30ನೇ ವಸಂತಕ್ಕೆ ಕಾಲಿಟ್ಟ ಮಯೂರಿ, ತಮಗೆ ತಾವೇ ವಿಶ್ ಮಾಡ್ಕೊಂಡು, ಕೇಕ್ ಕಟ್ ಮಾಡಿ ಸಂಭ್ರಮಿಸಿದ ನಟಿ!

First Published | Jul 11, 2024, 4:24 PM IST

ನನ್ನ ದೇವ್ರು ಸೀರಿಯಲ್ ಮೂಲಕ ಕಿರುತೆರೆಗೆ ಕಂ ಬ್ಯಾಕ್ ಮಾಡಿರುವ ನಟಿ ಮಯೂರಿ ಕ್ಯಾತರಿ ಇಂದು ತಮ್ಮ 30ನೇ ಹುಟ್ಟು ಹಬ್ಬ ಆಚರಿಸಿಕೊಳ್ತಿದ್ದಾರೆ. ಒಂಟಿಯಾಗಿ ಕೇಕ್ ಕಟ ್ ಮಾಡಿಕೊಂಡಿರುವ ಫೋಟೋ ಶೇರ್ ಮಾಡಿ ಕೊಂಡಿದ್ದು, ಹಲವು ಕಮೆಂಟ್ಸ್ ಬಂದಿವೆ. 
 

ಅಶ್ವಿನಿ ನಕ್ಷತ್ರ ಸೀರಿಯಲ್ ನಲ್ಲಿ ಅಶ್ವಿನಿಯಾಗಿ ಕರ್ನಾಟಕದಾದ್ಯಂತ ಜನಪ್ರಿಯತೆ ಪಡೆದ ನಟಿ ಮಯೂರಿ ಕ್ಯಾತರಿ (Mayuri Kyatri) ಇವತ್ತು ಜುಲೈ 11 ರಂದು ತಮ್ಮ 30 ವರ್ಷದ ಹುಟ್ಟುಹಬ್ಬವನ್ನ ಆಚರಿಸಿಕೊಳ್ತಿದ್ದಾರೆ. 
 

ತಮ್ಮ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇನ್ ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಮಯೂರಿ ಹ್ಯಾಪಿ ಬರ್ತ್ ಡೇ ಟು ಮಿ ಎಂದು ತಮಗೆ ತಾವೇ ವಿಶ್ ಮಾಡಿಕೊಂಡಿದ್ದಾರೆ. Happy birthday to me. Oh thirties, Thank you everyone) ಎಂದು ಕ್ಯಾಪ್ಶನ್ ಹಾಕಿಕೊಂಡಿದ್ದಾರೆ. 
 

Tap to resize

ಪರ್ಪಲ್ ಬಣ್ಣದ ಮಿನಿ ಡ್ರೆಸ್ ಧರಿಸಿ, ಪರ್ಪಲ್ ಹೂವುಗಳನ್ನು ಕೈಯಲ್ಲಿ ಹಿಡಿದು ಪೋಸ್ ನೀಡುತ್ತಾ, ಸಮುದ್ರ ಅಲೆಗಳ ಮೇಲೆ ನಡೆದಾಡುವ, ಕೇಕ್ ಕತ್ತರಿಸುವ ಮುದ್ದಾದ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ನಟಿ ಶುಭಾಶಯಗಳ (birthday wishes)ಮಹಾಪೂರವನ್ನೆ ಹರಿಸಿದ್ದಾರೆ. 
 

ಅಶ್ವಿನಿ ನಕ್ಷತ್ರದ (Ahwini Nakshatra) ಬಳಿಕ ಸಿನಿಮಾದ ಕಡೆಗೆ ಮುಖ ಮಾಡಿದ್ದ ನಟಿ ಮಯೂರಿ, ಇಷ್ಟ ಕಾಮ್ಯ, ಕರಿಯ 2, ನಟರಾಜ ಸರ್ವೀಸ್, ಕೃಷ್ಟ ಲೀಲಾ, ವೀಲ್ ಚೇರ್ ರೋಮಿಯೋ, ನನ್ನ ಪ್ರಕಾರ ಮೊದಲಾದ ಸಿನಿಮಾಗಳಲ್ಲಿ ನಾಯಕಿಯಾಗಿ ಹಾಗೂ ಒಂದಿಷ್ಟು ಸಿನಿಮಾಗಳಲ್ಲಿ ಸಹ ನಟಿಯಾಗಿಯೂ ನಟಿಸಿದ್ದರು. 
 

ಹತ್ತು ವರ್ಷಗಳಿಂದ ಪ್ರೀತಿಸಿ, ಲಾಕ್ ಡೌನ್ ಸಂದರ್ಭದಲ್ಲಿ ಅರುಣ್ ರಾಜ್ ಜೊತೆಗೆ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ ಮಗು ಆದ ಬಳಿಕ ನಟಿ ನಟನೆಯಿಂದ ದೂರವೇ ಉಳಿದಿದ್ದರು, ನಂತರ ಕಂ ಬ್ಯಾಕ್ ಮಾಡಿದ್ದು ಬಿಗ್ ಬಾಸ್ ಸೀಸನ್ 9 ರ ಮೂಲಕ. 
 

ಬಿಗ್ ಬಾಸ್ ಸೀಸನ್ 9ರಲ್ಲಿ ಒಂದೆರಡು ವಾರಗಳಷ್ಟೇ ಇದ್ದ ನಟಿ, ಅಲ್ಲಿಂದ ಬೇಗ ಹೊರ ಬಂದಿದ್ದರು, ಇದಾದ ಬಳಿಕ ಕೆಲವೊಂದು ಸೀರಿಯಲ್ ಗಳಲ್ಲಿ, ಕಾರ್ಯಕ್ರಮಗಳಲ್ಲಿ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಸಿರಿಯಲ್ ನನ್ನ ದೇವರು ಮೂಲಕ ಮತ್ತೆ ಕಂ ಬ್ಯಾಕ್ ಮಾಡಿದ್ದಾರೆ. 
 

ಇನ್ನು ಇತ್ತೀಚೆಗಷ್ಟೇ ನಟಿಯ ವಿಚ್ಚೇದನದ ವಿಷಯ ಭಾರಿ ಸದ್ದು ಮಾಡುತ್ತಿತ್ತು. ಆದರೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ನಟಿ ಎಲ್ಲಾ ಗಾಳಿ ಸುದ್ದಿ, ನಾನು ಚೆನ್ನಾಗಿದ್ದೇನೆ, ನನ್ನ ಜೀವನ ಚೆನ್ನಾಗಿದೆ ಎನ್ನುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದರು. 
 

ಮಯೂರಿ ವಿಚ್ಚೇದನ ಸುದ್ದಿ ಕೇಳಿ ಬರೋಕೆ ಮುಖ್ಯ ಕಾರಣ ಆಕೆಯ ಇನ್ ಸ್ಟಾಗ್ರಾಂನಲ್ಲಿ ಗಂಡನ ಜೊತೆಗಿನ ಎಲ್ಲಾ ಫೋಟೋಗಳನ್ನೂ ಡಿಲೀಟ್ ಮಾಡಲಾಗಿದೆ. ಅಲ್ಲದೇ ಮಯೂರಿ ಮತ್ತು ಅರುಣ್ (Arun Raju) ಸದ್ಯ ಒಬ್ಬರನ್ನೊಬ್ಬರು ಫಾಲೋ ಕೂಡ ಮಾಡುತ್ತಿಲ್ಲ. ಮಯೂರಿ ಮ್ಯಾನೇಜ್ ಮಾಡುತ್ತಿರೋ ಮಗನ ಇನ್ಸ್ಟಾಗ್ರಾಂ ಖಾತೆಯಲ್ಲೂ ಅರುಣ್ ರನ್ನು ಫಾಲೋ ಮಾಡ್ತಿಲ್ಲ. ಇನ್ನು ಮಯೂರಿ ಇಲ್ಲಿ ಬರ್ತ್ ಡೇ ಸಂಭ್ರಮಿಸುತ್ತಿದ್ದರೆ, ಅರುಣ್ ವಿದೇಶದಲ್ಲಿ ಟ್ರಾವೆಲ್ ಮಾಡ್ತಾ ಎಂಜಾಯ್ ಮಾಡ್ತಿದ್ದಾರೆ. 

Latest Videos

click me!