ಸೀರೆಯುಟ್ಟ ಫೋಟೋಸ್ ಶೇರ್ ಮಾಡಿ 'ಅಂದದ ಬೊಂಬೆಗೆ ಚಂದದ ಶೃಂಗಾರ' ಎಂದ ಸೋನು ಗೌಡ!

Published : Jul 22, 2024, 09:57 PM ISTUpdated : Jul 23, 2024, 10:21 AM IST

ಟಿಕ್ ಟಾಕ್ ಮೂಲಕ ಸದ್ದು ಮಾಡಿ ಬಳಿಕ ಇನ್‌ಸ್ಟಾಗ್ರಾಮ್ ರೀಲ್ಸ್ ಮೂಲಕ ಎಲ್ಲರಿಗೂ ಪರಿಚಯವಾದವರು ಸೋನು ಶ್ರೀನಿವಾಸ್ ಗೌಡ. ನಂತರ ಬಿಗ್ ಬಾಸ್ ಒಟಿಟಿ ಮೂಲಕ ಮತ್ತಷ್ಟು ಜನರಿಗೆ ಹತ್ತಿರವಾಗಿದ್ದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಸ್ ಶೇರ್ ಮಾಡಿಕೊಂಡಿದ್ದಾರೆ.

PREV
17
ಸೀರೆಯುಟ್ಟ ಫೋಟೋಸ್ ಶೇರ್ ಮಾಡಿ 'ಅಂದದ ಬೊಂಬೆಗೆ ಚಂದದ ಶೃಂಗಾರ' ಎಂದ ಸೋನು ಗೌಡ!

ಕನ್ನಡ ಬಿಗ್‌ಬಾಸ್ ಒಟಿಟಿ​ ಸ್ಪರ್ಧಿಯಾಗಿದ್ದ ಸೋನು ಗೌಡ ಸೋಶಿಯಲ್​ ಮೀಡಿಯಾದಲ್ಲಿ ಸದಾ ಸಖತ್ ಆ್ಯಕ್ಟಿವ್ ಆಗಿರುತ್ತಾರೆ. ಆಗಾಗ ಫೋಟೋಸ್ ವಿಡಿಯೋಗಳನ್ನು ಶೇರ್ ಮಾಡಿಕೊಳ್ತಾರೆ. ಅವರ ಫೊಟೋಸ್ ವೈರಲ್ ಆಗುತ್ತವೆ.

27

ಸೋನು ಗೌಡ ಇನ್‌ಸ್ಟಾಗ್ರಾಮ್‌ನಲ್ಲಿ ಆಗಾಗ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ವೆಕೇಷನ್, ಟ್ರಿಪ್ ಸೇರಿದಂತೆ ಹಲವಾರು ಕಂಟೆಂಟ್​ಗಳನ್ನು ಸೋನು ಶೇರ್ ಮಾಡುತ್ತಲೇ ಇರುತ್ತಾರೆ. ಇದೀಗ ಸೀರೆಯುಟ್ಟ ಹೊಸ ಫೋಟೋಸ್‌ಗಳನ್ನು ಹಂಚಿಕೊಂಡಿದ್ದಾರೆ.

37

ಪಿಂಕ್ ಕಲರ್ ಸೀರೆಯಲ್ಲಿ ಸೋನು ಗೌಡ ಮಿಂಚಿದ್ದು, ವಿವಿಧ ಭಂಗಿಗಳಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಜೊತೆಗೆ ಅದಕ್ಕೆ ಮ್ಯಾಚ್ ಆಗುವ ಹಾಗೆ ಕಿವಿಯೋಲೆ, ಬಳೆಗಳನ್ನು ತೊಟ್ಟಿದ್ದಾರೆ. ಅವರ ಸರಳವಾದ ಮೇಕಪ್, ಫ್ರೀ ಬಿಟ್ಟ ಹೇರ್‌ಸ್ಟೈಲ್ ಸಖತ್ ಹೈಲೈಟ್ ಆಗಿತ್ತು. 

47

ಸೋನು ಗೌಡ ಶೇರ್ ಮಾಡಿಕೊಂಡ ಫೋಟೋಸ್‌ಗೆ ರವಿಚಂದ್ರನ್ ಅಭಿನಯದ ನೀಲಕಂಠ ಚಿತ್ರದ 'ಅಂದದ ಬೊಂಬೆಗೆ ಚಂದದ ಶೃಂಗಾರ' ಎಂಬ ಹಾಡಿನ ಕ್ಯಾಪ್ಷನ್ ಸಹ ಕೊಟ್ಟಿದ್ದಾರೆ. ಇದು ಸಹ ಅವರ ಫೋಸ್ಟ್‌ ಅನ್ನು ಗಮನ ಸೆಳೆಯುವಂತೆ ಮಾಡಿದೆ.
 

57

ನೆಟ್ಟಿಗರು ಸೋನು ಫೋಟೋಸ್ ನೋಡಿ ಲೈಕ್ಸ್ ಕೊಟ್ಟು, ಸೋನು ನೀನು ಸೀರೇಲಿ ಅದ್ಬುತ, ಬ್ಯೂಟಿಫುಲ್‌, ಎಂತ ಚಂದ ಕಾಣ್ತಿ ಮಾರಾಯ್ತಿ, ಬ್ಯೂಟಿ ಕ್ವೀನ್, ಹಣೆಗೆ ಕುಂಕುಮ ಇಟ್ಟಿದ್ರೆ ಇನ್ನು ಸೂಪರ್ ಎಂದು ತರೇಹವಾರಿ ಕಮೆಂಟ್ ಮಾಡುತ್ತಿದ್ದಾರೆ.

67

ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಸೋನು ಗೌಡ ಅವರು 1 ಮಿಲಿಯನ್ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ಇತ್ತೀಚೆಗೆ ಮಗುವೊಂದನ್ನು ದತ್ತು ಪಡೆದು ಕೇಸ್ ಹಾಕಿಸಿಕೊಂಡು ಪರಪ್ಪನ ಅಗ್ರಹಾರ ಜೈಲಿಗೂ ಹೋಗಿ ಬಂದಿದ್ದಾರೆ.

77

ಇನ್ನು ದರ್ಶನ್ ಪರವಾಗಿ ನಾನು ಮಾತನಾಡಿಲ್ಲ ಎಂದು ಕೆಟ್ಟ, ಕೆಟ್ಟದಾಗಿ ದರ್ಶನ್‌ ಫ್ಯಾನ್ಸ್‌ ಕಮೆಂಟ್ಸ್ ಮಾಡುತ್ತಿದ್ದಾರೆ ಎಂದು ಸೋನು ಗೌಡ ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು ಬೇಸರವನ್ನು ಹೊರಹಾಕಿದ್ದರು.
 

Read more Photos on
click me!

Recommended Stories