ವರ್ಜಿನಿಯಾದಲ್ಲಿ ಶಾರ್ಟ್ಸ್- ಕ್ರಾಪ್ ಟಾಪಲ್ಲಿ ಸಾನ್ಯಾ ಅಯ್ಯರ್... ಹಾಲಿವುಡ್ ನಾಯಕಿ ತರ ಕಾಣಿಸ್ತೀರಿ ಎಂದ ಫ್ಯಾನ್ಸ್

First Published | Sep 2, 2024, 5:22 PM IST

ತಮ್ಮ ಚೊಚ್ಚಲ ಗೌರಿ ಸಿನಿಮಾದ ಖುಷಿಯಲ್ಲಿರೋ ಸಾನ್ಯಾ ಅಯ್ಯರ್, ಸದ್ಯ ಬ್ರೇಕ್ ತೆಗೆದುಕೊಂಡು ವಿದೇಶದಲ್ಲಿ ಟ್ರಾವೆಲ್ ಮಾಡ್ತಾ ಎಂಜಾಯ್ ಮಾಡ್ತಿದ್ದಾರೆ. 
 

ಕಿರುತೆರೆಯಲ್ಲಿ ಮಿಂಚಿದ ಸಾನ್ಯಾ ಅಯ್ಯರ್, (Saanya Iyer) ಮೊದಲ ಬಾರಿಗೆ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದು, ಸಮರ್ಜೀತ್ ಲಂಕೇಶ್ ಜೊತೆಗೆ ಗೌರಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದೂ ಆಗಿದೆ, ಆದ್ರೆ ಟ್ರೈಲರ್ ಮನರಂಜನೆ ನೀಡಿದಷ್ಟು ಸಿನಿಮಾ ಸಿನಿ ರಸಿಕರಿಗೆ ಅಷ್ಟೋಂದು ರುಚಿಸಿರಲಿಲ್ಲ. 
 

ಕಳೆದ ಕೆಲವು ಸಮಯದಿಂದ ಸಿನಿಮಾ, ಶೂಟಿಂಗ್ (Shooting), ಪ್ರಪೋಷನ್ ಗಳಲ್ಲೇ ಬ್ಯುಸಿಯಾಗಿದ್ದ ಸಾನ್ಯಾ ಅಯ್ಯರ್ ಇದೀಗ ಎಲ್ಲಾ ಕೆಲಸಗಳಿಂದ ಬ್ರೇಕ್ ತೆಗೆದುಕೊಂಡು ವಿದೇಶದಲ್ಲಿ ಟೂರ್ ಮಾಡುತ್ತಾ ಎಂಜಾಯ್ ಮಾಡ್ತಿದ್ದಾರೆ. 

Tap to resize

ಹೌದು, ಗೌರಿ ಸಿನಿಮಾ ರಿಲೀಸ್ ಆಗಿ ಕೊಂಚ ಮಟ್ಟಿಗೆ ಯಶಸ್ಸು ತಂದುಕೊಟ್ಟಿರೋದರಿಂದ ಖುಷಿಯಾಗಿರೋ ಸಾನ್ಯಾ, ಇದೀಗ ವರ್ಜಿನಿಯಾಕ್ಕೆ ಟ್ರಾವೆಲ್ ಮಾಡಿದ್ದು, ಅಲ್ಲಿನ ಬೀದಿ ಬೀದಿಯಲ್ಲಿ ಸುತ್ತುತ್ತಾ ಎಂಜಾಯ್ ಮಾಡ್ತಿದ್ದಾರೆ. 
 

ಕೆಂಪು ಬಣ್ಣದ ಕ್ರಾಪ್ ಟಾಪ್, ಡೆನಿಮ್ ಶಾರ್ಟ್ಸ್ ಧರಿಸಿರುವ ಸಾನ್ಯಾ, ಸೊಂಟಕ್ಕೆ ಕಪ್ಪು ಬಣ್ಣದ ಓವರ್ ಕೊಟ್ ಸುತ್ತಿದ್ದು, ಕಣ್ಣಲ್ಲಿ ಗಾಗಲ್ಸ್ ಇದೆ. ವರ್ಜೀನಿಯಾದ ರಿಚ್ಮಂಡ್ ನಲ್ಲಿ ಬೀದಿಯ ಕಾರ್ನರ್ ನಲ್ಲಿ ನಿಂತು ಸಖತ್ ಸ್ಟೈಲಿಶ್ ಆಗಿ ಪೋಸ್ ಕೊಟ್ಟಿರುವ ಸಾನ್ಯಾ I’M THAT GIRL! ಎಂದು ಬರೆದುಕೊಂಡಿದ್ದಾರೆ. 
 

ಸಾನ್ಯಾ ಸ್ಟೈಲಿಶ್ ಲುಕ್ ಗೆ (stylish look) ಫ್ಯಾನ್ಸ್ ಮನಸೋತಿದ್ದು, ಮೂಲೆಯಲ್ಲಿ ನಿಂತಿರೋ ರಾಣಿ, ಸದ್ಯದಲ್ಲಿ ಅಲ್ಲಿ ಜನ ಸೇರೋದು ಖಚಿತಾ. ಕ್ವೀನ್, ಈ ಜಗತ್ತೇ ನಿನ್ನದು, ಅದನ್ನ ಆಳು ಎಂದು ಕಾಮೆಂಟ್ ಮಾಡಿದ್ದಾರೆ, ಅಷ್ಟೇ ಅಲ್ಲ ಕಾವೇರಿಸುವ ವೈಯ್ಯಾರ ಅಂತಾನೂ ಕಾಮೆಂಟ್ ಮಾಡಿದ್ದಾರೆ. 
 

ಮತ್ತೊಂದಿಷ್ಟು ಜನ ಸಾನ್ಯಾ ಕ್ಲಾಸಿ, ಮಾಸ್ ಲುಕ್ ನಲ್ಲಿ ಬಾಸ್ ಲೇಡಿಯಂತೆ ಕಾಣಿಸ್ತಿದ್ದಾರೆ ಎಂದಿದ್ದಾರೆ. ಅಲ್ಲದೇ ಪುಟ್ಟ ಗೌರಿ ಮೇಡಂ ಸೂಪರ್ ಆಗಿದ್ದೀರಾ, ಸ್ಟೈಲಿಶ್ ಆಗಿದ್ದೀರಾ, ಸೆಕ್ಸಿ ಲುಕ್, ಇಂಗ್ಲಿಷ್ ಮೂವಿ ಹೀರೋಯಿನ್ ಥರ ಇದ್ದೀರಿ ಎಂದೆಲ್ಲಾ ಕಾಮೆಂಟ್ ಮಾಡಿ ಹೊಗಳಿದ್ದಾರೆ. 

ಸಾನ್ಯಾ ಅಯ್ಯರ್ ಬಾಲನಟಿಯಾಗಿ ಸೀರಿಯಲ್ ಮತ್ತು ಸಿನಿಮಾಗಳಲ್ಲಿ ಗುರುತಿಸಿದ ಬೆಡಗಿ, ನಂತರ ಬಿಗ್ ಬಾಸ್ ಒಟಿಟಿ ಮತ್ತು ಬಿಗ್ ಬಾಸ್ ಸೀಸನ್ 9ರ ಮೂಲಕ ಹೆಚ್ಚಿನ ಜನಪ್ರಿಯತೆ ಪಡೆದರು. ಇದೀಗ ಗೌರಿ ಸಿನಿಮಾದಲ್ಲಿ ನಾಯಕಿಯಾಗಿ ಸದ್ದು ಮಾಡ್ತಿದ್ದಾರೆ. 

Latest Videos

click me!