಸ್ವಿಗೊಂಡಿತು. 10 ಗಿಡಗಳನ್ನ ನೀಡಿದ ದಿಲೀಪ್ ಅವರಿಗೆ ಧನ್ಯವಾದಗಳು. ಏನೂ ಕೇಳದೆಯೇ ನಾನು ಮಾಡುವ ಎಲ್ಲಾ ಕೆಲಸದಲ್ಲೂ ಕೊಡುಗೆ ನೀಡುವ ಅವರ ಪ್ರೀತಿಗೆ ಚಿರಋಣಿ ಎಂದು ಶ್ವೇತಾ ಬರೆದುಕೊಂಡಿದ್ದಾರೆ. 
 

ಇನ್ನು ಈ ಗಿಡ ನೆಡುವ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ಕೌಶಿಕ್ ಜೋಯಿಸ್ ಅವರು ಸದಾ ಸಮೃದ್ಧವಾಗಿದ್ದ ನಮ್ಮ ಮಲೆನಾಡು, ಉತ್ತರ ಕನ್ನಡದ ಭಾಗಗಳು ಇನ್ನಷ್ಟು ಹಾಳಾಗದಂತೆ ಕಾಪಾಡುವುದು ನಮ್ಮೆಲ್ಲರ ಕೈಯಲ್ಲಿದೆ. ದುರಾಸೆ ಸಾಕು, ನಿಮ್ಮವರಿಗಾಗಿ ಬದುಕಿ, ಪ್ರಕೃತಿ ಉಳಿಸಿ ಎಂದು ಕೇಳಿಕೊಂಡಿದ್ದಾರೆ. 
 

ಅಲ್ಲದೇ ಮಳೆ ಚುರುಕಾದಾಗ ನಮ್ಮದೊಂದು ಚಿಕ್ಕ ಪ್ರಯತ್ನ. ಶ್ವೇತಾ ಪ್ರಸಾದ್ ಅವರ ಮುಂದಾಳತ್ವದಲ್ಲಿ ಅರಣ್ಯಧಿಕಾರಿಗಳ ಸಹಯೋಗದೊಂದಿಗೆ, ನಮ್ಮ ನಿಮ್ಮಂತಹ ಹಲವು ಸ್ವಯಂಸೇವಕರೊಂದಿಗೆ ಪುಟ್ಟ ಪುಟ್ಟ ಗಿಡಗಳನ್ನು ಭೂಮಿ ತಾಯಿಯ ಮಡಿಲಿಗೆ ಒಪ್ಪಿಸಿ, ಎಲ್ಲರ ಪರವಾಗಿ ಈ ನೆಲವನ್ನು ಉಳಿಸುವ ಪುಟ್ಟ ಪ್ರಯತ್ನ ನಮ್ಮಿಂದ, ಮುಂದೆ ನೀವೆಲ್ಲರೂ ಬನ್ನಿ, ಈ ಪ್ರಯತ್ನ ನಿರಂತರ ವಾಗಿರಲಿ ಎಂದು ಹೇಳಿದ್ದಾರೆ. 
 

click me!