ನನ್ನ ಹೆಂಡತಿ ಮೊನಾಲಿಸಾ, ಮಿಸ್ ಇಂಡಿಯಾ ಮಿಸ್ ಯೂನಿವರ್ಸ್‌; ಮಾನಸ ಕಾಲೆಳೆದ ಟ್ರೋಲಿಗರಿಗೆ ಉತ್ತರ ಕೊಟ್ಟ ಸಂತು!

First Published | Nov 5, 2024, 3:29 PM IST

ಟ್ರೋಲಿಗರಿಗೆ ಖಡಕ್ ಉತ್ತರ ಕೊಟ್ಟ ತುಕಾಲಿ ಸಂತೋಷ್. ಜಗದ ನಿಯಮವನ್ನು ಎತ್ತಿ ಸಾರಿದ ಮಾಜಿ ಬಿಗ್ ಬಾಸ್ ಸ್ಪರ್ಧಿ..............

 ಬಿಗ್ ಬಾಸ್ ಸೀಸನ 10ರಲ್ಲಿ ಹಾಸ್ಯ ನಟ ತುಕಾಲಿ ಸಂತೋಷ್ ಸ್ಪರ್ಧಿಸಿ ಫಿನಾಲೆ ವಾರಕ್ಕೆ ಕಾಲಿಟ್ಟರು. ಈ ವರ್ಷ ಸೀಸನ್ 11ರಲ್ಲಿ ತುಕಾಲಿ ಪತ್ನಿ ಮಾನಸ ಸ್ಪರ್ಧಿಸಿ 5ನೇ ವಾರಕ್ಕೆ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. 

ಪಕ್ಕಾ ಹಳ್ಳಿ ಹುಡುಗಿ ಆಗಿರುವ ಮಾನಸ ಇನ್ನಿತರ ಸ್ಪರ್ಧಿಗಳ ಜೊತೆ ಹೊಂದಿಕೊಳ್ಳಲು ಕಷ್ಟವಾಗಲಿಲ್ಲ ಆದರೆ ವೀಕ್ಷಕರಲ್ಲಿ ಕೆಲವರಿಗೆ ಮಾನಸ ಮಾತನಾಡುವ ಶೈಲಿ ಮತ್ತು ಡ್ರೆಸ್ಸಿಂಗ್‌ ಬಗ್ಗೆ ಕೊಂಕು ಮಾತನಾಡಿದ್ದಾರೆ. 

Tap to resize

ಹೌದು! ಪಕ್ಕಾ ಹಳ್ಳಿ ಭಾಷೆಯಲ್ಲಿ ಮಾತನಾಡುವ ಮಾನಸ ತಮ್ಮ ಮಾತಿನ ಮೂಲಕ ಯಾರಿಗೆ ಬೇಸರ ಮಾಡಿದ್ದರೂ ಕ್ಷಮಿಸಿ ಎಂದು ಪದೇ ಪದೇ ಕೇಳುತ್ತಿದ್ದರು. ಆದರೆ ಹೊರಗಡೆ ಟ್ರೋಲಿಗರು ಅದನ್ನು ಅತಿರೇಕ ಮಾಡಿ ಆಕೆಯನ್ನು ಅತಿ ಕೇಳ ಮಟ್ಟದಲ್ಲಿ ಟ್ರೋಲ್ ಮಾಡಿದ್ದರು.

ಹೀಗಾಗಿ ಈ ವರ್ಷ ಸ್ಪರ್ಧಿಗಳಿಗೆ ಮನೆಯಿಂದ ಪತ್ರ ಬಂದಿತ್ತು. ಆ ಪಾತ್ರದಲ್ಲಿ ಸಂತು ಉತ್ತರ ಕೊಟ್ಟಿದ್ದರು.  'ಊರಲ್ಲಿ ಯಾರು ಏನೇ ಹೇಳಿದ್ದರೂ ನೀನು ನನ್ನ ಹೆಂಡತಿನೇ. ಈ ಪ್ರಪಂಚದಲ್ಲಿ ಹೆಂಡತಿಯನ್ನು ಪ್ರೀತಿಸುವ ಗಂಡನಿಗೆ ಆಕೆ ಕಪ್ಪಗಿದ್ದರೂ, ದಪ್ಪ ಇದ್ದರೂ, ಚೆನ್ನಾಗಿಲ್ಲ ಅಂದರೂ ಆಕೆನೇ ಐಶ್ವರ್ಯ ರೈ ಮೋನಾಲಿಸಾ ಮಿಸ್ ಇಂಡಿಯಾ ಮಿಸ್ ವರ್ಲ್ಡ್‌ ಆಗಿರುತ್ತಾಳೆ'

'ಆಕೆಗೂ ಕೂಡ ತನ್ನ ಗಂಡ ಹೇಗೆ ಇದ್ದರೂ ಮನ್ಮತಾ ತರ ಸುಂದರವಾಗಿಯೇ ಕಾಣಿಸುತ್ತಾನೆ ಇದು ಜಗನ ನಿಯಮ. ಇದನ್ನು ಯಾಕೆ ಹೇಳುತ್ತಿದ್ದೀನಿ ಅಂತ ಯೋಚನೆ ಮಾಡ್ತಾ ಇದ್ಯಾ? ನಿಮ್ಮ ಮೂಲಕ ಕೆಲವರಿಗೆ ಹೇಳಬೇಕಿತ್ತು ಅಷ್ಟೇ' ಎಂದು ಬರೆದಿದ್ದರು. 

ಪತ್ರ ಓದಿದ ವಾರವೇ ಮಾನಸ ಎಲಿಮಿನೇಟ್ ಆಗಿ ಹೊರ ಬಂದಾಗಲೂ ಕ್ಷಮೆ ಕೇಳಿದ್ದಾರೆ. ಆಗ ಮಾನಸ ಪರ ಸಂತು ಧ್ವನಿ ಎತ್ತಿದ್ದಾರೆ. ಟ್ರೋಲ್ ಮಾಡುವವರಿಗೆ ಮತ್ತೊಮ್ಮೆ ಉತ್ತರ ಕೊಟ್ಟಿದ್ದಾರೆ.

ಅಳಬೇಡ ಮಾನಸ, ನನಗೆ ನೀನು ಯಾವಾಗಲೂ , ಮೊನಸಲೀಸಾ, ಮಿಸ್‌ ಇಂಡಿಯಾ, ಮಿಸ್‌ ಯೂನಿರ್ವ್ ಆಗಿರುತ್ತೀಯಾ. ನಿನ್ನನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡಲ್ಲ. ನೀನು ಸಾಧಿಸಿದ್ದೀಯಾ. ಏನೋ ಒಂದು ಮಾತಾಡುವ ಭರದಲ್ಲಿ ನನ್ನ ಹೆಂಡತಿಯಿಂದ ಕೆಲವು ಪದಗಳು ಬಂದಿರಬಹುದು. 

ಎಲ್ಲೋ ತಪ್ಪಾಗಿರಬಹುದು. ಆದರೆ ಆಕೆ ಇರುವ ಶೈಲಿಯೇ ಹಾಗೆ. ಆಕೆ ಒಂದು ಮಗು ತರ ಹಿಂದೆ ಮುಂದೆ ಏನೂ ಗೊತ್ತಿಲ್ಲ. ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ ತುಕಾಲಿ ಸಂತೋಷ್ 

Latest Videos

click me!