ಪವರ್‌ ಸ್ಟಾರ್‌ ಪುನೀತ್ ರಾಜಕುಮಾರ್ ಮರಳಿ ಕರೆತಂದ ಟೈಮ್ ಮಷಿನ್; ಇದು ನಿಜವಾಗ್ಲಿ ಅಂತಿದ್ದಾರೆ ಫ್ಯಾನ್ಸ್!

Published : Jul 25, 2024, 04:07 PM IST

ಝೀಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ನಲ್ಲಿ ಅಭಿಮಾನಿಗಳ ಆರಾಧ್ಯದೈವ ಪುನೀತ್ ರಾಜ್ ಕುಮಾರ್ ಅವರನ್ನು ಟೈಮ್ ಮಷಿನ್ ಮೂಲಕ ಮರಳಿ ಕರೆತಂದಿದ್ದು, ಈ ಸೀನ್ ನೋಡಿ ತೀರ್ಪುಗಾರರು, ಕಂಟೆಸ್ಟಂಟ್ ಗಳು ಸೇರಿ ಎಲ್ಲರೂ ಕಣ್ಣೀರಿಟ್ಟಿದ್ದಾರೆ.   

PREV
17
ಪವರ್‌ ಸ್ಟಾರ್‌ ಪುನೀತ್ ರಾಜಕುಮಾರ್ ಮರಳಿ ಕರೆತಂದ ಟೈಮ್ ಮಷಿನ್; ಇದು ನಿಜವಾಗ್ಲಿ ಅಂತಿದ್ದಾರೆ ಫ್ಯಾನ್ಸ್!

ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar) ನಮ್ಮನ್ನ ಅಗಲಿ ವರ್ಷಗಳೇ ಕಳೆದರೂ ಸಹ ಅವರ ನೆನಪು ಮಾತ್ರ ಯಾವತ್ತಿಗೂ ಅಜರಾಮರ. ಪುನೀತ್ ರಾಜ್ ಕುಮಾರ್ ಹಾಡುಗಳು, ಸಿನಿಮಾಗಳು, ಅವರ ಮಾತು, ಅವರು ಮಾಡಿರುವಂತಹ ಸಮಾಜ ಸೇವೆ ಎಲ್ಲವೂ ಜನರು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಲೇ ಇರ್ತಾರೆ. 
 

27

ಇದೀಗ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ನಲ್ಲಿ (Comedy Khiladigalu Premeir League) ಅಭಿಮಾನಿಗಳ ಆರಾಧ್ಯದೈವ ಪುನೀತ್ ರಾಜ್ ಕುಮಾರ್ ಅವರನ್ನು ಟೈಮ್ ಮಷಿನ್ ಮೂಲಕ ಮರಳಿ ಕರೆತಂದಿದ್ದು, ಪುನೀತ್ ರಾಜ್ ಕುಮಾರ್ ರನ್ನ ಹೋಲುವ ವ್ಯಕ್ತಿಯೊಬ್ಬನ ಆಗಮವಾಗಿದ್ದು, ಈ ಸೀನ್ ನೋಡಿ ತೀರ್ಪುಗಾರರು, ಕಂಟೆಸ್ಟಂಟ್ ಗಳು ಸೇರಿ ಎಲ್ಲರೂ ಕಣ್ಣೀರಿಟ್ಟಿದ್ದಾರೆ. 
 

37

ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ನ ಪ್ರೋಮೋ ರಿಲೀಸ್ ಆಗಿದ್ದು, ಇದರಲ್ಲಿ ಜಗ್ಗಪ್ಪ ಮತ್ತು ತಂಡ ಟೈಮ್ ಮಷೀನ್ ಕುರಿತು ಸ್ಕಿಟ್ ಮಾಡಿ ನಗಿಸಿದ್ದಾರೆ. ಈ ಸಂದರ್ಭದಲ್ಲಿ ಜಗ್ಗಪ್ಪ ಟೈಮ್ ಮಷೀನ್ (Time machine)  ಗೆ 2021ಕ್ಕೆ ಟ್ರಾವೆಲ್ ಮಾಡುವಂತೆ ಹೇಳಿದ್ದಾನೆ, ಆವಾಗ ಪುನೀತ್ ರಾಜ್ ಕುಮಾರ್ ಅವರನ್ನ ಹೋಲುವ ವ್ಯಕ್ತಿಯ ಆಗಮನವಾಗಿದೆ. ಇದನ್ನ ಎಲ್ಲರೂ ಅಚ್ಚರಿಯಿಂದ ಬಿಟ್ಟ ಕಣ್ಣು ಬಿಟ್ಟಂತೆ ನೋಡಿದರೆ, ಪುನೀತ್ ಹೋಲಿಕೆಯ ವ್ಯಕ್ತಿಯನ್ನು ನೋಡುತ್ತಿದ್ದಂತೆ ನಿರೂಪಕಿ ಅನುಶ್ರೀ ಕಣ್ಣಾಲಿಗಳು ತುಂಬಿ ಬಂದಿವೆ. 
 

47

ಸ್ಟೇಜ್ ಮೇಲೆ ಪುನೀತ್ ರಾಜ್ ಕುಮಾರ್ ಅವರಂತೆ ಸೂಟ್ ಬೂಟ್ ಧರಿಸಿದ ವ್ಯಕ್ತಿಯ ಆಗಮನ ಆಗುತ್ತಿದ್ದಂತೆ, ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯ ಹೇಳಿದೆ ಎಂದು ಪುನೀತ್ ಅವರೇ ಹಾಡಿರುವ ಹಾಡು ಬ್ಯಾಕ್ ಗ್ರೌಂಡ್ ನಲ್ಲಿ ಪ್ಲೇ ಆಗಿದೆ. ಇದನ್ನ ನೋಡುತ್ತಿದ್ದಂತೆ, ನಿರ್ದೇಶಕ ತರುಣ್ ಸುದೀರ್ ಎದ್ದು ನಿಂತರೆ, ಕುರಿ ಪ್ರತಾಪ್ ತಮ್ಮ ಕನ್ನಡಕ ತೆಗೆದು ನಿಜವಾಗಿಯೂ ತಾನು ಏನ್ ನೋಡ್ತಿದ್ದಿನಿ ಎನ್ನುವಂತೆ ಶಾಕ್ ಆಗಿರೋವಂತೆ ನೋಡಿದ್ದಾರೆ. 
 

57

ಇನ್ನು ಜಗ್ಗಪ್ಪ ಸರ್ ನಾನು ನಿಮ್ಮ ಅಭಿಮಾನಿ, ನಿಮ್ಮ ಎಲ್ಲಾ ಸಿನಿಮಾ ನೋಡಿದಿನಿ, ನಿಮ್ಮ ಜೊತೆ ಫೋಟೋನೆ ಇಲ್ಲ, ಒಂದು ಫೋಟೋ ತೆಗಿಲಾ ಎಂದು ಕೇಳಿದ್ದಕ್ಕೆ, ಆ ವ್ಯಕ್ತಿ ಥೇಟ್ ಪುನೀತ್ ರಾಜ್ ಕುಮಾರ್ ಅವರ ಧ್ವನಿಯಲ್ಲಿಯೇ ಜಗ್ಗು ಅವರೇ ಮೊದಲು ಅಳೋದು ನಿಲ್ಲಿಸ್ತೀರಾ ಎಂದು ಹೇಳುತ್ತಿದ್ದಂತೆ, ಅನುಶ್ರೀ ಜೋರಾಗಿ ಅತ್ತರೆ, ನಯನಾ ಕೂಡ ಕಣ್ಣೀರಿಟ್ಟಿದ್ದಾರೆ, ಪುನೀತ್ ವಾಯ್ಸ್ ಕೇಳಿ ಶ್ವೇತಾ ಚೆಂಗಪ್ಪ ರೋಮಾಂಚನಗೊಂಡಿದ್ದಾರೆ. 
 

67

ನಂತರ ಪುನೀತ್ ರಾಜಕುಮಾರ್ ಡೂಪ್ ಅಣ್ಣಾಬಾಂಡ್ ಹಾಡಿಗೆ ಹೆಜ್ಜೆ ಹಾಕಿ ಎಲ್ಲರನ್ನೂ ರಂಜಿಸಿದ್ದಾರೆ. ಇದಾದ ಬಳಿಕ ನಿರೂಪಕಿ ಅನುಶ್ರೀ ಕಣ್ಣಿರಿಡುತ್ತಲೇ ಮಾತನಾಡಿ, ಪ್ರತಿಯೊಬ್ಬರು ಇಲ್ಲಿ ಹುಟ್ಟೋದೆ ದೇವರಾಗೋಕೆ, ಆದರೆ ಎಲ್ಲರೂ ದೇವರಾಗಲ್ಲ. ಒಬ್ಬ ಪುನೀತ್‌ ರಾಜ್‌ಕುಮಾರ್‌ ಮಾತ್ರ ದೇವರಾಗ್ತಾರೆ ಎಂದು ಹೇಳಿದ್ದಾರೆ. 
 

77

ಇನ್ನು ಈ ಪ್ರೋಮೋ ಪ್ರಸಾರವಾಗುತ್ತಿದ್ದಂತೆ, ಅಭಿಮಾನಿಗಳು ಸಹ ಕಣ್ಣಿರಿಟ್ಟಿದ್ದಾರೆ. ಮರೆಯಾದರು ಮರೆಯಲಾಗದ ಮಿನುಗುವ ಮಾಣಿಕ್ಯ, ದೇವರೆ ಇದು ಒಂದು ಬಾರಿ ನಿಜ ಆಗಿ ಬಿಡಲಿ ದೇವರೆ ಎಂದು ಸಹ ಕೇಳಿಕೊಂಡಿದ್ದಾರೆ ಫ್ಯಾನ್ಸ್. ಅಷ್ಟೇ ಅಲ್ಲ ಜೊತೆಗಿರದ ಜೀವ ಎಂದಿಗೂ ಜೀವಂತ, ಪರಮಾತ್ಮ ಮತ್ತೆ ಧರೆಗಿಳಿದ ಪುನೀತ ಅನುಭವ, ಅಪ್ಪು ಕೇವಲ ಹೆಸರಲ್ಲ, ನಿನ್ನ ನೆನೆಯದ ಕ್ಷಣವಿಲ್ಲ, ಅಷ್ಟೇ ಏಕೆ ನಿನ್ನ ನೆನೆಯದವರೂ ಇಲ್ಲ, ನಗುವಿನ ಒಡೆಯ ನಿನ್ನ ನೆನೆಯದೆ ದಿನವೂ ಸಾಗುವುದಿಲ್ಲ ಎಂದು ಜನ ಕಾಮೆಂಟ್ ಮಾಡಿದ್ದಾರೆ. 
 

Read more Photos on
click me!

Recommended Stories