ಹಾಟೆಸ್ಟ್ ಅವತಾರದಲ್ಲಿ ಕಾಣಿಸಿಕೊಂಡು ಪಡ್ಡೆಗಳ ಹೃದಯದಲ್ಲಿ ಕಿಡಿ ಹಚ್ಚಿದ ಸಾನ್ಯಾ ಅಯ್ಯರ್

First Published | Nov 5, 2024, 11:54 AM IST

ಬಿಗ್ ಬಾಸ್ ಸೀಸನ್ 9ರಲ್ಲಿ ಸದ್ದು ಮಾಡಿದ್ದ ಸ್ಪರ್ಧಿ ಹಾಗೂ ಚಂದನವನದ ನಟಿ ಸಾನ್ಯಾ ಅಯ್ಯರ್ ಇದೀಗ ತಮ್ಮ ಹಾಟ್ ಲುಕ್ ಮೂಲಕ ಪಡ್ಡೆಗಳ ಹೃದಯದಲ್ಲಿ ಕಿಚ್ಚು ಹಚ್ಚಿದ್ದಾರೆ. 
 

ಪುಟ್ಟ ಗೌರಿಯ ಮದುವೆ ಸೀರಿಯಲ್ ನಲ್ಲಿ ಪುಟಾಣಿ ಗೌರಿಯಾಗಿ ಜನಪ್ರಿಯತೆ ಪಡೆದ ಸಾನ್ಯಾ ಅಯ್ಯರ್ (Saanya Iyer), ಈವಾಗ ಎಷ್ಟೊಂದು ಬದಲಾಗಿದ್ದಾರೆ ಅಂದ್ರೆ, ಸಖತ್ ಹಾಟ್ ಗೌರಿಯಾಗಿ ಸಂಚಲನ ಮೂಡಿಸುತ್ತಿರುತ್ತಾರೆ. ಇವರ ಹೊಸ ಹಾಟೆಸ್ಟ್ ಫೋಟೊಗಳು ಸದ್ಯ ಸದ್ದು ಮಾಡ್ತಿವೆ. 

ಪುಟ್ಟಗೌರಿಯ ಬಳಿಕ ವಿದ್ಯಾಭ್ಯಾಸದಲ್ಲಿ ಬ್ಯುಸಿಯಾಗಿದ್ದ ಸಾನ್ಯಾ ನಂತ್ರ ಬಿಗ್ ಬಾಸ್ ಓಟಿಟಿ ಮತ್ತು ಬಿಗ್ ಬಾಸ್ ಸೀಸನ್ 9 (Bigg Boss Season 9)ರಲ್ಲಿ ಸ್ಪರ್ಧಿಸಿ, ಕನ್ನಡಿಗರ ಮನ ಗೆದ್ದಿದ್ದರು. ಅದಾದ ನಂತ್ರ ಚಂದನವನಕ್ಕೆ ಎಂಟ್ರಿ ಕೊಟ್ಟು ಅಲ್ಲೂ ಕೂಡ ಸೈ ಎನಿಸಿದರು. 
 

Tap to resize

ಹೌದು ಇಂದ್ರಜಿತ್ ಲಂಕೇಶ್ ನಿರ್ದೇಶನದ ಗೌರಿ ಸಿನಿಮಾದಲ್ಲಿ ನಾಯಕಿಯಾಗಿ ಸಾನ್ಯಾ ಅಯ್ಯರ್ ನಟಿಸಿದ್ದರು. ಈ ಸಿನಿಮಾ ರಿಲೀಸ್ ಮುನ್ನ, ಹಾಡುಗಳಿಂದ ಸಖತ್ ಸದ್ದು ಮಾಡಿದ್ದು, ಆದರೆ ಸಿನಿಮಾ ಅಷ್ಟಾಗಿ ಹಿಟ್ ಆಗಿರಲಿಲ್ಲ. ಇದಾದ ನಂತ್ರ ಸಾನ್ಯಾ ವಿದೇಶದಲ್ಲಿ ಸುತ್ತಾಡುತ್ತಾ ಜೀವನವನ್ನು ಸಖತ್ ಆಗಿ ಎಂಜಾಯ್ ಮಾಡುತ್ತಿದ್ದರು. 
 

ಸೋಶಿಯಲ್ ಮೀಡಿಯಾದಲ್ಲಿ (Social Media) ತುಂಬಾನೆ ಆಕ್ಟೀವ್ ಆಗಿರುವ ಈ ಬೆಡಗಿ ಒಂದಲ್ಲ ಒಂದು ಫೋಟೊಗಳನ್ನು ಶೇರ್ ಮಾಡುತ್ತಾ, ಫ್ಯಾನ್ಸ್ ಜೊತೆ ಕನೆಕ್ಟ್ ಆಗುತ್ತಿರುತ್ತಾರೆ. ಇದೀಗ ತಮ್ಮ ಇನ್’ಸ್ಟಾಗ್ರಾಂ ನಲ್ಲಿ ಮಾದಕ ಭಂಗಿಯಲ್ಲಿ ಪೋಸ್ ಕೊಟ್ಟಿದ್ದು, ಇದನ್ನ ನೋಡಿ ಪಡ್ಡೆ ಹುಡುಗರ ಎದೆಯಲ್ಲಿ ಕಿಚ್ಚು ಹಚ್ಚಿಕೊಂಡಿದೆ ಅಂತಾನೆ ಹೇಲಾಬಹುದು. 
 

ಟ್ಯೂಬ್ ಟಾಪಲ್ಲಿ ಸಾನ್ಯಾ ಸಖತ್ ಹಾಟ್ ಆಗಿ ಕಾಣಿಸ್ತಿದ್ದಾರೆ. ಬ್ಲ್ಯಾಕ್ ಆಂಡ್ ವೈಟ್ ಫೋಟೊ ಇದಾಗಿದ್ದು, ವಿವಿಧ ಭಂಗಿಯ ಪೋಸ್, ಆ ಕಣ್ಣೋಟ, ಎಲ್ಲವೂ ಸೇರಿ, ಒಂದು ಮ್ಯಾಜಿಕ್ ಮಾಡಿರೋವಂತಿದೆ, ನಟಿಯ ಫೋಟೊಗಳಿಗೆ ಸಿಕ್ಕಾಪಟ್ಟೆ ಕಾಮೆಂಟ್ ಗಳು ಸಹ ಬಂದಿವೆ. 
 

ಹಾಟ್, ಹಾಟ್ನೆಸ್ ಓವರ್ ಲೋಡೆಡ್, ಕಣ್ಣಲ್ಲೇ ಕೊಲ್ಲುವ ಬೆಡಗಿ, ಬ್ಯೂಟಿ ಕ್ವೀನ್, ತುಂಬಾನೆ ಸುಂದರವಾಗಿ ಮತ್ತು ಹಾಟ್ ಆಗಿ ಕಾಣಿಸ್ತೀರಿ. ತುಂಬಾನೆ ಹಾಟ್ ಆಗಿದೆ ಎಂದು ಫೈರ್ ಇಮೋಜಿ ಸಹ ಕಾಮೆಂಟ್ ಮಾಡಿದ್ದಾರೆ, ಅಷ್ಟೇ ಅಲ್ಲ ನಿಮ್ಮ ಅಂದ ನೋಡಿದ್ರೆ ರಾತ್ರಿ ನಿದ್ದೆನೂ ಬರಲ್ಲ ಅಂತಿದ್ದಾರೆ ಪಡ್ಡೆಗಳು. 
 

Latest Videos

click me!