ನಟನೆಯಿಂದ ದೂರ… ಆಧ್ಯಾತ್ಮಿಕತೆಯತ್ತ… ಕಾಮಾಕ್ಯ ದೇವಿ ದರ್ಶನ ಪಡೆದ ನಟಿ ಶ್ವೇತಾ ಪ್ರಸಾದ್

Published : Sep 01, 2026, 12:46 PM IST

Shweta Prasad: ಕನ್ನಡ ಕಿರುತೆರೆ ಮತ್ತು ಹಿರಿತೆರೆ ನಟಿ, ಉದ್ಯಮಿ ಹಾಗೂ ಮಾಡೆಲ್ ಆಗಿರುವ ಶ್ವೇತಾ ಆರ್ ಪ್ರಸಾದ್ ಅವರು ಸದ್ಯ ನಟನೆಯಿಂದ ದೂರ ಉಳಿದಿದ್ದಾರೆ. ಆದರೆ ಆಧ್ಯಾತ್ಮಿಕತೆಯತ್ತ ವಾಲುತ್ತಿದ್ದಾರೆ. ಇದೀಗ ಮಾ ಕಾಮಾಕ್ಯ ದೇವಿ ದರ್ಶನ ಪಡೆದು ಬಂದಿದ್ದಾರೆ ನಟಿ.

PREV
16
ನಟಿ ಶ್ವೇತಾ ಪ್ರಸಾದ್

ಕನ್ನಡ ಕಿರುತೆರೆಯಲ್ಲಿ ತಮ್ಮ ನೈಜ್ಯ ಅಭಿನಯದಿಂದ ಗುರುತಿಸಿಕೊಂಡ ನಟಿ ಶ್ವೇತಾ ಪ್ರಸಾದ್. ಜನರು ಇನ್ನೂ ಕೂಡ ಅವರನ್ನು ರಾಧಾ ಮಿಸ್ ಎಂದೇ ಕರೆಯುತ್ತಾರೆ ಅಂದ್ರೆ, ‘ರಾಧಾರಮಣ’ ಧಾರಾವಾಹಿಯ ಆ ಪಾತ್ರದ ತೂಕ ಅಂತದ್ದು. ಆದರೆ ನಟಿ ಸದ್ಯ ನಟನೆಯಿಂದ ದೂರವಿದ್ದು, ಆಧ್ಯಾತ್ಮಿಕತೆಯತ್ತ ತಮ್ಮನ್ನು ತೊಡಗಿಸಿಕೊಂಡಿರುವಂತಿದೆ.

26
ಕಾಮಾಕ್ಯ ಮಂದಿರದಲ್ಲಿ ಶ್ವೇತಾ

ನಟಿ ಶ್ವೇತಾ ಪ್ರಸಾದ್ ಅವರು ದೇಶದ ಪ್ರಸಿದ್ಧ ಶಕ್ತಿ ಪೀಠಗಳಲ್ಲಿ ಒಂದಾದ ಅಸ್ಸಾಂನ ಗುವಾಹಟಿಯಲ್ಲಿರುವ ಮಾ ಕಾಮಾಕ್ಯ ದೇವಿ ದರ್ಶನ ಪಡೆದು ಬಂದಿದ್ದು, ಅಲ್ಲಿನ ಸುಂದರವಾದ ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ತಮ್ಮ ಆಧ್ಯಾತ್ಮಿಕ ಪಯಣದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

36
ಕೆಂಪು ಸೀರೆಯಲ್ಲಿ ಡಿವೈನ್ ಎನರ್ಜಿ

ನಟಿ ಕೆಂಪು ಬಣ್ಣದ ಸೀರೆಯನ್ನು ಕುತ್ತಿಗೆಯಲ್ಲಿ ದೈವೀಕ ಮಾಲೆಯನ್ನು ಧರಿಸಿರುವ ನಟಿಯಲ್ಲಿ ಡಿವೈನ್ ಎನರ್ಜಿ ಎದ್ದು ಕಾಣುವಂತಿದೆ. ನಟಿ ತಮ್ಮ ಫೋಟೋಗಳ ಜೊತೆಗೆ ‘No force stands a chance against divine protection’ ಅಂದರೆ ‘ದೈವಿಕ ರಕ್ಷಣೆಯ ವಿರುದ್ಧ ಯಾವುದೇ ಶಕ್ತಿಗೆ ಅವಕಾಶವಿಲ್ಲ’. ಎನ್ನುವಂತಹ ಕ್ಯಾಪ್ಶನ್ ಹಾಕಿದ್ದಾರೆ.

46
ವೈರಲ್ ಆಗಿದ್ದ ಶ್ವೇತಾ ಪೋಸ್ಟ್

ಇತ್ತೀಚೆಗೆ ಶ್ವೇತಾ ಪ್ರಸಾದ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ “ಸತ್ಯದ ಪರವಾಗಿ ಮಾತನಾಡುವವರು ನಿಜವಾಗಿಯೂ ಅದರ ಪರ ನಿಂತಿದ್ದರೆ, ನ್ಯಾಯದ ಬಗ್ಗೆ ಧ್ವನಿ ಎತ್ತುವವರು ಅದಕ್ಕಾಗಿ ಹೋರಾಡಿದ್ದರೆ ಹಾಗೂ ಮಹಿಳೆಯರ ಸುರಕ್ಷತೆ ಬಗ್ಗೆ ಮಾತನಾಡುವವರು ನಿಜಕ್ಕೂ ಅವರ ಬೆಂಬಲಕ್ಕೆ ನಿಂತಿದ್ದರೆ, ಸಮಾಜ ಇಷ್ಟು ಸಮಸ್ಯೆಗಳಿಂದ ಕೂಡಿರುತ್ತಿರಲಿಲ್ಲ” ಎನ್ನುವ ಪೋಸ್ಟ್ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.

56
ಮಾಡೆಲಿಂಗ್ ನಲ್ಲಿ ಗುರುತಿಸಿಕೊಂಡಿದ್ದ ನಟಿ

ಶ್ವೇತಾ ಪ್ರಸಾದ್ ಇತ್ತೀಚಿನ ದಿನಗಳಲ್ಲಿ ನಟನೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ತುಂಬಾನೆ ಕಡಿಮೆಯಾದರೂ, ಮಾಡೆಲಿಂಗ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಲವಾರು ಫ್ಯಾಷನ್ ಬ್ರ್ಯಾಂಡ್ ಗಳಿಗೆ ನಟಿ ರ್ಯಾಂಪ್ ವಾಕ್ ಮಾಡಿದ್ದರು. ನಟಿಯಾಗಿ ಯಾವಾಗ ಕಾಣಿಸಿಕೊಳ್ಳುತ್ತಾರೆ ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

66
ಸಿನಿಮಾಗಳಲ್ಲೂ ಮಿಂಚಿದ ಶ್ವೇತಾ

ನಟಿ ಶ್ವೇತಾ ಪ್ರಸಾದ್ ಕನ್ನಡ ಸೀರಿಯಲ್ ಗಳಲ್ಲಿ ಮಾತ್ರವಲ್ಲ, ಸಿನಿಮಾಗಳಲ್ಲೂ ನಟಿಸಿದ್ದಾರೆ. ಪದವಿ ಪೂರ್ವ, ಕಾಟೇರಾ, ಬಂದೂಕ್, ಸಿನಿಮಾಗಳಲ್ಲಿ ಶ್ವೇತಾ ಪ್ರಸಾದ್ ನಟಿಸಿದ್ದು, ಇನ್ನು ಡಾರ್ಲಿಂಗ್ ಕೃಷ್ಣ ಅಭಿನಯದ ಲವ್ ಮಾಕ್ಟೇಲ್ 3 ಸಿನಿಮಾದಲ್ಲೂ ಶ್ವೇತಾ ಬಣ್ಣ ಹಚ್ಚಿದ್ದು. ಶೀಘ್ರದಲ್ಲಿ ಧಾರಾವಾಹಿಯೊಂದರಲ್ಲಿ ನಟಿಸಲಿದ್ದಾರೆ ಎನ್ನುವ ಮಾಹಿತಿ ಇದೆ. ಆದರೆ ಅದೆಷ್ಟು ನಿಜಾ ಎನ್ನುವ ಕುರಿತು ಮಾಹಿತಿ ಇಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories