ಅತಿ ಶೀಘ್ರದಲ್ಲಿ‌ ಮುಕ್ತಾಯ ಕಾಣಲಿದೆ ಭರ್ಜರಿ‌ ಮನರಂಜನೆ ಕೊಡುತ್ತಿರುವ ಕಲರ್ಸ್ ಕನ್ನಡದ ಎರಡು ರಿಯಾಲಿಟಿ ಶೋಗಳು‌‌

Published : Aug 28, 2024, 04:01 PM IST

ಕಲರ್ಸ್ ಕನ್ನಡದಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ವೀಕ್ಷಕರಿಗೆ ಸಖತ್ ಮನೋರಂಜನೆ ನೀಡುತ್ತಿದ್ದ ಎರಡು ಜನಪ್ರಿಯ ರಿಯಾಲಿಟಿ ಶೋಗಳು ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದೆ.   

PREV
17
ಅತಿ ಶೀಘ್ರದಲ್ಲಿ‌ ಮುಕ್ತಾಯ ಕಾಣಲಿದೆ ಭರ್ಜರಿ‌ ಮನರಂಜನೆ ಕೊಡುತ್ತಿರುವ ಕಲರ್ಸ್ ಕನ್ನಡದ ಎರಡು ರಿಯಾಲಿಟಿ ಶೋಗಳು‌‌

ಕಲರ್ಸ್ ಕನ್ನಡಲ್ಲಿ (Colors Kannada) ಪ್ರಸಾರವಾಗುತ್ತಿರುವ ವೀಕ್ಷಕರಿಗೆ ಭರ್ಜರಿ ಮನರಂಜನೆಯ ರಸದೌತಣ ನೀಡಿರುವ ರಾಜಾ ರಾಣಿ ರೀಲೋಡೆಡ್ ಮತ್ತು ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮಗಳು ಮುಕ್ತಾಯದ ಹಂತವನ್ನು ಬಂದು ತಲುಪಿದೆ. 
 

27

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿಗಳ ಪ್ರಕಾರ ಈ ಎರಡು ಜನಪ್ರಿಯ ಶೋಗಳ ಗ್ರಾಂಡ್ ಫಿನಾಲೆ ಕಾರ್ಯಕ್ರಮ ಅತೀ ಶೀಘ್ರದಲ್ಲೇ ಪ್ರಸಾರವಾಗಲಿದೆ. ಆದರೆ ಯಾವಾಗ ಅನ್ನುವ ಮಾಹಿತಿ ಮಾತ್ರ ಸಿಕ್ಕಿಲ್ಲ. 

37

ರಾಜಾ ರಾಣಿ ರಿಲೋಡೆಡ್ (Raja Rani Reloaded) ಕಪಲ್ಸ್ ಶೋ ಆಗಿದ್ದು, ಈ ಕಾರ್ಯಕ್ರಮದಲ್ಲಿ ರಾಜ್ಯದ ಸೆಲೆಬ್ರಿಟಿ ಜೋಡಿಗಳು ಹಾಗೂ ಸೋಶಿಯಲ್ ಮೀಡೀಯಾದಲ್ಲಿ ಜನಪ್ರಿಯತೆ ಪಡೆದ ಜೋಡಿಗಳ ಪ್ರೀತಿ, ಅನ್ಯೋನ್ಯತೆ, ಅಂಡರ್’ಸ್ಟಾಡಿಂಗ್ ಬಗ್ಗೆ ತಿಳಿದುಕೊಂಡು, ಯಾರು ಬೆಸ್ಟ್ ಜೋಡಿಯಾಗಲಿದ್ದಾರೆ ಎಂದು ತಿಳಿದುಕೊಳ್ಳುವಂತಹ ಶೋ ಆಗಿದೆ. 
 

47

ರಾಜಾ ರಾಣಿ ರಿಲೋಡೆಡ್ ಕಾರ್ಯಕ್ರಮದಲ್ಲಿ ನಟಿ ತಾರಾ, ಸೃಜನ್ ಲೋಕೇಶ್ (Sruja Lokesh) ಮತ್ತು ಅದಿತಿ ಪ್ರಭುದೇವ ತೀರ್ಪುಗಾರರಾಗಿದ್ದು, ಅನುಪಮಾ ಗೌಡ ನಿರೂಪಣೆ ಮಾಡ್ತಿದ್ದಾರೆ. ಈ ಕಾರ್ಯಕ್ರಮ ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿತ್ತು. 
 

57

ಇನ್ನು ಗಿಚ್ಚಿ ಗಿಲಿಗಿಲಿ ಸೀಸನ್ 3 (Gicchi Giligili Season 3) ಕೂಡ ವೀಕ್ಷಕರನ್ನು ನಕ್ಕು ನಗಿಸುವಂತೆ ಮಾಡಿತ್ತು. ಈ ಬಾರಿಯ ಗಿಚ್ಚಿ ಗಿಲಿಗಿಲಿ ವಿಶೇಷತೆ ಅಂದ್ರೆ, ಕಾಮಿಡಿಯನ್ಸ್ ಮತ್ತು ಹಾಸ್ಯಗಾರರು ಅಲ್ಲದೇ ಇರುವವರು ಜೋಡಿಯಾಗಿ ಮನರಂಜನೆ ನೀಡುವುದಾಗಿದ್ದು, ಇಲ್ಲಿವರೆಗೆ ಈ ಕಾರ್ಯಕ್ರಮ ಜನರಿಗೆ ರಸದೌತಣ ನೀಡಿದೆ ಎಂದರೆ ತಪ್ಪಾಗಲ್ಲ. 

67

ಇನ್ನು ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಆಗಿದ್ದವರು, ಡ್ರೋನ್ ಪ್ರತಾಪ್, (Drone Prathap) ಇಶಾನಿ, ರೀಲ್ಸ್ ರೇಷ್ಮಾ ಆಂಟಿ, ಜೊತೆಗೆ ಹಳೆಯ ಕಾಮಿಡಿಯನ್ಸ್. ಇನ್ನು ಕಾರ್ಯಕ್ರಮದ ತೀರ್ಪುಗಾರರಾಗಿ ನಟಿ ಶ್ರುತಿ, ಸಾಧುಕೋಕಿಲ, ಮತ್ತು ಕೋಮಲ್ ಕುಮಾರ್ ಭಾಗವಹಿಸಿದ್ದರು. ನಿರಂಜನ್ ದೇಶಪಾಂಡೆ ಕಾರ್ಯಕ್ರಮ ನಿರೂಪಣೆ ಮೂಲಕ ಮೋಡಿ ಮಾಡಿದ್ರು. 
 

77

ಇಲ್ಲಿವರೆಗೆ ಅದ್ಭುತ ಮನೋರಂಜನೆ ನೀಡು ವೀಕ್ಷಕರನ್ನು ಹೊಟ್ಟೆ ಹುಟ್ಟಾಗಿಸುವಂತೆ ನಗಿಸಿದ ಗಿಚ್ಚಿ ಗಿಲಿಗಿಲಿ ಹಾಗೂ ಜೋಡಿಗಳ ನೃತ್ಯ, ಟಾಸ್ಕ್ ಗಳ ಮೂಲಕ ರಂಜಿಸಿದ ರಾಜಾ ರಾಣಿ ಮುಕ್ತಾಯ ಹಂತ ತಲುಪಿದ್ದು, ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದು, ಅದ್ಭುತ ಕಾರ್ಯಕ್ರಮವನ್ನು ಮಿಸ್ ಮಾಡ್ಕೊಳ್ಳುತ್ತಿರೋದಾಗಿ ಹೇಳಿದ್ದಾರೆ. 
 

click me!

Recommended Stories