ಅಮೃತಧಾರೆ ಧಾರಾವಾಹಿಯಲ್ಲಿ, ಮಲ್ಲಿ ಮತ್ತು ಭೂಮಿಕಾ ಅವರ ಪ್ಲ್ಯಾನ್ ವಿಫಲವಾಗಿದೆ. ಮಧುರಾ ಪೊಲೀಸ್ ಎಂಬ ಸತ್ಯ ಮತ್ತು ತಮ್ಮನ್ನು ಟ್ರ್ಯಾಪ್ ಮಾಡುತ್ತಿರುವ ವಿಷಯ ಜೈದೇವನಿಗೆ ತಿಳಿದಿದ್ದು, ಅವರಿಬ್ಬರಿಗೂ ಗತಿ ಕಾಣಿಸಲು ಪಣತೊಟ್ಟಿದ್ದಾನೆ. ಇದರಿಂದ ಮುಂದೆ ದೊಡ್ಡ ಅನಾಹುತ ಕಾದಿದೆಯೇ ಎಂಬ ಕುತೂಹಲ ಮೂಡಿದೆ.
ಅಮೃತಧಾರೆ ಸೀರಿಯಲ್ನಲ್ಲಿ (Amruthadhaare Serial) ಮಲ್ಲಿ ಮತ್ತು ಭೂಮಿಕಾ ಪ್ಲ್ಯಾನ್ ಫ್ಲಾಪ್ ಆಗೋಗಿದೆ. ಇನ್ನೇನು ಕಾಣೆಯಾಗಿರುವ ದಿಯಾ ಮತ್ತು ಅನುವಿನ ರಹಸ್ಯ ತಿಳಿಯುವಷ್ಟರಲ್ಲಿಯೇ ಭಯಾನಕ ಘಟನೆಯೊಂದು ನಡೆದೋಯ್ತು!
26
ಮೂಢನಂಬಿಕೆ ನಿಜವಾಯ್ತು?
ಅಷ್ಟಕ್ಕೂ ವರಮಹಾಲಕ್ಷ್ಮಿ ಹಬ್ಬದ ದಿನ ಲಕ್ಷ್ಮಿ ದೇವಿಯ ಮುಡಿಲಿಗೆ ಇಟ್ಟಿದ್ದ ಹೂವಿನಿಂದ ಎಡಭಾಗದಲ್ಲಿ ಹೂವು ಬಿದ್ದಿತ್ತು. ಸಾಮಾನ್ಯವಾಗಿ ಹೀಗೆ ಆದರೆ ಅಪಶಕುನ ಎಂದೇ ಹೇಳಲಾಗುತ್ತದೆ. ಅದರಂತೆ ಶಕುಂತಲಾ ಕೂಡ ಗಾಬರಿಯಾಗಿದ್ದಳು. ಆದರೆ, ಭೂಮಿಕಾ ಹಾಗೇನೂ ಇಲ್ಲ, ಅವೆಲ್ಲಾ ನಂಬಿಕೆ ಅಷ್ಟೇ ಎಂದಿದ್ದಳು. ಆದರೆ ಈ ಮೂಢ ನಂಬಿಕೆ ಎಂದು ಏನು ಹೇಳಲಾಗುತ್ತೋ ಅದನ್ನೇ ಈಗ ನಿಜ ಎಂದು ತೋರಿಸಲಾಗಿದೆ!
36
ಜೈದೇವನಿಗೆ ಗುಟ್ಟು ತಿಳಿದೋಯ್ತು
ಅತ್ತ, ಜೈದೇವನಿಗೆ ತಮ್ಮ ಮನೆಗೆ ಬಂದಿರೋ ಮಧುರಾ, ಪೊಲೀಸ್ ಎಂದು ತಿಳಿದಿದೆ. ಅವಳ ಫೋನ್ ಚೆಕ್ ಮಾಡಿದಾಗ ರಹಸ್ಯ ಬಯಲಾಗಿದೆ. ಇದರಿಂದ ಆತ ಸಿಡಿದಿದ್ದಾನೆ.
ಅದೇ ಇನ್ನೊಂದೆಡೆ, ಶಕುಂತಲಾ ಕೈಗೆ ಮಲ್ಲಿ ಮತ್ತು ಭೂಮಿಕಾ ಜೈದೇವನನ್ನು ಟ್ರ್ಯಾಪ್ ಮಾಡುತ್ತಿರುವ ಮಷಿನ್ ಸಿಕ್ಕಿಹೋಗಿದೆ. ಆಕೆ ಜೈದೇವ್ಗೆ ಕಾಲ್ ಮಾಡಿ ವಿಷಯ ತಿಳಿಸಿದ್ದಾಳೆ.
56
ಗತಿ ಕಾಣಿಸುವ ಪಣ
ಇನ್ನು ಕೇಳಬೇಕೆ? ಮಲ್ಲಿ ಮತ್ತು ಭೂಮಿಕಾಗೆ ಒಂದು ಗತಿ ಕಾಣಿಸುವುದಾಗಿ ಜೈದೇವ್ ಪಣ ತೊಟ್ಟಿದ್ದಾನೆ. ಇನ್ನೇನು ಅನಾಹುತ ಆಗುತ್ತದೆಯೋ ಎನ್ನುವ ಹೆದರಿಗೆ ವೀಕ್ಷಕರಿಗೆ ಶುರುವಾಗಿದೆ.
66
ಮಧುರಂಗೂ ಡೌಟ್
ಅದೇ ಇನ್ನೊಂದೆಡೆ, ಮಧುರಂಗೂ ಡೌಟ್ ಬಂದಿದೆ. ಜೈದೇವ್ ತನ್ನ ಹಿಂದೆಯೇ ಬರುತ್ತಿರುವುದನ್ನು ಗಮನಿಸಿರುವ ಮಧುರಾ, ಅವರಿಗೆ ತನ್ನ ಬಗ್ಗೆ ತಿಳಿದಂತಿದೆ ಎಂದು ಮಲ್ಲಿ ಮತ್ತು ಭೂಮಿಕಾಗೆ ಹೇಳಿದ್ದಾಳೆ. ಇದರಿಂದ ಇಬ್ಬರೂ ತಪ್ಪಿಸಿಕೊಳ್ತಾರೋ ಅಥ್ವಾ ಅನಾಹುತ ಆಗುತ್ತದೆಯೋ ಎನ್ನುವುದು ಸದ್ಯಕ್ಕಿರುವ ಕುತೂಹಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.